Sunday, 15th December 2024

ಜೊಮಾಟೊ ಸಿಇಓ ಗೌರವ್ ಗುಪ್ತಾ ರಾಜೀನಾಮೆ

ಮುಂಬೈ/ನವದೆಹಲಿ: ಜೊಮಾಟೊ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗೌರವ್ ಗುಪ್ತಾ ರಾಜೀನಾಮೆ ನೀಡಿದ್ದಾರೆ.

ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿ ಜೊಮಾಟೊ ಸಂಸ್ಥೆಯನ್ನು ಮುನ್ನಡೆಸಿದ ಸಹ-ಸಂಸ್ಥಾಪಕ ಗೌರವ್ ಗುಪ್ತಾ ಅವರು ‘ಹೊಸ ಅಧ್ಯಾಯವನ್ನು ಪ್ರಾರಂಭಿಸಲು’ ರಾಜೀನಾಮೆ ನೀಡಿದ್ದಾರೆ. ನಾನು ನನ್ನ ಜೀವನದಲ್ಲಿ ಹೊಸ ತಿರುವು ಪಡೆಯುತ್ತಿದ್ದೇನೆ ಮತ್ತು ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇನೆ. ಜೊಮಾಟೊದಲ್ಲಿ ಕಳೆದ 6 ವರ್ಷಗಳ ಪ್ರಯಾಣದಲ್ಲಿ ಈಗ ಪರ್ಯಾಯ ಮಾರ್ಗ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಗೌರವ್ ಗುಪ್ತಾ ಅವರು 2015 ರಲ್ಲಿ ಬ್ಯುಸಿನೆಸ್ ಹೆಡ್, ಟೇಬಲ್ ರಿಸರ್ವೇಶನ್ಸ್ ಆಗಿ ಕಂಪನಿಗೆ ಸೇರಿಕೊಂಡರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಪದವೀಧರರಾಗಿರುವ ಗುಪ್ತಾ, ಜೊಮಾಟೊಗೆ ಸೇರುವ ಮೊದಲು ಎಟಿ ಕಿಯರ್ನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.