MLA K H Puttaswamy Gowda: ಅದ್ಧೂರಿಯಾಗಿ ನಡೆದ ಮಾರಮ್ಮ ದೇವಿಯ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ದೇವಾಲಯದ ಧಾರ್ಮಿಕ ಪೂಜಾಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ ಗ್ರಾಮ ದೇವರ ಆರಾಧನೆ, ವಾರ್ಷಿಕೋತ್ಸವ ಇತ್ಯಾದಿಗಳಿಂದ ಗ್ರಾಮಕ್ಕೆ ಶುಭವಾಗಲಿದೆ. ವೈಮನಸ್ಸು ದೂರವಾಗಿ ಶಾಂತಿ ನೆಲಸಲು ಸಹಕಾರಿ ಅಗುವುದರ ಜೊತೆಗೆ ಮಾನವ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ

ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಗ್ರಾಮದೇವತೆ ಮಾರಮ್ಮ ದೇವಿಯ ಪ್ರಾಣ ಪ್ರತಿಷ್ಟಾಪನೆ ಮತ್ತು ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಗೌರಿಬಿದನೂರು: ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಗ್ರಾಮದೇವತೆ ಮಾರಮ್ಮ ದೇವಿಯ ಪ್ರಾಣ ಪ್ರತಿಷ್ಟಾಪನೆ ಮತ್ತು ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ದೇವಾಲಯದ ಧಾರ್ಮಿಕ ಪೂಜಾಧಿ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ ಗ್ರಾಮ ದೇವರ ಆರಾಧನೆ, ವಾರ್ಷಿಕೋತ್ಸವ ಇತ್ಯಾದಿಗಳಿಂದ ಗ್ರಾಮಕ್ಕೆ ಶುಭವಾಗಲಿದೆ. ವೈಮನಸ್ಸು ದೂರವಾಗಿ ಶಾಂತಿ ನೆಲಸಲು ಸಹಕಾರಿ ಅಗುವುದರ ಜೊತೆಗೆ ಮಾನವ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ ಎಂದರು.
ಪೂಜೆ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಸದಸ್ಯರ ಗ್ರಾಮದ ಮುಖಂಡರು ಭಾಗವಹಿಸಿದ್ದರು.