ಛತ್ತೀಸ್‍ಗಢ: ನೌಕಾಪಡೆಯ ಅಧಿಕಾರಿಯಂತೆ ವೇಷ ಧರಿಸಿ ಛತ್ತೀಸ್‍ಗಢದ ಹಿಂದೂ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ (Physical Abuse) ಬೆಳೆಸಿ ಅವಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಹೋರಟ ಕೇರಳ ಮೂಲದ ಬಿಲಾಲ್ ರಫೀಕ್ ಎಂಬಾತನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ಸ್ನೇಹ ಬೆಳೆಸಿ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಛತ್ತೀಸ್‍ಗಢ ಮೂಲದ ಸಂತ್ರಸ್ತ ಮಹಿಳೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ 2021 ರಲ್ಲಿ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದಾಗ ಆರೋಪಿಯು ಮರ್ಚೆಂಟ್ ನೇವಿಯಲ್ಲಿ ಉನ್ನತ ಶ್ರೇಣಿಯ ಕಮಾಂಡರ್ ಎಂದು ಸುಳ್ಳು ಹೇಳಿದ್ದಾನೆ. ಆ ಮೂಲಕ ಮಹಿಳೆಯ ನಂಬಿಕೆ ಮತ್ತು ಪ್ರೀತಿಯನ್ನು ಗೆಲ್ಲಲು ಸಂಚು ಮಾಡಿದ್ದಾನೆ. ಇದರಿಂದ ಅವರ ನಡುವೆ ಸಂಬಂಧ ಬಲವಾಗಿ ನಂತರ ಆತನ ಸಲಹೆಯಂತೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಮಹಿಳೆಗೆ ಅಲ್ಲಿ 2022ರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಿದೆ.
ಆದರೆ ಆರೋಪಿ ಮಹಿಳೆಯ ಜೊತೆ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ ಕಾರಣ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದು ಆಕೆ 2 ಬಾರಿ ಗರ್ಭಿಣಿಯಾಗಿದ್ದಾಳೆ. ಆದರೆ ಆಕೆಗೆ 2ಬಾರಿ ಗರ್ಭಪಾತ ಮಾಡಿಸಿದ್ದಾನೆ. ಮಹಿಳೆ ಮೂರನೇ ಬಾರಿಗೆ ಗರ್ಭಿಣಿಯಾದಾಗ ಗರ್ಭಪಾತ ಮಾಡಲು ನಿರಾಕರಿಸಿ ಮದುವೆಯಾಗುವಂತೆ ಆರೋಪಿಯನ್ನು ಒತ್ತಾಯಿಸಿದ್ದಾಳೆ. ಆರಂಭದಲ್ಲಿ ಆರೋಪಿ ಒಪ್ಪಿದರೂ, ನಂತರ ಅವನು ಮಹಿಳೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಲು ಪ್ರಾರಂಭಿಸಿದ್ದಾನೆ. ಅವಳು ಅದನ್ನು ನಿರಾಕರಿಸಿದಾಗ, ಅವನು ಮದುವೆ ಪ್ರಸ್ತಾಪವನ್ನು ಮತ್ತಷ್ಟು ಮುಂದೂಡಲು ಶುರುಮಾಡಿದ್ದಾನೆ. ಹಾಗೇ ಆಕೆಯ ಬಳಿ ಆರೋಪಿ ಮದುವೆಯ ತಯಾರಿಗಾಗಿ 1 ಲಕ್ಷ ರೂ ಮತ್ತು ದುಬಾರಿ ಪೋನ್ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಮದುವೆಯ ಸಿದ್ಧತೆಗಳ ನಡುವೆ ಆರೋಪಿಯ ಪೋಷಕರು ತನ್ನ ಮೇಲೆ ಜಾತಿ ಆಧಾರಿತ ನಿಂದನೆಗಳನ್ನು ಮಾಡಿ ಇಸ್ಲಾಂಗೆ ಮತಾಂತರಗೊಳ್ಳಲು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇದನ್ನೂ ಓದಿ:ಬ್ರಾ ಮಾತ್ರ ಧರಿಸಿ, ಇದೇ ನನ್ನ ಶರ್ಟ್ ಎಂದು ವಾದಿಸಿದ ನಟಿ! ಅಪ್ಪ ಸಿಡಿಮಿಡಿ; ವಿಡಿಯೊ ನೋಡಿ
ಆದರೆ ಮತಾಂತರಗೊಳ್ಳಲು ಇಷ್ಟವಿಲ್ಲದ ಮಹಿಳೆ, ಮತಾಂತರವಿಲ್ಲದೆ ಅಂತರ್ಧರ್ಮೀಯ ವಿವಾಹಗಳಿಗೆ ಅನುಮತಿ ನೀಡುವ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಕೇಳಿಕೊಂಡಿದ್ದಾಳೆ. ಆದರೆ, ಮತಾಂತರಗೊಳ್ಳದೆ ಮದುವೆಯಾಗುವುದಿಲ್ಲ ಎಂದು ಆರೋಪಿ ಹೇಳಿದಾಗ , ಅವಳು ಗೋವಿಂದಪುರ ಪೊಲೀಸರಿಗೆ ದೂರು ನೀಡಿದ್ದಾಳೆ. ವಂಚನೆ ಮತ್ತು ಲೈಂಗಿಕ ದೌರ್ಜನ್ಯಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ತಡೆಗಟ್ಟುವಿಕೆ ಮತ್ತು ದೌರ್ಜನ್ಯ) ಕಾಯ್ದೆಯಡಿ ಪೊಲೀಸರು ಆರೋಪಿ ಹಾಗೂ ಆತನ ಕುಟುಂಬದವರನ್ನು ವಶಕ್ಕೆ ಪಡೆದಿದ್ದಾರೆ.