Sunday, 15th December 2024

ಕನಕದಾಸರ 535ನೇ ಜಯಂತಿ

ಗುಬ್ಬಿ : ತಾಲೂಕಿನ ಚೇಳೂರು ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ಕನಕದಾಸರ 535ನೇ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನಕ ಯುವಕ ಸಂಘದ ವತಿಯಿಂದ ಸಿಹಿ ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಚೇಳೂರು ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ್, ಪಿ. ಡಿ. ಒ. ಶ್ರೀನಿವಾಸ್, ಪುಟ್ಟರಾಜು, ಬಸವರಾಜು, ಮುಖಂಡರಾದ ಸಿದ್ದರಾಜು, ಪೂಜಾರ್ ಸಿದ್ದಲಿಂಗಪ್ಪ, ಮಹಾಲಿಂಗಪ್ಪ, ಮದು ಮೋಟಾರ್ ರಾಜು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ , ವಿಜಯಲಕ್ಷ್ಮಿ, ಜಯಮ್ಮ, ಆನಂದ್, ಶಿವಕುಮಾರ್, ಹಾಗೂ ಕನಕ ಯುವಕ ಸಂಘದ ಯುವಕರು ಪಾಲ್ಗೊಂಡಿದ್ದರು.