ನವದೆಹಲಿ: ದೆಹಲಿಯ ತಿಹಾರ್ ಜೈಲಿನಲ್ಲಿ ಉಪವಾಸ ಕೂತಿದ್ದ ಭಯೋತ್ಪಾದಕ ಯಾಸಿನ್ ಮಲಿಕ್ ರಕ್ತದೊತ್ತಡದಲ್ಲಿ ಏರುಪೇರಾದ ಪರಿಣಾಮ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಮಲಿಕ್ (56) ರುಬೈಯಾ ಸಯೀದ್ ಅಪಹರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಮ್ಮು ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಬೇಕು ಎಂಬ ಅವರ ಮನವಿಗೆ ಕೇಂದ್ರವು ಸ್ಪಂದಿಸದ ಬಳಿಕ ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದ ಎನ್ನಲಾಗ್ತಿದೆ.
ತಿಹಾರ್‌ನ ಹೈ-ರಿಸ್ಕ್ ಸೆಲ್‌ನಲ್ಲಿ ಏಕಾಂತ ಬಂಧನದಲ್ಲಿದ್ದ ಕಾಶ್ಮೀರಾ ಪ್ರತ್ಯೇಕತಾವಾದಿಯನ್ನ ಜೈಲಿನ ವೈದ್ಯಕೀಯ ತನಿಖಾ (ಎಂಐ) ಕೊಠಡಿಗೆ ಸ್ಥಳಾಂತರಿಸಿ 4 ದ್ರವಗಳನ್ನ ನೀಡಲಾಗಿತ್ತು.