ಅಬೂಜ: ಮಾಜಿ ಪ್ರಿಯಕರನ (Ex boyfriend ) ವಿರುದ್ಧ ಸೇಡು ತೀರಿಸಿಕೊಳ್ಳಲು ಹದಿಹರೆಯದ ಯುವತಿಯೊಬ್ಬಳು ಸೂಪ್ನಲ್ಲಿ ವಿಷ ಬೆರೆಸಿ ಐವರ ಹತ್ಯೆ ಮಾಡಿದ ಘಟನೆ (Viral News) ನೈಜೀರಿಯಾದ ಎಡೋ ಸ್ಟೇಟ್ನಲ್ಲಿ ನಡೆದಿದೆ. 16 ವರ್ಷದ ಆಯಿಷಾ ಸುಲೇಮಾನ್ (Aisha Suleiman) ಕೊಲೆ ಮಾಡಿದ ಯುವತಿ. ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಕಾಳು ಮೆಣಸಿನ ಸೂಪ್ನಲ್ಲಿ(Soup) ಆಕೆ ವಿಷ ಬೆರೆಸಿದ್ದಾಳೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಅಕ್ಟೋಬರ್ 26 ರಂದು ಉಜೈರುವಿನ ಅಫಾಶಿಯೋ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮಾಜಿ ಪ್ರಿಯಕರನನ್ನು ಕೊಲ್ಲುವ ಸಲುವಾಗಿ ಆಯಿಷಾ ಸೂಪ್ಗೆ ವಿಷ ಬೆರೆಸಿದ್ದಳು. ಅದನ್ನು ಕುಡಿದ ಆಕೆಯ ಮಾಜಿ ಗೆಳೆಯ 19 ವರ್ಷದ ಇಮ್ಯಾನುಯೆಲ್ ಎಲೋಜಿ, ಆತನ ಗೆಳತಿ ಅದಾ ಸ್ಯಾಮ್ಯುಯೆಲ್ ಮತ್ತು ಸ್ನೇಹಿತರಾದ ನೂರುದೀನ್, ಸ್ಯಾಮ್ಯುಯೆಲ್ ಆಯೆಗ್ವಾಲೊ ಮತ್ತು ಜೆಫ್ರಿ ಆಯೆಗ್ವಾಲೊ ಮೃತಪಟ್ಟಿದ್ದಾರೆ. ಮರುದಿನ ಬೆಳಗ್ಗೆ ಇಮ್ಯಾನುಯೆಲ್ ಎಲೋಜಿ ತಂದೆ ಅಪಾರ್ಟಮೆಂಟ್ಗೆ ಹೋದಾಗ ಮೃತ ಶವಗಳನ್ನು ನೋಡಿ ಆಘಾತಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
Edo State Police Command has arrested a 16-year-old girl identified as Aisha Suleiman accused of poisoning her ex-boyfriend and four others to death. pic.twitter.com/eeC8ikzXEC
— Naija (@Naija_PR) November 1, 2024
ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವಕ್ತಾರ ಮೋಸೆಸ್ ಜೋಯಲ್ ಇಯಾಮು, ಮೃತ ಇಮ್ಯಾನುಯೆಲ್ ತಂದೆ ಅಪಾರ್ಟಮೆಂಟ್ ಪ್ರವೇಶ ಮಾಡಿದಾಗ ಇಮ್ಯಾನುಯೆಲ್ ಸ್ನೇಹಿತ ನೂರುದೀನ್ ಮೃತ ದೇಹ ನೋಡಿ ಗಾಬರಿಯಾಗಿ ಒಳಗೆ ಹೋಗಿದ್ದಾರೆ. ನಂತರ ಇಮ್ಯಾನುಯೆಲ್ ಹಾಗೂ ಇತರರು ಮೃತಪಟ್ಟಿದ್ದನ್ನು ನೋಡಿ ನಮಗೆ ಮಾಹಿತಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Ajekaru Murder Case: ವಿಷವುಣಿಸಿ ಗಂಡನ ಕೊಲೆ ಮಾಡಿದ ರೀಲ್ಸ್ ರಾಣಿಯ ಬಾಯಿ ಬಿಡಿಸಿತು ದೈವ!
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಗಂಡನ ದೀರ್ಘಾಯುಷ್ಯಕ್ಕಾಗಿ ಮಾಡುವ ಕರ್ವಾ ಚೌತ್ ಪೂಜೆಯ ನಂತರ ಊಟದಲ್ಲಿ ವಿಷ ಬೆರೆಸಿ ಗಂಡನನ್ನು ಕೊಲೆ ಮಾಡಿದ್ದಾಳೆ. ಇಸ್ಮಾಯಿಲ್ಪುರ ಗ್ರಾಮದ ಶೈಲೇಶ್ ಕುಮಾರ್ (32) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಸವಿತಾ ತನ್ನ ಗಂಡನಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದು ಶಂಕಿಸಿ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಕೊಲೆಗೂ ಮೊದಲು ಸವಿತಾ ಕರ್ವಾ ಚೌತ್ ಉಪವಾಸ ಮಾಡಿದ್ದಳು. ಅದೇ ದಿನ ದಂಪತಿ ಜಗಳವಾಡಿದ್ದು, ಸವಿತಾ ಊಟದಲ್ಲಿ ವಿಷ ಬೆರೆಸಿದ್ದಾಳೆ. ನಂತರ ಗಂಡನನ್ನು ಪಕ್ಕದ ಮನೆಗೆ ಕಳುಹಿಸಿ ತಾನು ಮನೆಯಿಂದ ಪರಾರಿಯಾಗಿದ್ದಳು. ಊಟ ಮಾಡಿ ಕೆಲ ಹೊತ್ತಿನ ಬಳಿಕ ಶೈಲೇಶ್ ಕುಮಾರ್ ಅಸ್ವಸ್ಥಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತ ಪಟ್ಟಿದ್ದನು. ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದಾರೆ.