ಮಹಿಳೆಯೊಬ್ಬರು ತೆರೆದ ಬಾವಿಯ ಕಟ್ಟೆ ಮೇಲೆ ಮಗುವನ್ನು ಹಿಡಿದು ಕುಳಿತು ಮಾಡಿರುವ ರೀಲ್ಸ್ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ಎಲ್ಲರ ಗಮನ ಸೆಳೆದಿದೆ. ಭಾರಿ ವೈರಲ್ ಆಗಿರುವ ಅಪಾಯಕಾರಿಯಾಗಿರುವ ವಿಡಿಯೋ ನೋಡಿ ಅನೇಕ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ರೀಲ್ಸ್ ಗಾಗಿ ಕೆಲವರು ಎಂತಹ ಅಪಾಯವಾದರೂ ಸರಿ ಎದುರಿಸಲು ಸಿದ್ಧರಾಗಿರುತ್ತಾರೆ. ಕೆಲವರು ತಮ್ಮ ಜೀವವನ್ನಷ್ಟೇ ಅಲ್ಲದೆ ಇನ್ನೊಬ್ಬರ ಜೀವವನ್ನು ಅಪಾಯಕ್ಕೆ ತಳ್ಳುತ್ತಾರೆ. ಇಂತಹ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಎಷ್ಟೋ ಮಂದಿ ಈ ರೀತಿಯ ದುಸ್ಸಾಹಸ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡಿರುವ ಘಟನೆಗಳೂ ಇವೆ.
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಬೇಕು ಎನ್ನುವ ಹುಚ್ಚಿನಲ್ಲಿ ಪ್ರಾಣಾಪಾಯಕ್ಕೆ ಕಾರಣವಾಗುವ ವಿಡಿಯೋಗಳಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಇಲ್ಲಿ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ತೆರೆದ ಬಾವಿ ಕಟ್ಟೆ ಮೇಲೆ ಕುಳಿತು ಅಪಾಯಕಾರಿಯಾಗಿ ವಿಡಿಯೋ ಮಾಡಿರುವುದನ್ನು ನೋಡಿರುವ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖ್ಯಾತಿಗಾಗಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಹಿಡಿದುಕೊಂಡು ಅಪಾಯಕಾರಿ ಸ್ಟಂಟ್‌ಗಳನ್ನು ಚಿತ್ರೀಕರಿಸುವುದು ಹೊಸದೇನಲ್ಲ. ಆದರೆ ಇದರಿಂದ ತಮ್ಮ ಮಗುವಿನ ಪ್ರಾಣಕ್ಕೆ ಅಪಾಯವಿದೆ ಎಂಬುದನ್ನು ಅವರು ಯೋಚಿಸಲು ಹೋಗುವುದಿಲ್ಲವಲ್ಲ ಎನ್ನುವುದೇ ಅನೇಕರ ಆತಂಕ. ವೀಕ್ಷಕರ ಮೆಚ್ಚುಗೆಗಳಿಸಲು ಇನ್ನೊಬ್ಬರ ಅದರಲ್ಲೂ ಮುಖ್ಯವಾಗಿ ಪುಟ್ಟ ಕಂದಮ್ಮಗಳ ಜೀವವನ್ನು ಪಣಕ್ಕಿಡುವವರ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಲೇ ಇದ್ದರೂ ಕೆಲವರು ಇದಕ್ಕೆ ಕ್ಯಾರೇ ಎನ್ನುತ್ತಿಲ್ಲ.
Family court in custody case: Only mother can love child more. Even more than father.
— Raw and Real Man (@RawAndRealMan) September 18, 2024
Le mother:#ParentalAlienation pic.twitter.com/mc1kl5ziFj
ಎಕ್ಸ್ ನಲ್ಲಿ ಮಹಿಳೆಯೊಬ್ಬರ ವಿಡಿಯೋ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋದಲ್ಲಿ ತೆರೆದ ಬಾವಿಯ ಅಂಚಿನಲ್ಲಿ ಕುಳಿತಿರುವ ಮಗು ಮಹಿಳೆಯ ಕಾಲನ್ನು ಹಿಡಿದಿದೆ. ರೀಲ್ಸ್ ಮಾಡುವಾಗ ಮಹಿಳೆ ಮಗುವಿನ ಒಂದು ಕೈಯನ್ನು ಹಿಡಿದುಕೊಂಡಿದ್ದಾಳೆ. ಇನ್ನೊಂದು ಕೈಯಿಂದ ಕೆಲವು ಡಾನ್ಸ್ ಮಾಡುವುದನ್ನು ಕಾಣಬಹುದು. ಇದಕ್ಕೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್‌ನಲ್ಲಿ ಹಗಲಿನಲ್ಲಿ ಕೊಲೆ ಯತ್ನವೇ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಇದು ಎಲ್ಲಿ ಚಿತ್ರೀಕರಣ ಮಾಡಿರುವುದೆಂದು ಹೇಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಇದು ಕ್ರೌರ್ಯ ಮತ್ತು ಶಿಕ್ಷಾರ್ಹ. ಮಗು ಬೆಳೆದಾಗ ಮತ್ತು ಇದನ್ನು ನೋಡಿದಾಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅವಳು ಮರೆತಿದ್ದಾಳೆ ಎಂದು ಹೇಳಿದ್ದಾರೆ.
Accident News : ಕಾರು ಗುದ್ದಿದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ನಡುವೆ ಸಿಲುಕಿಕೊಂಡ ಮಹಿಳೆ! ಇಲ್ಲಿದೆ ವಿಡಿಯೊ
ಇನ್ನೊಬ್ಬ ಬಳಕೆದಾರರು, ಈ ಸಿಲ್ಲಿ ರೀಲ್ಸ್‌ಗಾಗಿ ಆತಕ ತನ್ನ ಮತ್ತು ಮಗುವಿನ ಪ್ರಾಣವನ್ನು ಪಣಕ್ಕಿಡುತ್ತಿದ್ದಾಳೆ ಎಂದು ಹೇಳಿದ್ದು, ಇನ್ನೊಬ್ಬರು, ನಾನು ಮಗುವಿನ ತಂದೆಯಲ್ಲ, ಆದರೆ ನನ್ನ ಹೃದಯ ಕರಗಿತು. ಮಗು ಪ್ರಾಣಾಪಾಯದಲ್ಲಿತ್ತು ಯೋಚಿಸಲು ಸಹ ನನಗೆ ಭಯವಾಗುತ್ತಿದೆ. ದಯವಿಟ್ಟು ತಪ್ಪು ವಿಷಯಗಳನ್ನು ಸಮರ್ಥಿಸಬೇಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಅವರಿಗೆ ಮಾನಸಿಕ ಆಸ್ಪತ್ರೆಗಳಿಂದ ಕೆಲವು ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.