ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Kerala Ragging: ಕೇರಳ ರ‍್ಯಾಗಿಂಗ್ ಪ್ರಕರಣ: ಆರೋಪಿ ವಿದ್ಯಾರ್ಥಿಗಳು ಅರೆಸ್ಟ್-ಕಾಲೇಜಿನಿಂದ ಡಿಸ್ಮಿಸ್!

ಕೇರಳದ ಕೊಟ್ಟಾಯಂ ಜಿಲ್ಲೆಯ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೂನಿಯರ್ ವಿದ್ಯಾರ್ಥಿಗಳ ಖಾಸಗಿ ಅಂಗಗಳಿಗೆ ಡಂಬಲ್ಸ್ ನೇತು ಹಾಕಿ, ಕೈವಾರದಿಂದ ಚುಚ್ಚಿ ರ‍್ಯಾಗಿಂಗ್ ಮಾಡಿದ್ದ ಐವರು ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಐವರನ್ನು ಕಾಲೇಜಿನ ಆಡಳಿತ ಮಂಡಳಿಯು ಅಮಾನತುಗೊಳಿಸಿದೆ.

ಕೇರಳ ರ‍್ಯಾಗಿಂಗ್ ಪ್ರಕರಣ: ಕಾಲೇಜಿನಿಂದ ಆರೋಪಿ ವಿದ್ಯಾರ್ಥಿಗಳು ಡಿಸ್ಮಿಸ್!

ರ‍್ಯಾಗಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳು

Profile Deekshith Nair Feb 14, 2025 7:46 PM

ತಿರುವನಂತಪುರಂ: ಕೇರಳದ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೂನಿಯರ್ ವಿದ್ಯಾರ್ಥಿಗಳ ಖಾಸಗಿ ಅಂಗಗಳಿಗೆ ಡಂಬಲ್ಸ್ ನೇತು ಹಾಕಿ, ಕೈವಾರದಿಂದ ಚುಚ್ಚಿ, ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ರ‍್ಯಾಗಿಂಗ್(Kerala Ragging) ಮಾಡಿದ್ದ ಐವರು ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು,ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ಡಿಸ್ಮಿಸ್‌ ಮಾಡಿದೆ. ಫೆ.12ರಂದು ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ ನಂತರ ಜೂನಿಯರ್‌ಗಳಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ನರ್ಸಿಂಗ್ ಕಾಲೇಜಿನ‌ ಜೂನಿಯರ್ ವಿದ್ಯಾರ್ಥಿಗಳನ್ನು ಬೆತ್ತಲೆಯಾಗಿ ವಿವಸ್ತ್ರಗೊಳಿಸಿ, ಅವರ ಖಾಸಗಿ ಅಂಗಗಳಿಗೆ ಡಂಬಲ್ ಗಳನ್ನು ನೇತುಹಾಕಿ ಹಿರಿಯ ವಿದ್ಯಾರ್ಥಿಗಳು ಕ್ರೂರವಾಗಿ ಹಿಂಸಿಸಿದ್ದರು. ಜತೆಗೆ ದೇಹದ ಕೆಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದ್ದಾರೆ. ಗಾಯವಾದ ಜಾಗಕ್ಕೆ ಲೋಷನ್‌ ಹಚ್ಚಿ ರಾಕ್ಷಸಿ ಪ್ರವೃತ್ತಿಯನ್ನು ಮೆರೆದಿದ್ದರು. ಸೀನಿಯರ್‌ ವಿದ್ಯಾರ್ಥಿಗಳು ನೀಡಿದ ಕಿರುಕುಳದ ಬಗ್ಗೆ ಜೂನಿಯರ್‌ ವಿದ್ಯಾರ್ಥಿಗಳು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆ ಐವರು ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿಯು ಕಾಲೇಜಿನಿಂದ ಅಮಾನತುಗೊಳಿಸಿದೆ. ರ‍್ಯಾಗಿಂಗ್ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಿದ ಬೆನ್ನಲ್ಲೇ ಕಾಲೇಜು ಪ್ರಾಂಶುಪಾಲರು ಈ ಕಠಿಣ ಕ್ರಮ ಕೈಗೊಂಡಿದ್ದಾರೆ.



ಸದ್ಯ ಪೊಲೀಸರ ಬಂಧನದಲ್ಲಿರುವ ಐವರು ತೃತೀಯ ವರ್ಷದ ಆರೋಪಿ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಕಾಲೇಜಿಗೆ ಪ್ರವೇಶಿಸಿದಂತೆ ನೋಡಿಕೊಳ್ಳಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ. ರಾಜ್ಯ ಸರ್ಕಾರ ಘಟನೆಯ ತನಿಖೆಗೆ ಆದೇಶಿಸಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ರಾಜ್ಯ ಪೊಲೀಸರಿಂದ 10 ದಿನಗಳಲ್ಲಿ ವರದಿ ನೀಡುವಂತೆ ಕೇಳಿದೆ.

ಏನಿದು ಪ್ರಕರಣ?

ಮೂರು ತಿಂಗಳುಗಳ ಕಾಲ ನಿರಂತರವಾಗಿ ರ‍್ಯಾಗಿಂಗ್‌ಗೆ ಒಳಗಾದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ತೃತೀಯ ವರ್ಷದ ಐವರು ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್‌, ಎನ್‌.ಎಸ್‌. ಜೀವಾ, ಕೆ.ಪಿ. ರಾಹುಲ್ ರಾಜ್, ಸಿ. ರಿಜಿಲ್ ಜಿತ್ ಮತ್ತು ವಿವೇಕ್ ಎನ್.ಪಿ. ಇವರನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Modi-Trump Meet: ಶ್ವೇತಭವನದಲ್ಲಿ ಮೋದಿ-ಟ್ರಂಪ್ ಭೇಟಿ; ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ

ಪೊಲೀಸರು ಹೇಳಿರುವಂತೆ, ಈ ಐವರು ಆರೋಪಿ ವಿದ್ಯಾರ್ಥಿಗಳು 2024ರ ನವೆಂಬರ್‌ನಿಂದ 2025ರ ಜನವರಿವರೆಗೂ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಸೀನಿಯರ್‌ಗಳ ವಿಪರೀತ ಕಿರುಕುಳವನ್ನು ಸಹಿಸಲಾಗದ ಮೂವರು ಪ್ರಥಮ ವರ್ಷದ ವಿದ್ಯಾರ್ಥಿಗಳು ಸಮೀಪದ ಗಾಂಧಿನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ ನಂತರ ಆರೋಪಿಗಳ ಕ್ರೂರ ಕೃತ್ಯಗಳು ತನಿಖೆಯಲ್ಲಿ ಬಯಲಾಗಿದೆ. ಈ ಘಟನೆಯ ವಿಡಿಯೊಗಳು ಇದೀಗ ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.