Sunday, 17th November 2024

Physical Abuse: ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 60 ವರ್ಷದ ನಿಸಾರ್‌ ಎಂಬಾತ ಅರೆಸ್ಟ್

Physical Abuse

ಲಕ್ನೊ: ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ 60 ವರ್ಷದ ಮುಸ್ಲಿಂ ವ್ಯಕ್ತಿ ನಿಸಾರ್ ಖುರೇಷಿ ಎಂಬಾತ ಅತ್ಯಾಚಾರ ((Physical abuse)) ಮಾಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ. ಸ್ಥಳೀಯ ಹಿಂದೂಗಳು  ಆರೋಪಿ ನಿಸಾರ್ ಖುರೇಷಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯಿಂದಾಗಿ ಈ ಪ್ರದೇಶದಲ್ಲಿ ಕೋಮು ಪರಿಸ್ಥಿತಿ ಉಂಟಾಗಿದೆ.

ಪ್ರತಿಭಟನೆಯ ಕಾವು ತೀವ್ರವಾಗಿದ್ದು, ಅಪರಾಧಿಯನ್ನು ಗಲ್ಲಿಗೇರಿಸಬೇಕು ಮತ್ತು ಅವನ ಮನೆಯನ್ನು ಧ್ವಂಸ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.ಒಂದು ಕಡೆ ಆರೋಪಿ ನಿಸಾರ್ ಖುರೇಷಿಯನ್ನು ಗಲ್ಲಿಗೇರಿಸಬೇಕೆಂದು ಹಿಂದೂಗಳು  ಒತ್ತಾಯಿಸಿದರೆ, ಇನ್ನೊಂದು ಕಡೆ ಮುಸ್ಲಿಂರು ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗಾಗಿ ಇಬ್ಬರ ನಡುವೆ ಘರ್ಷಣೆಯಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು ಎಂಬುದಾಗಿ ತಿಳಿದುಬಂದಿದೆ.

ಅಕ್ಟೋಬರ್ 3 ರಂದು ಆರೋಪಿ ನಿಸಾರ್ ಖುರೇಷಿ 9 ವರ್ಷದ ಬಾಲಕಿಯನ್ನು ಗಾಂಧಿ ಆದರ್ಶ ವಿದ್ಯಾಲಯದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಅಳುತ್ತಾ ಮನೆಗೆ ತಲುಪಿ ನಿಸಾರ್ ಖುರೇಷಿಯ ಕೃತ್ಯದ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದಾಳೆ. ಅಪರಾಧದ ಬಗ್ಗೆ ತಿಳಿದ ನಂತರ, ಸಂತ್ರಸ್ತೆಯ ಕುಟುಂಬವು ಧೆಬರುವಾ(Dhebarua ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಆಧಾರದ ಮೇಲೆ ಪೊಲೀಸರು ನಿಸಾರ್ ಖುರೇಷಿ ವಿರುದ್ಧ ಪೋಕ್ಸೊ ಕಾಯ್ದೆಯ ಬಿಎನ್ಎಸ್ ಸೆಕ್ಷನ್ 65 (2) ಮತ್ತು 56 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.ಅಪ್ರಾಪ್ತ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಫಸ್ಟ್ ನೈಟ್ ವೇಳೆ ವಧುವಿನ ಮೇಲೆ ನೆರೆಮನೆಯವನಿಂದ ಅತ್ಯಾಚಾರ; ಕರೆಂಟ್‌ ಹೋದಾಗ ನಡೆದ ಕೃತ್ಯ

ಅಕ್ಟೋಬರ್ 6 ರಂದು ಪ್ರತಿಭಟನಾಕಾರರು ಆರೋಪಿ ನಿಸಾರ್ ಖುರೇಷಿಯನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಪೊಲೀಸರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಸದ್ಯಕ್ಕೆ ಬರ್ನಿಯಲ್ಲಿ(Barhni) ಪರಿಸ್ಥಿತಿ ಶಾಂತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.