ನವದೆಹಲಿ: ಸಮಾಜ ಸುಧಾರಕ ಜ್ಯೋತಿರಾವ್ ಪುಲೇ ಅವರ ಜನ್ಮ ದಿನಾಚರಣೆಗೆ ಪ್ರಯುಕ್ತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಶುಭಾಷಯ ಕೋರಿದ್ದು, ಮುಂದಿನ ಪೀಳಿಗೆ ಸಮಾಜ ಸುಧಾರಣೆ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.
ಪುಲೆ ಅವರು ತತ್ವಜ್ಞಾನಿ, ಉತ್ತಮ ಚಿಂತನಕಾರರು, ಲೇಖಕರು ಹಾಗೂ ಮಹಿಳಾ ಸುಧಾರಣೆ ತಮ್ಮ ಜೀವವನ್ನೆ ಮುಡಿಪಾಗಿಟ್ಟಿ ದ್ದರು ಎಂದು ಬಣ್ಣಿಸಿದ್ದಾರೆ.
1827ರಲ್ಲಿ ಮಹಾರಾಷ್ಟ್ರದಲ್ಲಿ ಹಿಂದುಳಿದ ಜಾತಿಯಲ್ಲಿ ಜನಿಸಿದ ಪುಲೆ ಅವರು ಸಮಾಜದಲ್ಲಿದ್ದ ತಾರತಮ್ಯ ನೀತಿ ವಿರುದ್ಧ ಸಿಡಿದೆದ್ದು ಕೆಳಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದ ಜನಾಂಗದವರಿಗೆ ವಿದ್ಯಾರ್ಜನೆ ಬಗ್ಗೆ ಅರಿವು ಮೂಡಿಸಿದ್ದರು. ಪುಲೆ ಹಾಗೂ ಅವರ ಪತ್ನಿ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿಯೂ ಮಹತ್ತರ ಪಾತ್ರ ನಿರ್ವಹಿಸಿದ್ದರು ಎಂದು ಅವರು ಗುಣಗಾನ ಮಾಡಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ