Friday, 22nd November 2024

Yanomami Tribe: ಸತ್ತವರ ಮೂಳೆಗಳಿಂದಲೇ ಸೂಪ್ ತಯಾರಿಸಿ ಕುಡಿಯುತ್ತಾರೆ! ಏನಿದು ವಿಚಿತ್ರ ಸಂಪ್ರದಾಯ?

Yanomami Tribe

ಪ್ರಪಂಚದ ಅನೇಕ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ.  ಅವರು ಕೆಲವು ವಿಚಿತ್ರವಾದ ಆಚರಣೆಗಳನ್ನು, ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಕೆಲವು ಬುಡಕಟ್ಟು ಜನಾಂಗದವರು ತಮ್ಮ ಮೃತ ಸಂಬಂಧಿಕರ ಸುಟ್ಟ ಮೂಳೆಗಳನ್ನು ಪುಡಿಮಾಡಿ ಅದರಿಂದ ಸೂಪ್‍ ತಯಾರಿಸಿ ಕುಡಿಯುತ್ತಾರಂತೆ. ಇದನ್ನು ಕೇಳಿದರೆ ನಿಮಗೆ ಶಾಕ್ ಆಗಬಹುದು. ಆದರೂ ಇದು ನಿಜ. ಹಾಗಾದರೆ ಆ ಬುಡಕಟ್ಟಿನವರ (Yanomami Tribe) ಬಗ್ಗೆ ಮಾಹಿತಿ ಇಲ್ಲಿದೆ.

Yanomami Tribe

ಯನೋಮಾಮಿ ಬುಡಕಟ್ಟು ಮತ್ತು ಅವರ ವಿಶಿಷ್ಟ ಸಂಪ್ರದಾಯ
ದಕ್ಷಿಣ ಅಮೆರಿಕದ ದಟ್ಟವಾದ ಕಾಡುಗಳಲ್ಲಿ, ವಿಶೇಷವಾಗಿ ಉತ್ತರ ಬ್ರೆಜಿಲ್ ಮತ್ತು ದಕ್ಷಿಣ ವೆನೆಜುವೆಲಾದಲ್ಲಿ, ಯನೋಮಾಮಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಈ ಜನರು ಅಮೆಜಾನ್ ಮಳೆಕಾಡಿನ ಅಂಚಿನಲ್ಲಿ ವಾಸವಾಗಿದ್ದು, ವಿಶಿಷ್ಟ ಜೀವನವನ್ನು ನಡೆಸುತ್ತಾರೆ. ಅವರ ಸಂಸ್ಕೃತಿಯಲ್ಲಿ ಅನೇಕ ವಿಚಿತ್ರ ಪದ್ಧತಿಗಳಿವೆ.ಈ ಬುಡಕಟ್ಟು ಜನಾಂಗದವರು ಅವರ ಕುಟುಂಬದಲ್ಲಿ ಯಾರಾದರೂ ಸತ್ತಾಗ ಅವರ ಮೂಳೆಗಳಿಂದ ಸೂಪ್ ತಯಾರಿಸಿ ಕುಡಿಯುತ್ತಾರಂತೆ. ಈ ಬುಡಕಟ್ಟಿನ ಜನರು ಸಾಮಾನ್ಯವಾಗಿ ಬಟ್ಟೆಗಳನ್ನು ಧರಿಸುವುದಿಲ್ಲ ಮತ್ತು ಅವರ ಜೀವನಶೈಲಿ ಕೂಡ ತುಂಬಾ ಸರಳವಾಗಿದೆಯಂತೆ.ಈ ಜನರು ಬೇಟೆ ಮತ್ತು ಕೃಷಿಯನ್ನು ಅವಲಂಬಿಸಿದ್ದಾರಂತೆ.

ಚಿತಾಭಸ್ಮದ ಮೂಳೆಯಿಂದ  ಮಾಡಿದ ಸೂಪ್
ಈ ಬುಡಕಟ್ಟು ಸಮುದಾಯಗಳು ತಮ್ಮ ಸಂಬಂಧಿಕರ ಸಾವಿನ ನಂತರ ಬಹಳ ವಿಶಿಷ್ಟವಾದ ರೀತಿಯಲ್ಲಿ ಅಂತ್ಯಕ್ರಿಯೆಯನ್ನು ಮಾಡುತ್ತಾರೆ. ಈ ಆಚರಣೆಯಲ್ಲಿ, ಅವರು ಸತ್ತ ವ್ಯಕ್ತಿಯ ಚಿತಾಭಸ್ಮದಿಂದ ಮೂಳೆಗಳನ್ನು ತೆಗೆದುಕೊಂಡು ಅದರಿಂದ  ಸೂಪ್ ತಯಾರಿಸಿ ನಂತರ ಅದನ್ನು ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ಅವರು ಅಗಲಿದ ತಮ್ಮವರ ಆತ್ಮವನ್ನು ರಕ್ಷಿಸುತ್ತಾರೆ ಮತ್ತು ಅವರಿಗೆ ಶಾಂತಿಯನ್ನು ನೀಡುತ್ತಾರೆ ಎಂಬ ನಂಬಿಕೆ. ಅಲ್ಲದೇ ಈ ಸಮುದಾಯವು ಸಾವನ್ನು ಜೀವನದ ಕೊನೆ ಎಂದು ಭಾವಿಸುವುದಿಲ್ಲ,  ಬದಲಾಗಿ ಹೊಸ ರೂಪದಲ್ಲಿ ಜೀವನದ ಪ್ರಾರಂಭವೆಂದು ಪರಿಗಣಿಸುತ್ತಾರೆ.

Yanomami Tribe

ಶವದ ಬೂದಿ ಸೂಪ್ ತಯಾರಿಸುವ ಹಿನ್ನೆಲೆ
ಈ ಬುಡಕಟ್ಟು ಸಮುದಾಯಗಳು ಸಾವನ್ನು ನೈಸರ್ಗಿಕವೆಂದು ಭಾವಿಸುವುದಿಲ್ಲ, ಬದಲಾಗಿ  ತಮ್ಮ ಶತ್ರು ಸಮುದಾಯದ ಮಾಟಗಾರರು ಕಳುಹಿಸಿದ ದುಷ್ಟ ಶಕ್ತಿಗಳ ದಾಳಿಯಿಂದ ಸತ್ತಿದ್ದಾರೆ ಎಂದು ಭಾವಿಸುತ್ತಾರಂತೆ. ಇನ್ನು ಮೃತ ದೇಹವನ್ನು ಸುಟ್ಟು ಅದರ ಮೂಳೆಯಿಂದ ಸೂಪ್ ಮಾಡಿ ಕುಡಿದು ತಮ್ಮ ಪ್ರೀತಿಪಾತ್ರರ ಆತ್ಮಗಳನ್ನು ರಕ್ಷಿಸಿದ್ದೇವೆ ಎಂಬುದು ಅವರ ನಂಬುಗೆ.

ಆತ್ಮಕ್ಕೆ ಶಾಂತಿ ನೀಡುವ ವಿಶಿಷ್ಟ ಮಾರ್ಗ
ಯನೋಮಾಮಿ ಬುಡಕಟ್ಟು ಸಮುದಾಯಗಳು ತಮ್ಮ ಮೃತ ಸಂಬಂಧಿಕರ ಶವಗಳನ್ನುತಕ್ಷಣ ದಹನ ಮಾಡುವುದಿಲ್ಲ.  ಸುಮಾರು ಒಂದು ತಿಂಗಳ ಕಾಲ ಎಲೆಗಳಿಂದ ಮುಚ್ಚಿದ ಹತ್ತಿರದ ಕಾಡಿನಲ್ಲಿ ಇಡುತ್ತಾರೆ. ಈ ಅವಧಿಯ ನಂತರ, ಅವರು ಶವದಿಂದ ಮೂಳೆಗಳನ್ನು ತೆಗೆದು ಸುಡುತ್ತಾರೆ. ಮೂಳೆಗಳನ್ನು ಸುಟ್ಟ ನಂತರ ಸಿಗುವ ಬೂದಿಯನ್ನು ಬಾಳೆಹಣ್ಣುಗಳೊಂದಿಗೆ ಬೆರೆಸಿ ವಿಶೇಷ ರೀತಿಯ ಸೂಪ್ ತಯಾರಿಸುತ್ತಾರಂತೆ. ಇದನ್ನು ಸಮುದಾಯದ ಎಲ್ಲಾ ಸದಸ್ಯರು ಒಟ್ಟಿಗೆ ಕುಡಿಯುತ್ತಾರೆ. ಈ ಕಾರ್ಯವಿಧಾನವು ಮೃತ ವ್ಯಕ್ತಿಯ ಆತ್ಮವನ್ನು ಗೌರವಿಸಲು ಮತ್ತು ಅವನಿಗೆ ಶಾಂತಿಯನ್ನು ನೀಡಲು ಇರುವ ಒಂದು ಮಾರ್ಗವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ:ರಂಗೋಲಿ ಹಾಕುತ್ತಿದ್ದ ಹುಡುಗಿಯರ ಮೇಲೆ ಕಾರು ಹತ್ತಿಸಿದ ಬಾಲಕ; ಸ್ಥಿತಿ ಗಂಭೀರ

ಈ ಬುಡಕಟ್ಟು ಜನಾಂಗದವರು ಸುಮಾರು 200 ರಿಂದ 250 ಹಳ್ಳಿಗಳಲ್ಲಿ ಇದ್ದಾರೆ ಮತ್ತು ಈ ವಿಚಿತ್ರ ಸಂಪ್ರದಾಯವನ್ನು ಅವರು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬರುತ್ತಿದ್ದಾರೆ.