ನವದೆಹಲಿ: ಅನೈತಿಕ ಸಂಬಂಧಕ್ಕೆ ಸಂಬಂಧಪಟ್ಟ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ದಾಖಲಾಗುತ್ತಿದೆ. ಇದೀಗ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದ ಮನೆಯೊಂದರಲ್ಲಿ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಿಕ್ಕಿಬಿದ್ದ ಪರಿಣಾಮ ಕೋಪಗೊಂಡ ಪತಿಯು ಆ ವ್ಯಕ್ತಿಯನ್ನು ಥಳಿಸಿ ಹತ್ಯೆ(Murder Case) ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
21 ವರ್ಷದ ರಿತಿಕ್ ವರ್ಮಾ ಹತ್ಯೆಯಾದ ವ್ಯಕ್ತಿ. ಈತ ಆರೋಪಿಯ ಪತ್ನಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಮಹಿಳೆಯ ಪತಿಯಿಂದ ಕ್ರೂರವಾಗಿ ಥಳಿತಕ್ಕೊಳಗಾದ ಈತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪತಿ ಮನೆಗೆ ಬಂದಾಗ ಪತ್ನಿ ತನ್ನ ಪ್ರಿಯತಮನ ಜೊತೆ ಇರುವುದನ್ನು ನೋಡಿದ ಆಕೆಯ ಪತಿ ಕೋಪಗೊಂಡು ತನ್ನ ಹೆಂಡತಿ ಮತ್ತು ರಿತಿಕ್ ವರ್ಮಾ ಇಬ್ಬರನ್ನು ಥಳಿಸಿದ್ದಾನೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಈ ಘಟನೆಯ ಕುರಿತು ಮಾತನಾಡಿದ ರಿತಿಕ್ ಚಿಕ್ಕಪ್ಪ ಬಂಟಿ ಪ್ರಕಾರ, “ರಿತಿಕ್‍ನನ್ನು ಕ್ರೂರವಾಗಿ ಥಳಿಸಿ, ಅವನ ಉಗುರುಗಳನ್ನು ಕಿತ್ತುಹಾಕಿದ್ದಾನೆ ಮತ್ತು ಅವನನ್ನು ಕ್ರೂರವಾಗಿ ಹಿಂಸಿಸಿದ್ದಾನೆ. ಅವನ ದೇಹದ ಪ್ರತಿಯೊಂದು ಭಾಗದಲ್ಲೂ ಗಾಯಗಳಿದ್ದವು” ಎಂದು ಹೇಳಿದ್ದಾರೆ. ಆರೋಪಿಯು ರಿತಿಕ್ ಮತ್ತು ಮಹಿಳೆ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಮಾಹಿತಿ ತಿಳಿದ ಆತನ ಸಂಬಂಧಿಕರು ಘಟನಾ ಸ್ಥಳಕ್ಕೆ ಬಂದು ಗಾಯಗೊಂಡ ರಿತಿಕ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿತಿಕ್ ಮೃತಪಟ್ಟಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಅಯ್ಯೋ… ಇದೆಂಥಾ ಬಾಯಿ ರುಚಿನೋ? ಚಿಕನ್ ಟಿಕ್ಕಾವನ್ನು ಚಾಕೋಲೆಟ್ ಜೊತೆ ಬೆರೆಸಿ ತಿಂದ ಭೂಪಾ!
ದೆಹಲಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಭದ್ರತಾ ಸಿಬ್ಬಂದಿಯೊಬ್ಬ ಮ್ಯಾಟ್ರಿಮೋನಿ ಸೈಟ್‍ನಲ್ಲಿ ಹೆಚ್ಚು ಸಂಬಳ ಪಡೆಯುತ್ತಿರುವ ಕೆಲಸದಲ್ಲಿರುವಂತೆ ನಟಿಸಿ ಹಲವಾರು ಮಹಿಳೆಯರಿಗೆ ಮೋಸ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವ್ಯಕ್ತಿಯನ್ನು ಮನೋಜ್ ಗಹ್ಲ್ಯಾನ್ ಎಂದು ಗುರುತಿಸಲಾಗಿದ್ದು, ನಕಲಿ ಪ್ರೊಫೈಲ್‍ಗಳನ್ನು ಬಳಸಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ಶ್ರೇಣಿಯ ವ್ಯವಸ್ಥಾಪಕನೆಂದು ಹೇಳಿಕೊಂಡು ವಾರ್ಷಿಕ 15-20 ಲಕ್ಷ ರೂ. ಸಂಪಾದನೆ ಮಾಡುವುದಾಗಿ ಸುಳ್ಳು ಹೇಳಿದ್ದಾನೆ.
ಪಶ್ಚಿಮ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈ ಪ್ರಕರಣವನ್ನು ತನಿಖೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಸಮಯದಲ್ಲಿ ಪೊಲೀಸರು ಅವನ ಬಳಿಯಿಂದ ಐದು ಡೆಬಿಟ್ ಕಾರ್ಡ್ ಗಳು ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.