ಮಧ್ಯಪ್ರದೇಶ: ಮದ್ಯಕ್ಕಾಗಿ ಜನರು ಯಾವ ಕೃತ್ಯ ಕೂಡ ಎಸಗಲು ಸಿದ್ದರಿರುತ್ತಾರೆ ಎಂಬುದಕ್ಕೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಎಣ್ಣೆ ಪಾರ್ಟಿ ವಿಚಾರಕ್ಕೆ ಮಾವ ಮತ್ತು ಸೋದರಳಿಯನ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಎಣ್ಣೆ ಪಾರ್ಟಿಗೆ ಕೊಡಬೇಕಾಗಿದ್ದ ಹಣವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವನೋರ್ವ ತನ್ನ ಮಾವನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ(Murder Case).
ಜಬಲ್ಪುರದ ಚರಗ್ವಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮನೋಜ್ (26) ಕೊಲೆಯಾದ ಮಾವ ಮತ್ತು ಧರಂ (19) ಆರೋಪಿ. ಮದ್ಯ ಮತ್ತು ಚಿಕನ್‍ಗಾಗಿ ನೀಡಿದ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ಕೊನೆಗೆ ಇದು ಕೊಲೆಯಲ್ಲಿ ಅಂತ್ಯವಾಗಿದೆ. ಇಬ್ಬರೂ 340 ರೂಪಾಯಿ ಮೌಲ್ಯದ ಮದ್ಯ ಮತ್ತು 60 ರೂಪಾಯಿ ಮೌಲ್ಯದ ಚಿಕನ್ ಖರೀದಿಸಿ, ನಂತರ ಸಣ್ಣ ಪಾರ್ಟಿ ಮಾಡಲು ಗ್ರಾಮದ ಬಳಿಯ ಹೊಲಕ್ಕೆ ಹೋದರು. ಪಾರ್ಟಿಯ ವೇಳೆ ಹಣದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಹತಾಶೆಯಿಂದ ಮಾವ ಮನೋಜ್ ಕೋಳಿ ಬೇಯಿಸಲು ತಂದಿದ್ದ ಮರದ ಕೋಲಿನಿಂದ ಸೋದರಳಿಯನ ಬೆನ್ನಿಗೆ ಹೊಡೆದಿದ್ದಾರೆ. ಮಾವನ ಪೆಟ್ಟಿನಿಂದ ಕೋಪಗೊಂಡ ಧರಂ ಅದೇ ಕೋಲನ್ನು ಬಳಸಿ ಮಾವ ಮನೋಜ್‍ರನ್ನು ಕ್ರೂರವಾಗಿ ಥಳಿಸಿದ್ದಾನೆ . ಇದರಿಂದ ಆತ ಕೊನೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆ ವೇಳೆ ಧರಂ ಬಟ್ಟೆಗಳ ಮೇಲೆ ರಕ್ತದ ಕಲೆಗಳನ್ನು ಕಂಡು ಪೊಲೀಸರಿಗೆ ಆತನ ಮೇಲೆ ಅನುಮಾನ ಮೂಡಿದೆ. ತನಿಖೆಯ ನಂತರ ಧರಂನನ್ನು ಬಂಧಿಸಿ ವಶಕ್ಕೆ ತೆಗದುಕೊಂಡಿದ್ದಾರೆ. ಬಿಎನ್ಎಸ್‍ನ ಸೆಕ್ಷನ್ 103 (1) ರ ಅಡಿಯಲ್ಲಿ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಚಿಕನ್ ಬಿರಿಯಾನಿ ಆರ್ಡರ್ ಮಾಡಿದ ವ್ಯಕ್ತಿಗೆ ಗದರಿದ ಡೆಲಿವರಿ ಬಾಯ್; ಕಾರಣವೇನು?
ಮದ್ಯದ ವಿಚಾರಕ್ಕೆ ಸಂಬಂಧಿಕರ ನಡುವೆ ಜಗಳ, ಕೊಲೆ ನಡೆದ ಘಟನೆ ಇದೇ ಮೊದಲಲ್ಲಾ ಇದಕ್ಕೂ ಮುಂಚೆ ಕಳೆದ ವರ್ಷ ಮಾರ್ಚ್‍ನಲ್ಲಿ ಜಬಲ್ಪುರದಲ್ಲಿ ಮದ್ಯದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ಸೋದರಳಿಯನನ್ನು ಕೊಂದಿರುವ ಘಟನೆ ನಡೆದಿದೆ. ಜಿಲ್ಲೆಯ ಜೋಗಿ ಮೊಹಲ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಜೋಗಿ ಮೊಹಲ್ಲಾ ನಿವಾಸಿ ಅಮಿತ್ (39) ಎಂದು ಗುರುತಿಸಲಾಗಿದೆ. ಅವರು ಸಂಜೆ ತಮ್ಮ ಕೋಣೆಯಲ್ಲಿದ್ದಾಗ ಅವರ ಮಾವ ರಾಜು ಬೆನಾಡ್ ಬಂದು ಮದ್ಯ ಕೇಳಲು ಪ್ರಾರಂಭಿಸಿದ್ದಾರೆ. ಸೋದರಳಿಯ ನಿರಾಕರಿಸಿದಾಗ, ಮಾವ ಮರದ ಕೋಲು ಮತ್ತು ಇಟ್ಟಿಗೆಯಿಂದ ಅಳಿಯನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.