Thursday, 12th December 2024

Baby Death: ಮಂಚದ ಬಳಿ ಬೆಂಕಿಕಡ್ಡಿ ಎಸೆದ ಬಾಲಕಿ; 8 ತಿಂಗಳ ಮಗು ಸಜೀವ ದಹನ

Baby Death

ಭೋಪಾಲ್‌: ಮಕ್ಕಳ ಮೇಲೆ ಪೋಷಕರು ಎಷ್ಟೇ ನಿಗಾವಿಟ್ಟರೂ ಒಂದಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕೆಲವೊಮ್ಮೆ ಪೋಷಕರ ಸಣ್ಣ ನಿರ್ಲಕ್ಷ್ಯದಿಂದ ಮಕ್ಕಳು ಬಲಿಯಾಗುತ್ತಾರೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಮಂಚದಲ್ಲಿ ಮಲಗಿದ್ದ 8 ತಿಂಗಳ ಮಗುವೊಂದು(Baby Death) ಆಕಸ್ಮಿಕವಾಗಿ ಬೆಂಕಿ ಅವಘಡದಿಂದ ಸಾವನ್ನಪ್ಪಿದೆ.

ಮೃತಳನ್ನು ಕಟ್ನಿ ಜಿಲ್ಲೆಯ ಬಾಂಧಾ-ಇಮ್ಲಾಜ್ ಗ್ರಾಮದ ನಿವಾಸಿ ರಾಜು ಕುಶ್ವಾಹ ಅವರ ಪುತ್ರಿ ಸೋನಿಯಾ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ತಾಯಿ ಮಂಚವನ್ನು ಬಿಸಿಲಿನಲ್ಲಿ ಇರಿಸಿದ್ದರು. ಹಾಗಾಗಿ  ಅದಕ್ಕೆ ಬೇಗನೆ ಬೆಂಕಿಗೆ ಹೊತ್ತಿಕೊಂಡಿದೆ ಎನ್ನಲಾಗಿದೆ.  8 ತಿಂಗಳ  ಮಗು ಸೋನಿಯಾಗೆ ಅವಳ ತಾಯಿ ಬೆಳಿಗ್ಗೆ ಎಣ್ಣೆ ಮಸಾಜ್ ಮಾಡಿ ನಂತರ ಬಿಸಿಲಿನಲ್ಲಿ ಮಂಚದ ಮೇಲೆ ಮಲಗಿಸಿದ್ದರು. ನಂತರ, ತಾಯಿ ದೈನಂದಿನ ಕೆಲಸಗಳಿಗಾಗಿ ತನ್ನ ಮನೆಯೊಳಗೆ ಹೋಗಿದ್ದಾರೆ ಮತ್ತು ಸೋನಿಯಾ ಅವರ ತಂದೆ ರಾಜು ಕೆಲಸಕ್ಕೆ ಹೋಗಿದ್ದರು. ಈ ಸಮಯದಲ್ಲಿ  ಸೋನಿಯಾ ಅವಳ ಒಡಹುಟ್ಟಿದವರು ಅವಳ ಬಳಿ  ಆಟವಾಡುತ್ತಿದ್ದರು ಎನ್ನಲಾಗಿದೆ.

ಆಟವಾಡುವಾಗ ಸೋನಿಯಾ ಅವಳ 6 ವರ್ಷದ ಅಕ್ಕ ಮತ್ತು 2 ವರ್ಷದ ಸಹೋದರ ಒಲೆಯ ಬಳಿ ಇರಿಸಲಾಗಿದ್ದ ಬೆಂಕಿಪೊಟ್ಟಣವನ್ನು ಎತ್ತಿಕೊಂಡು ಬೆಂಕಿಕಡ್ಡಿಗಳಲ್ಲಿ ಒಂದನ್ನು ಹಚ್ಚಿದ್ದಾರೆ. ಅರಿವಿಲ್ಲದೆ, ಅವರು ಬೆಂಕಿಕಡ್ಡಿಯನ್ನು ಹತ್ತಿರದಲ್ಲಿ ಇರಿಸಲಾಗಿದ್ದ ಹುಲ್ಲಿನ ಮೇಲೆ ಎಸೆದಿದ್ದಾರೆ. ಅದು ತಕ್ಷಣ ಬೆಂಕಿಗೆ ಆಹುತಿಯಾಯಿತು. ನಂತರ ಬೆಂಕಿ ಮಂಚವನ್ನು ತಲುಪಿ ಮಗುವನ್ನು ಆವರಿಸಿತು. ಸೋನಿಯಾ ಅಳುವ ಸದ್ದು ಕೇಳಿ ಪೋಷಕರು ಓಡಿ ಬಂದಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ.

ಈ ಸುದ್ದಿಯನ್ನೂ ಓದಿ:ಈ ವಿವಾಹ ಆಮಂತ್ರಣ ಪತ್ರಿಕೆ ನೋಡಿದ್ರೆ ಹೊಟ್ಟೆ ಹುಣ್ಣಾಗುವ ಹಾಗೇ ನಗುತ್ತೀರಿ; ಅಂಥದ್ದೇನಿದೆ ಇದರಲ್ಲಿ?

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.