ಆದರೂ, ಕಪೂರ್ ಜೈಲಿನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಅವರ ಮೇಲೆ ಇತರ ಪ್ರಕರಣಗಳಿದ್ದು, ಅದರ ಫಲಿತಾಂಶ ಇನ್ನೂ ಹೊರ ಬರಬೇಕಿದೆ. ಪ್ರಸ್ತುತ ಅವರನ್ನು ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ.
ವರದಿಗಳ ಪ್ರಕಾರ, ತನಿಖೆ ನಡೆಯುತ್ತಿದೆ ಎಂಬ ಕೇಂದ್ರೀಯ ತನಿಖಾ ದಳದ (ಸಿಬಿಐ) ಉತ್ತರದ ಮೇರೆಗೆ ಹೆಚ್ಚಿನ ಸೆರೆವಾಸವನ್ನು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಾ ಲಯ ಹೇಳಿದೆ.
ಎಚ್‌ಡಿಐಎಲ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕಪೂರ್ ಮತ್ತು ಅವರ ಕುಟುಂಬ ಸದಸ್ಯರು ದೊಡ್ಡ ಮೊತ್ತದ ಸಾಲಗಳನ್ನು ನೀಡಿದ್ದಕ್ಕಾಗಿ 4,300 ಕೋಟಿ ರೂಪಾಯಿಗಳ ಲಾಭವನ್ನು ಪಡೆದಿದ್ದಾರೆ ಎಂದು ಆರೋಪಿಸಿದೆ. ಎಚ್‌ಡಿಐಎಲ್‌ಗೆ ಯೆಸ್ ಬ್ಯಾಂಕ್ ಮಂಜೂರು ಮಾಡಿದ 200 ಕೋಟಿ ರೂಪಾಯಿ ಮೊತ್ತದ ಆರು ಸಾಲಗಳಿಗೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ಆರೋಪದ ಮೇಲೆ ರಾಣಾ ಅವರನ್ನು ಇಡಿ ತನಿಖೆ ನಡೆಸುತ್ತಿದೆ.