ನೋಯ್ಡಾ: ಬೆಲೆಬಾಳುವಂತಹ ವಸ್ತುಗಳನ್ನು ಕಳ್ಳತನ ಮಾಡುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವರು ಮನೆಯ ಮುಂದಿಟ್ಟ ಚಪ್ಪಲಿ, ಹೂವಿನ ಪಾಟ್‍ಗಳು, ಬಟ್ಟೆ, ಶಾಪಿಂಗ್ ಮಾಲ್‍ಗಳಲ್ಲಿ ದಿನಸಿ ಆಹಾರಗಳನ್ನು ಕದಿಯುವ ಅಭ್ಯಾಸವಿಟ್ಟುಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಲವು ವಿಡಿಯೊಗಳು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದನ್ನು ನೀವೆಲ್ಲಾ ಕಂಡಿರಬಹುದು. ಆದರೆ ಇತ್ತೀಚೆಗೆ ಮಹಿಳೆಯೊಬ್ಬಳು ನೊಯ್ಡಾದ ಅಂಗಡಿಯೊಂದರ ಹೊರಗೆ ಇಟ್ಟಿದ ಹೂವಿನ ಪಾಟ್‍ವೊಂದನ್ನು ಕದ್ದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಹೂವಿನ ಪಾಟ್ ಕದ್ದ ದೃಶ್ಯವೊಂದು ಅಂಗಡಿಯ ಹೊರಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ನೋಡಿ ಅನೇಕರು ಶಾಕ್ ಆಗಿದ್ದಾರೆ. ಯಾಕೆಂದರೆ ಐಷಾರಾಮಿ ಕಾರಿನಲ್ಲಿ ಬಂದ ಮಹಿಳೆಗೆ 50-60ರೂಪಾಯಿ ಕೊಟ್ಟು ಒಂದು ಹೂವಿನ ಪಾಟ್ ಖರೀದಿಸುವುದು ಕಷ್ಟವೇ? ಎಂದು ಜನ ಶಾಕ್ ಆಗಿದ್ದಾರೆ.
#Watch: नोएडा की गमला चोर महिला का वीडियो वायरल हो रहा है। यह वीडियो सेक्टर- 18 का है जहां एक महिला कार से नीचे उतर एक दुकान के बाहर रखे गमले को चुराने लगती है। वीडियो में देखा जा सकता है कि कुछ लोग उसकी कार के पास आकर खड़े भी हो जाते हैं। हालांकि महिला वहां से निकल जाती है। यह… pic.twitter.com/0vuZwWZdSI
— Hindustan (@Live_Hindustan) October 27, 2024
ಸೆಕ್ಟರ್ -18ರಲ್ಲಿ ಇತ್ತೀಚೆಗೆ ರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಂಗಡಿಯ ಮೇನ್ ಡೋರ್ ಬಳಿ ಕೆಲವು ಹೂವಿನ ಪಾಟ್‍ಗಳನ್ನು ಇರಿಸಲಾಗಿತ್ತು. ಬಿಎಂಡಬ್ಲ್ಯು ಕಾರಿನಲ್ಲಿ ಬಂದು ಮಹಿಳೆ ಒಂದು ಹೂವಿನ ಪಾಟ್ ಅನ್ನು ತೆಗೆದುಕೊಂಡು ಅದನ್ನು ತನ್ನ ಕಾರಿನಲ್ಲಿ ಲೋಡ್ ಮಾಡಿದ್ದಾಳೆ. ಮಹಿಳೆಯ ಈ ಕೃತ್ಯದ ಬಗ್ಗೆ ಸ್ಥಳದಲ್ಲಿದ್ದ ಜನರು ಅವಳನ್ನು ಪ್ರಶ್ನಿಸಿದ್ದಾಗ ಅದಕ್ಕೆ ಮಹಿಳೆ ನಾನು ಪ್ರತಿದಿನ ಒಂದು ಪಾಟ್ ತೆಗೆದುಕೊಳ್ಳುತ್ತೇನೆ ಎಂದು ಉತ್ತರಿಸಿದ್ದನ್ನು ಕೇಳಿ ಜನರು ಆಘಾತಗೊಂಡಿದ್ದಾರೆ. ನಂತರ ಮಹಿಳೆ ಹೂವಿನ ಪಾಟ್‍ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾಳೆ.
ಇದನ್ನೂ ಓದಿ:ಗಂಡ ಕಪ್ಪೆಂದು ನೇಣಿಗೆ ಕೊರಳೊಡ್ಡಿದಳು ನವ ವಿವಾಹಿತೆ!
ಈ ವಿಡಿಯೊ ನೋಡಿದವರು ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆಕೆಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ. ಬಳಕೆದಾರರೊಬ್ಬರು ಈ ಬಿಎಂಡಬ್ಲ್ಯು ಅನ್ನು ಈ ರೀತಿ ಕದ್ದ ಹಣದಿಂದ ಖರೀದಿಸಿರಬೇಕು ಎಂದು ಬರೆದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮ ಕೈಗೊಂಡಿಲ್ಲ ಮತ್ತು ಮಹಿಳೆಯ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.