Thursday, 12th December 2024

ಯೂಟ್ಯೂಬ್ ಸಿಇಒ ಹುದ್ದೆಗೆ ನೀಲ್ ಮೋಹನ್ ನೇಮಕ

ನವದೆಹಲಿ: ಯೂಟ್ಯೂಬ್ ಸಿಇಒ ಹುದ್ದೆಗೆ ಭಾರತ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ.

YouTube ನ ಮೂಲ ಕಂಪನಿ Alphabet Inc ಈ ಮಾಹಿತಿಯನ್ನು ಗುರುವಾರ ನೀಡಿದ್ದು, ಯೂಟ್ಯೂಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಸಾನ್ ವೊಜ್ಸಿಕಿ ಅವರು ಒಂಬತ್ತು ವರ್ಷಗಳ ನಂತರ ವಿಶ್ವದ ಅತಿದೊಡ್ಡ ಆನ್ಲೈನ್ ವೀಡಿಯೊ ಪ್ಲಾಟ್ಫಾರ್ಮ್ ನಿಂದ ದೂರ ಸರಿದಿದ್ದಾರೆ.

ಈ ಹಿಂದೆ ಗೂಗಲ್ನಲ್ಲಿ ಜಾಹೀರಾತು ಉತ್ಪನ್ನಗಳಿಗೆ ಹಿರಿಯ ಉಪಾಧ್ಯಕ್ಷರಾಗಿದ್ದ ವೊಜ್ಸಿಕಿ, 2014 ರಲ್ಲಿ ಯೂಟ್ಯೂಬ್ನ ಸಿಇಒ ಆದರು. ಅವರು Google ನ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಸುಮಾರು 25 ವರ್ಷಗಳಿಂದ ಪೋಷಕ ಕಂಪನಿ Alphabet Inc ಜೊತೆಗೆ ಇದ್ದಾರೆ.