Monday, 16th September 2024

ಜಾನ್ಸಿಯಲ್ಲಿ ಸ್ಟ್ರಾಬೆರ್ರಿ ಮಹೋತ್ಸವ ಉದ್ಘಾಟಿಸಿದ ಸಿಎಂ ಯೋಗಿ

ಲಕ್ನೋ: ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ವಾಸ್ತವಕ್ಕೆ ಬದಲಿ ಸುವ ಸರ್ಕಾರದ ಸಂಕಲ್ಪವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವ್ಯಕ್ತಪಡಿಸಿದ ಅವರು ಜಾನ್ಸಿಯಲ್ಲಿ ಹಮ್ಮಿಕೊಂಡಿರುವ ಸ್ಟ್ರಾಬೆರ್ರಿ ಮಹೋತ್ಸವವನ್ನು ಡಿಜಿಟಲ್ ತಂತ್ರಜ್ಞಾನ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ನವೀನ ಪ್ರಯತ್ನಗಳನ್ನು ಹಾಗೂ ಅಗತ್ಯ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಕೃಷಿಕರನ್ನು ಆರ್ಥಿಕ ಸದೃಢರನ್ನಾಗಿಸುವ ಪ್ರಧಾನಿ ಅವರ ಕನಸನ್ನು ನನಸಾಗಿಸಲಾಗುವುದು. ಅದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು. ನವೀನ ಕೃಷಿ ಪದ್ಧತಿಗಳ ಬಗ್ಗೆ ಅಧಿಕಾರಿಗಳು ಸೂಕ್ತ ಹಾಗೂ ದೃಢ ಕ್ರಮಗಳನ್ನು ಅನುಸರಿಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸ ಬೇಕು. ಜಾನ್ಸಿ ಸ್ಟ್ರಾಬೆರ್ರಿ ಮಹೋತ್ಸವ ಕೃಷಿಯಲ್ಲಿ ಒಂದು ರಚನಾತ್ಮಕ ಹಾಗೂ ನವೀನ ಪ್ರಯತ್ನವಾಗಿದೆ. ಈ ಮಹೋತ್ಸವ ರಾಜ್ಯಕ್ಕೆ ಮತ್ತು ದೇಶಕ್ಕೆ ಹೊಸ ಸಂದೇಶ ರವಾನಿಸಲಿದೆ.

ಸ್ಟ್ರಾಬೆರ್ರಿ ಮಹೋತ್ಸವದಿಂದ ಸುಲ್ತಾನ್‍ಪುರದ ಡ್ರಾಗನ್ ಫ್ರೂಟ್, ಸಿದ್ಧಾರ್ಥನಗರದ ಕಾಲ ನಮಕ್ ರೈಸ್, ಚಂದೌಲಿಯ ಬ್ಲಾಕ್ ರೈಸ್, ಬಾರಬಂಕಿಯ ತರಕಾರಿಗಳು, ಕೌಶಾಂಬಿ ಮತ್ತು ಅಲಹಾಬಾದ್‍ನ ಸೀಬೆ ಹಣ್ಣು, ಪಶ್ಚಿಮ ಯುಪಿ ಜಿಲ್ಲೆಗಳ ಸಾವಯವ ಬೆಲ್ಲ ಹಾಗೂ ಕುಶಿನಗರದ ಬಾಳೆಹಣ್ಣುಗೆ ಉತ್ತೇಜನ ದೊರೆಯಲಿದೆ ಎಂದು ನುಡಿದರು.

Leave a Reply

Your email address will not be published. Required fields are marked *