ನವದೆಹಲಿ: ಬೈಕ್‌ಗೆ ಆಲ್ಟರ್ ಮಾಡಿದ ಸೈಲೆನ್ಸರ್ ಬಳಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆಗ್ನೇಯ ದೆಹಲಿಯ ಜಾಮಿಯಾ ನಗರದ ಆಸೀಫ್ ಹಾಗೂ ಆತನ ತಂದೆಯ ಮೇಲೆ ಕೇಸ್ ದಾಖಲಾಗಿದೆ. ಅವರಿಬ್ಬರು ಬೈಕಿನಲ್ಲಿ ಮಾರ್ಪಾಡು ಮಾಡಿದ ಸೈಲೆನ್ಸರ್ ಬಳಸಿಕೊಂಡು ಹೋಗುತ್ತಿದ್ದಾಗ ಪೊಲೀಸರು ತಡೆದಿದ್ದರು. ಇದಕ್ಕೆ ಕೋಪಗೊಂಡ ಅವರು ಪೊಲೀಸರ ಮೇಲೆ ಹಲ್ಲೆ(Beating up a Cop) ನಡೆಸಿದ್ದಾನೆ. ಆ ಆರೋಪದ ಮೇಲೆ ಯುವಕನನ್ನು ಹಾಗೂ ಅವನ ಜೊತೆಗಿದ್ದ ತಂದೆಯನ್ನು ಬಂಧಿಸಿದ್ದಾರೆ.
ಈ ಘಟನೆಯಲ್ಲಿ ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, 24 ವರ್ಷದ ಆಸಿಫ್ ಎಂಬ ಯುವಕ ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಕರ್ಕಶ ಶಬ್ದ ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದಾಗ ಪೊಲೀಸ್ ಸಿಬ್ಬಂದಿ ಅವನನ್ನು ತಡೆದಿದ್ದಾರೆ. ತಪಾಸಣೆ ಮಾಡಿದಾಗ ಬೈಕ್‍ನಲ್ಲಿ ಸೈಲೆನ್ಸರ್ ಅನ್ನು ಕಾನೂನುಬಾಹಿರವಾಗಿ ಮಾಡಿಫಿಕೇಷನ್ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ. ನಿಷೇಧಿಸಿದ್ದರು ಅದನ್ನು ಬಳಸಿದ್ದಲ್ಲದೇ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ್ದಾನೆ ಎಂದು ಆತನ ಬೈಕ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಆಸಿಫ್ ತನ್ನ ತಂದೆ ರಿಯಾಜುದ್ದೀನ್‌ನನ್ನು ಸ್ಥಳಕ್ಕೆ ಕರೆಸಿಕೊಂಡು ಬಲವಂತವಾಗಿ ಬೈಕ್ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ಸ್‌ಪೆಕ್ಟರ್ ಅವರನ್ನು ತಡೆಯಲು ಪ್ರಯತ್ನಿಸಿದಾಗ ರಿಯಾಜುದ್ದೀನ್ ಗಟ್ಟಿಯಾಗಿ ಹಿಡಿದುಕೊಂಡು ಆಸಿಫ್ ಅವರ ಕಣ್ಣಿನ ಬಳಿ ಗುದ್ದಿದ್ದಾನೆ. ಅವರು ಇತರ ಕೆಲವು ಪೊಲೀಸ್ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಕರ್ತವ್ಯದಲ್ಲಿದ್ದ ಎಸ್ಎಚ್ಒ ಮತ್ತು ಇತರ ಪೊಲೀಸ್ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಆರೋಪಿ ಆಸಿಫ್ ಮತ್ತು ಅತನ ತಂದೆಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಪೈಶಾಚಿಕ ಕೃತ್ಯ; ಪಿಕ್‌ನಿಕ್‌ಗೆಂದು ಬಂದ ನವವಿವಾಹಿತೆಯ ಮೇಲೆ ಪತಿಯ ಎದುರೇ ಸಾಮೂಹಿಕ ಅತ್ಯಾಚಾರ
ಸೈಲೆನ್ಸರ್ ಮಾರ್ಪಾಡು ಮಾಡಿಕೊಂಡ ವಾಹನಗಳು ಅತಿ ವೇಗದಲ್ಲಿ ಸಾಗುವ ಜೊತೆಯಲ್ಲೇ ದೊಡ್ಡ ಮಟ್ಟದಲ್ಲಿ ಕರ್ಕಶ ಶಬ್ಧ ಮಾಡುತ್ತಿವೆ.ಇದು ಇತರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಇದರಿಂದ ಅಪಘಾತವಾಗುವ ಸಂಭವವಿದೆ ಎಂದು ಇದನ್ನು ನಿಷೇಧಿಸಿದ್ದಾರೆ.