ಲಕ್ನೋ: ಇಲ್ಲೊಬ್ಬ ಮಹಿಳೆ ತನ್ನ ಪತಿಗೆ ಮೋಸ ಮಾಡಿ ಪ್ರಿಯಕರನ ಜೊತೆ ಕಾರಿನೊಳಗೆ ಕುಳಿತು ಸರಸಸಲ್ಲಾಪ(Extra Marital Affair) ನಡೆಸುತ್ತಿದ್ದಾಗ ರೆಡ್‍ಹ್ಯಾಂಡ್ ಆಗಿ ಆಕೆಯ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ.
ರೆಸ್ಟೋರೆಂಟ್ ಹೊರಗೆ ಕಾರಿನಲ್ಲಿ ಮಹಿಳೆ ತನ್ನ ಪ್ರಿಯಕರ ಜೊತೆಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿಯೇ ಪತಿಯ ಕಣ್ಣಿಗೆ ಬಿದ್ದಿದ್ದಾಳೆ. ಆ ವೇಳೆ ಪತ್ನಿಯನ್ನು ಪ್ರಿಯಕರನ ಜೊತೆ ನೋಡಿದ ಪತಿ ಕೋಪಗೊಂಡು ಅವರಿಬ್ಬರನ್ನು ನಿಂದಿಸಲು ಶುರುಮಾಡಿದ್ದಾನೆ. ಆಗ ಕೋಪಗೊಂಡ ಇಬ್ಬರು ಪತಿಯ ಮೇಲೆ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಲಕ್ನೋದ ಆಶಿಯಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೆಲಸದಿಂದ ಹಿಂದಿರುಗುತ್ತಿದ್ದ ಪತಿ ಸ್ಪೈಸಿ ಹಬ್ ರೆಸ್ಟೋರೆಂಟ್ ಬಳಿ ನಿಲ್ಲಿಸಿದ್ದ ಪತ್ನಿಯ ಕಾರನ್ನು ಕಂಡು ಅನುಮಾನಗೊಂಡಿದ್ದಾನೆ. ಹತ್ತಿರ ಬಂದಾಗ ಕಾರಿನೊಳಗೆ ಪತ್ನಿ ಮತ್ತು ಆಕೆಯ ಗೆಳೆಯ ಆದಿತ್ಯ ಉಪಾಧ್ಯಾಯ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕುಳಿತಿರುವುದನ್ನು ಗಮನಿಸಿದ್ದಾನೆ. ಪತ್ನಿ ತನ್ನ ಗೆಳೆಯನೊಂದಿಗೆ ಕ್ಲೋಸ್ ಆಗಿರುವ ದೃಶ್ಯ ನೋಡಿ ಪತಿಗೆ ಒಮ್ಮೆಲೆ ಶಾಕ್ ಆಗಿ ಕೋಪದಿಂದ ಅವರನ್ನು ನಿಂದಿಸಿದ್ದಾನೆ. ಅಲ್ಲಿ ದೊಡ್ಡ ಗಲಾಟೆಯೇ ನಡೆದಿದೆ. ಆಗ ಗೆಳೆಯ ಆದಿತ್ಯ ಉಪಾಧ್ಯಾಯ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಪತಿ ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ, ಆದಿತ್ಯ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿ, ಥಳಿಸಿ, ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ!
ಹಲ್ಲೆಗೊಳಗಾದ ಪತಿ ಸುಶಾಂತ್ ಗಾಲ್ಫ್ ಸಿಟಿ ನಿವಾಸಿಯಾಗಿದ್ದು, ಈ ಘಟನೆಯನ್ನು ಆಶಿಯಾನಾ ಪೊಲೀಸ್ ಠಾಣೆಗೆ ವರದಿ ಮಾಡಿದ್ದಾರೆ. ಆತನ ದೂರಿನ ಆಧಾರದ ಮೇಲೆ ಆದಿತ್ಯ ಉಪಾಧ್ಯಾಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಆಶಿಯಾನಾ ಠಾಣಾ ಪೊಲೀಸರು ತಿಳಿಸಿದ್ದಾರೆ. ಹಾಗೇ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.