Thursday, 12th December 2024

ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ನಿರ್ದೇಶಕನಿಗೆ ‘ವೈ’ ಕ್ಯಾಟಗರಿ ಭದ್ರತೆ

ನವದೆಹಲಿ: ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಸಿಆರ್ ಪಿಎಫ್ ಕವರ್ ಪ್ಯಾನ್ ಇಂಡಿಯಾ ದೊಂದಿಗೆ ‘ವೈ’ ಕ್ಯಾಟಗರಿ ಭದ್ರತೆ ನೀಡಲಾಗಿದೆ ಎಂದು ವರದಿಯಾಗಿದೆ.

ಕಳೆದ ವಾರ ‘ದಿ ಕಾಶ್ಮೀರ್ ಫೈಲ್ಸ್’ ತೆರೆಗೆ ಅಪ್ಪಳಿಸಿದ ನಂತರ ಅಗ್ನಿಹೋತ್ರಿ ಸುದ್ದಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿಯೇ ಅವರಿಗೆ ವೈ ಕ್ಯಾಟಗರಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.

ದಿ ಕಾಶ್ಮೀರಿ ಫೈಲ್ಸ್ ಚಿತ್ರ, ದೇಶಾದ್ಯಂತ ಬಹುದೊಡ್ಡ ಹವಾ ಸೃಷ್ಠಿಸಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ಕೂಡ ಘೋಷಣೆ ಮಾಡಲಾಗಿದೆ.