Friday, 22nd November 2024

Rahul Dravid : ಅಧಿಕೃತವಾಗಿ ರಾಜಸ್ಥಾನ್ ರಾಯಲ್ಸ್‌ತಂಡದ ಕೋಚಿಂಗ್ ವಿಭಾಗ ಸೇರಿದ ರಾಹುಲ್ ದ್ರಾವಿಡ್‌

Rahul Dravid

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರನ್ನು ಮುಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಜಸ್ಥಾನ್ ರಾಯಲ್ಸ್ (RR) ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಫ್ರಾಂಚೈಸಿ ಶುಕ್ರವಾರ (ಸೆಪ್ಟೆಂಬರ್ 6) ಸಾಮಾಜಿಕ ಮಾಧ್ಯಮದ ಮೂಲಕ ಈ ಬೆಳವಣಿಗೆಯನ್ನು ದೃಢಪಡಿಸಿದೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪಂದ್ಯಾವಳಿಯ ನಂತರ ಟೀಮ್ ಇಂಡಿಯಾದೊಂದಿಗಿನ ಅವರ ಅಧಿಕಾರಾವಧಿ ಕೊನೆಗೊಂಡಿತ್ತು. ಹೀಗಾಗಿ ಅವರು ಐಪಿಎಲ್‌ನಲ್ಲಿ ತಮ್ಮ ಪಾತ್ರ ವಹಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಸಿಇಒ ಜೇಕ್ ಲಶ್ ಮೆಕ್ಕ್ರಮ್ ಅವರು ರಾಹುಲ್ ದ್ರಾವಿಡ್ ಅವರಿಗೆ ಗುಲಾಬಿ ಬಣ್ಣದ ಜೆರ್ಸಿಯನ್ನು ಹಸ್ತಾಂತರಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅವರು ಚಿತ್ರವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ

ಭಾರತದ ವಿಶ್ವಕಪ್ ವಿಜೇತ ಕೋಚ್ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್‌ಗೆ ಮರಳಲು ಸಜ್ಜಾಗಿದ್ದಾರೆ. ಕ್ರಿಕೆಟ್ ಐಕಾನ್ ತನ್ನ ಗುಲಾಬಿ ಜರ್ಸಿಯನ್ನು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲಶ್ ಮೆಕ್ಕ್ರಮ್ ಅವರಿಂದ ಸ್ವೀಕರಿಸಿದ್ದಾರೆ.

ಇದನ್ನೂಓದಿ: Paralympics 2024 : 6 ಚಿನ್ನದ ಪದಕ; 56 ವರ್ಷಗಳಲ್ಲಿ ಹೊಸ ದಾಖಲೆ ಸೃಷ್ಟಿಸಿದ ಭಾರತ

ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ಭಾರತದೊಂದಿಗಿನ ಕೆಲಸದ ನಂತರ, ಮತ್ತೊಂದು ಸವಾಲನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ವಿಶ್ವಕಪ್ ನಂತರ, ಮತ್ತೊಂದು ಸವಾಲನ್ನು ಸ್ವೀಕರಿಸಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ, ಮತ್ತು ರಾಯಲ್ಸ್ ಅದನ್ನು ಮಾಡಲು ಸೂಕ್ತ ಸ್ಥಳ.” ಎಂದು ಹೇಳಿದ್ದಾರೆ.