ಕಾನ್ಪುರದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ಅಕ್ಟೋಬರ್ 23ರಂದು ಪತ್ತೆಯಾಗಿತ್ತು. ಭಾರತೀಯ ವಾಯುಪಡೆಯ ವಾರೆಂಟ್ ಆಫೀಸರ್ ಒಬ್ಬರಲ್ಲಿ ಝೀಕಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಕಳೆದ ಕೆಲ ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಳೆದ ವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿ ಝೀಕಾ ವೈರಸ್ ಸೋಂಕು ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದರು. ಕಟ್ಟುನಿಟ್ಟಿನ ಸರ್ವೇಕ್ಷಣೆ ನಡೆಸುವಂತೆ ಹಾಗೂ ಮನೆಮನೆಗೆ ನೈರ್ಮಲ್ಯ, ಫಾಗಿಂಗ್ ವ್ಯವಸ್ಥೆ ಮಾಡುವ ಮೂಲಕ ಸೊಳ್ಳೆಗಳ ಹರಡುವಿಕೆ ತಡೆಯುವಂತೆ ಮುಖ್ಯ ಮಂತ್ರಿ ಸೂಚನೆ ನೀಡಿದ್ದರು.
ಕಾನ್ಪುರದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡಾ ಉನ್ನತ ಮಟ್ಟದ ಅಧ್ಯಯನ ತಂಡವನ್ನು ಕಳುಹಿಸಿಕೊಟ್ಟಿತ್ತು.