Sunday, 15th December 2024

6 ಯೂಟ್ಯೂಬ್‌ ಚಾನೆಲ್‌ ಗಳ ಮೇಲೆ ನಿರ್ಬಂಧ

ವದೆಹಲಿ: ಖಲಿಸ್ತಾನ್‌ ಭಾವನೆಗಳ ಪರ ಪ್ರಚಾರದ ವಿಡಿಯೋಗಳನ್ನು ಹಾಕಿದ ಪರಿಣಾಮ ಕನಿಷ್ಠ 6 ಯೂಟ್ಯೂಬ್‌ ಚಾನೆಲ್‌ ಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.

ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಈ ಬಗ್ಗೆ ಮಾತನಾಡಿದ್ದು, 6 -8 ಯಟ್ಯೂಬ್‌ ಚಾನೆಲ್‌ ಗಳು ವಿದೇಶದಿಂದ ಕಾರ್ಯ ಚರಿಸುತ್ತಿದೆ. ಕಳೆದ 10 ದಿನಗಳಿಂದ ಈ ಚಾನೆಲ್‌ ಗಳಿಗೆ ನಿರ್ಬಂಧ ಹೇರಲಾಗಿದೆ. ಈ ಚಾನೆಲ್‌ ಗಳು ಪಂಜಾಬಿ ಭಾಷೆಯಲ್ಲಿ ಕಾರ್ಯಚರಿಸುತ್ತಿತ್ತು. ಗಡಿ ರಾಜ್ಯದಲ್ಲಿ ತೊಂದರೆಯನ್ನುಂಟು ಮಾಡುವ ನಿಟ್ಟಿನಲ್ಲಿ ಖಲಿಸ್ತಾನ್‌ ಭಾವನೆಗಳ ಪರವಾಗಿ ವಿಡಿಯೋಗಳನ್ನು ಮಾಡುತ್ತಿದ್ದವು ಎಂದು ಹೇಳಿದ್ದಾರೆ.

 

ಕಳೆದ ಕೆಲ ದಿನಗಳ ಹಿಂದೆ ಪಂಜಾಬ್‌ ನ ಅಜ್ನಾಲ ಪೊಲೀಸ್‌ ಠಾಣೆ ಎದುರು ಅಮೃತ್‌ಪಾಲ್‌ ನಾಯಕತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.