Sunday, 13th October 2024

ನಾನು ಯಾವುದೇ ಪಕ್ಷ ಸೇರಲ್ಲ, ಪಕ್ಷೇತರನಾಗಿ ಉಳಿಯುತ್ತೇನೆ: ಯಶವಂತ್ ಸಿನ್ಹಾ

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಪರಾಜಿತಗೊಂಡ ಬಳಿಕ ಹಿರಿಯ ಮುಖಂಡ ಯಶವಂತ್ ಸಿನ್ಹಾ, ನಾನು ಯಾವುದೇ ಪಕ್ಷವನ್ನು ಸೇರುವುದಿಲ್ಲ, ಪಕ್ಷೇತರನಾಗಿ ಉಳಿಯುತ್ತೇನೆ ಎಂದು ಯಶವಂತ್ ಸಿನ್ಹಾ ಘೋಷಿಸಿದ್ದಾರೆ.

2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುರ್ಮು ಸ್ಪರ್ಧಿಸಿದ್ದರು. ಯುಪಿಎ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಕಣದಲ್ಲಿದ್ದರು.

ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆ ದರು. ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಮುಂದಿನ ರಾಷ್ಟ್ರಪತಿ ಯಾಗಿ ಜು.25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಿದರು.

ಕೇಂದ್ರದ ಮಾಜಿ ಸಚಿವ, 84 ವರ್ಷ ವಯಸ್ಸಿನ ಯಶವಂತ್ ಸಿನ್ಹಾ, “ನಾನು ಸ್ವತಂತ್ರವಾಗಿ ಉಳಿಯುತ್ತೇನೆ ಮತ್ತು ಬೇರೆ ಯಾವುದೇ ಪಕ್ಷವನ್ನು ಸೇರುವು ದಿಲ್ಲ” ಎಂದು ತಿಳಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಸಿನ್ಹಾ, ಮೋದಿ ಸರ್ಕಾರದ ನಿಲುವುಗಳನ್ನು ಹಲವು ಬಾರಿ ಖಂಡಿಸಿದ್ದಾರೆ.

1984 ರಿಂದ 1991 ತನಕ ಹಾಗೂ ನಂತರ 2018ರಲ್ಲಿ ಪಕ್ಷ ತೊರೆಯುವ ತನಕ ಬಿಜೆಪಿ ಹಿರಿಯ ಮುಖಂಡರಾಗಿ ಗುರುತಿಸಿ ಕೊಂಡವರು.