ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಹಾಗೂ ಅತ್ಯಾಚಾರ ಆರೋಪಿಗೆ ಶಿಕ್ಷೆ ವಿಧಿಸಲು ಎಲ್ಲರೂ ಒಂದಾಗಿ ಹೋರಾಡುತ್ತಾರೆ. ಆದರೆ ಇರಾನಿನಲ್ಲಿ ಅತ್ಯಾಚಾರಕ್ಕೊಳಗಾದ(Physical Abuse) ಹೆಣ್ಣುಮಕ್ಕಳು ಮದುವೆಗೂ ಮುನ್ನ ಲೈಂಗಿಕತೆ ಹೊಂದಿದ್ದಾಳೆ, ಆಕೆ ತಪಿತಸ್ಥೆ ಎಂದು ಹೇಳಿ ಗಲ್ಲು ಶಿಕ್ಷೆ ವಿಧಿಸುತ್ತಾರೆ! ಅತೆಫೆಹ್ ಸಹಲೇಹ್ ಎಂಬ ಇರಾನಿನ ಬಾಲಕಿಯೊಬ್ಬಳು ಇಂತಹ ಕರಾಳ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದಳು. ಈ ಪ್ರಕರಣವು ಇರಾನ್ನಲ್ಲಿ ಶರಿಯಾ ಕಾನೂನಿನ ಕ್ರೂರತನವನ್ನು ಎತ್ತಿ ತೋರಿಸುತ್ತದೆ.
2004ರಲ್ಲಿ 16 ವರ್ಷದ ಬಾಲಕಿ ಅತೆಫೆಹ್ ಸಹಲೇಹ್ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿದ್ದಳು. ಆದರೆ, ಮದುವೆಗೂ ಮುನ್ನ ಲೈಂಗಿಕ ಸಂಪರ್ಕ ಹೊಂದಿದ್ದಾಳೆ ಎಂಬ ಆರೋಪ ಹೊರಿಸಿ ಆಕೆಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು. ಈ ಭಯಾನಕ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶವನ್ನು ಹುಟ್ಟುಹಾಕಿತ್ತು. ಇದು ಆಡಳಿತಾಧಿಕಾರಿಗಳ ಕಠಿಣ ಕಾನೂನುಗಳು ಮತ್ತು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಬಹಿರಂಗಪಡಿಸಿದೆ.
ಶರಿಯಾ ಕಾನೂನಿನ ಪ್ರಕಾರ, ಅತ್ಯಾಚಾರ ಸಂತ್ರಸ್ತರು “ಜಿನಾ” (ವಿವಾಹೇತರ ಲೈಂಗಿಕತೆ)ಗಾಗಿ ಮರಣದಂಡನೆ ಸೇರಿದಂತೆ ಹಲವು ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದು ಸಂತ್ರಸ್ತ ಹೆಣ್ಣುಮಕ್ಕಳು ತಮ್ಮ ಮೇಲೆ ನಡೆದ ಶೋಷಣೆಯನ್ನು ವರದಿ ಮಾಡದೆ ಮೌನವಾಗಿರುವಂತೆ ಮಾಡುತ್ತದೆ. ಅಲ್ಲದೇ ಈ ಪ್ರಕರಣವು ಆಡಳಿತಾಧಿಕಾರಿಗಳನ್ನು ದೂಷಿಸುವಂತೆ ಮಾಡುತ್ತದೆ. ಅಪರಾಧಿಯ ಬದಲು ಸಂತ್ರಸ್ತರಿಗೆ ಶಿಕ್ಷೆ ವಿಧಿಸಲಾಗುತ್ತದೆ. ನ್ಯಾಯಕ್ಕಿಂತ ಹೆಚ್ಚಾಗಿ ʼನೈತಿಕʼ ಅಪರಾಧಗಳ ಮೇಲೆ ಕಾನೂನು ಗಮನಹರಿಸುವುದರಿಂದ ಇದು ಅಂತಹ ದೌರ್ಜನ್ಯಗಳನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಇಸ್ರೆಲ್ ಬಾಂಬ್ ದಾಳಿಗೆ ನಲುಗಿದ ಸಹೋದರಿಯನ್ನುಹೆಗಲ ಮೇಲೆ ಹೊತೊಯ್ದ ಪುಟ್ಟ ಬಾಲಕಿ; ವಿಡಿಯೊ ವೈರಲ್
ಅತೆಫೆಹ್ಳ ಮರಣದಂಡನೆಯು ಇರಾನಿನ ಆಡಳಿತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು, ವಿಶೇಷವಾಗಿ ಮಹಿಳೆಯರನ್ನು ವಿರೋಧಿಸುವುದನ್ನು ಸ್ಪಷ್ಟವಾಗಿ ನೆನಪಿಸುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಗುಂಪುಗಳು ಇಂತಹ ಕಾನೂನುಗಳನ್ನು ಖಂಡಿಸಿವೆ, ಮತ್ತು ಇವುಗಳಲ್ಲಿ ಸುಧಾರಣೆಗಳನ್ನು ತರುವಂತೆ ಪ್ರತಿಪಾದಿಸಿವೆ. ಹೀಗೆ ಈ ಕಾನೂನುಗಳನ್ನು ಪ್ರಶ್ನಿಸುವ ಮತ್ತು ಸಂತ್ರಸ್ತರನ್ನು ರಕ್ಷಿಸುವ ಪ್ರಯತ್ನಗಳು ಮುಂದುವರೆದಿವೆ. ಆದರೆ ಇರಾನ್ನಲ್ಲಿ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ಇನ್ನೂ ಮುಂದುವರಿದಿದೆಯಂತೆ.