Sunday, 17th November 2024

Physical Abuse: ಪ್ರಿಯಕರನ ಜೊತೆ ಸುತ್ತಾಡಿದ ಕಾಲೇಜು ಹುಡುಗಿ ಕೊನೆಗೆ ಗರ್ಭಪಾತ ಮಾತ್ರೆ ತಿಂದು ಸಾವು

Physical Abuse

ಚೆನ್ನೈ: ಮಕ್ಕಳು ಓದಿ ವಿದ್ಯಾವಂತರಾಗಲೆಂದು ಪೋಷಕರು ಕಷ್ಟಪಟ್ಟು ದುಡಿದು ಅವರನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಆ ಮಕ್ಕಳು ಮಾತ್ರ ಓದುವುದನ್ನು ಬಿಟ್ಟು ಪ್ರೀತಿ, ಪ್ರೇಮದಲ್ಲಿ(Physical Abuse) ಬಿದ್ದು ತಪ್ಪು ದಾರಿಯಲ್ಲಿ ಹೋಗಿ ತಮ್ಮ ಜೀವ, ಜೀವನವನ್ನೇ ಕಳೆದುಕೊಳ್ಳುತ್ತಾರೆ. ಇಂತಹದೊಂದು ಘೋರ ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿದೆ.  ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡ್ ಬಳಿಯ ಎಲಚಿಪಾಳ್ಯಂನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗರ್ಭಪಾತವಾಗಲು ಪ್ರಿಯಕರ ತಂದುಕೊಟ್ಟ ಮಾತ್ರೆ ತಿಂದು ಸಾವನಪ್ಪಿದ್ದಾಳೆ.

ಮಲ್ಲಸಮುದ್ರಂ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ17 ವರ್ಷದ  ವಿದ್ಯಾರ್ಥಿನಿ ಎರಡು ತಿಂಗಳ ಹಿಂದೆ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಆದರೆ ಆಕೆ ಶಾಲೆಯ ಬಳಿ ಇರುವ  ಮೊಬೈಲ್ ಫೋನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ್ (23) ಎಂಬಾತನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಇಬ್ಬರು ಆಗಾಗ ಕದ್ದುಮುಚ್ಚಿ ಹೊರಗಡೆ ಸುತ್ತಾಡಲು ಹೋಗುತ್ತಿದ್ದರು.

ಈ ನಡುವೆ ಅವರ ನಡುವೆ ಅನೇಕ ಬಾರಿ ದೈಹಿಕ ಸಂಬಂಧ ಕೂಡ ಬೆಳೆದಿದೆ. ಇದರಿಂದ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಈ ಘಟನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಗರ್ಭಪಾತದ ಮಾತ್ರೆ ತಂದುಕೊಡುವಂತೆ ಪ್ರಿಯಕರನಿಗೆ ದುಂಬಾಲು ಬಿದ್ದಿದ್ದಾಳೆ. ಆತ ತಂದುಕೊಟ್ಟ ಮಾತ್ರೆಗಳನ್ನು ತಿಂದ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಆಕೆಯ ಕುಟುಂಬದವರು ತಕ್ಷಣ ಆಕೆಯನ್ನು ಚಿಕಿತ್ಸೆಗಾಗಿ ಮಲ್ಲಸಮುದ್ರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ:ದೇವಿಯ ಮೇಲಿನ ಭಕ್ತಿಗೆ ರೇಜರ್‌ನಿಂದ ಕತ್ತು ಸೀಳಿಕೊಂಡ!

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಎಲಚಿಪಾಳ್ಯಂ ಠಾಣೆಯ ಪೊಲೀಸರು ಸೇಲಂ ಸರ್ಕಾರಿ ಆಸ್ಪತ್ರೆಗೆ ಬಂದು ವಿದ್ಯಾರ್ಥಿನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಯ ಪ್ರಿಯಕರ ಅರವಿಂದ್‌ನನ್ನು ಬಂಧಿಸಿದ್ದಾರೆ. ತನಿಖೆಯ ಕೊನೆಯಲ್ಲಿ ಆತನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.