Sunday, 15th December 2024

ಮೆಜೆಂಟಾದಿಂದ 100 ಟಾಟಾ ಏಸ್ ಇವಿ ವಾಹನಗಳ ಖರೀದಿ

• ಮೆಜೆಂಟಾ ಮೊಬಿಲಿಟಿ- ಟಾಟಾ ಮೋಟರ್ಸ್ ಸಹಭಾಗಿತ್ವ ಮತ್ತಷ್ಟು ಸದೃಢ
• ಭಾರತದ ಅತ್ಯಂತ ಸುಧಾರಿತ, ಶೂನ್ಯ-ಮಾಲಿನ್ಯ, ಸಣ್ಣ ವಾಣಿಜ್ಯ ವಾಹನ

ಬೆಂಗಳೂರು: ದೇಶದಲ್ಲಿ ಎಲೆಕ್ಟ್ರಿಕ್ ಸಾರಿಗೆ ಪರಿಹಾರ ಪೂರೈಕೆದಾರ ಸಂಸ್ಥೆಯಾಗಿರುವ ಮೆಜೆಂಟಾ ಮೊಬಿಲಿಟಿ ತನ್ನ ಸಾರಿಗೆ ವ್ಯವಸ್ಥೆಯನ್ನು ಗಟ್ಟಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಮೆಜೆಂಟಾ ಮೊಬಿಲಿಟಿ ಟಾಟಾ ಮೋಟರ್ಸ್ ನ 100 ಟಾಟಾ ಏಸ್ ಇವಿ ವಾಹನಗಳನ್ನು ಖರೀದಿಸಲಿದೆ. ಈ ಪೈಕಿ 60 ಟಾಟಾ ಏಸ್ ಇವಿ ಮತ್ತು ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಏಸ್ ಇವಿ 1000 ನ 40 ವಾಹನಗಳನ್ನು ಖರೀದಿಸಲಿದೆ. ಈ ಎರಡೂ ಸಂಸ್ಥೆಗಳ ನಡುವೆ 2023 ರ ಅಕ್ಟೋಬರ್ ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಂತೆ 500 ಕ್ಕೂ ಹೆಚ್ಚು ಟಾಟಾ ಏಸ್ ಇವಿ ವಾಹನಗಳ ಪೂರೈಕೆ ಮಾಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಮೆಜೆಂಟಾ ಮೊಬಿಲಿಟಿ ಸಂಸ್ಥಾಪಕ & ಸಿಇಒ ಮ್ಯಾಕ್ಸನ್ ಲೂಯಿಸ್ ಅವರು, “ಟಾಟಾ ಮೋಟರ್ಸ್ ನೊಂದಿಗಿನ ಸಹಭಾಗಿತ್ವ ವನ್ನು ಇನ್ನಷ್ಟು ಗಟ್ಟಿಪಡಿಸಿಕೊಳ್ಳಲು ನಮಗೆ ತೀವ್ರ ಸಂತಸವಾಗುತ್ತಿದೆ. ಈ ಸಹಭಾಗಿತ್ವದ ಮೂಲಕ ದೇಶಾದ್ಯಂತ ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ಸಾರಿಗೆ ಪರಿಹಾರಗಳನ್ನು ನೀಡುವ ನಮ್ಮ ಬದ್ಧತೆಯನ್ನು ಹೆಚ್ಚಿಸಿದಂತಾಗುತ್ತದೆ. 2025 ರ ಸೆಪ್ಟೆಂಬರ್ ವೇಳೆಗೆ ನಮ್ಮ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸುವ ನಮ್ಮ ಮಹತ್ವಾಕಾಂಕ್ಷೆಯ `ಅಬ್ ಕಿ ಬಾರ್ ದಸ್ ಹಜಾರ್’ ಕಾರ್ಯಕ್ರಮದ ಗುರಿ ಸಾಧಿಸುವ ನಿಟ್ಟಿನಲ್ಲಿ 100 ಕ್ಕೂ ಹೆಚ್ಚು ಟಾಟಾ ಏಸ್ ಇವಿ ವಾಹನಗಳನ್ನು ಖರೀದಿಸುತ್ತಿರುವುದು ದಿಟ್ಟ ಹೆಜ್ಜೆ ಎನಿಸಿದೆ. ಲಾಜಿಸ್ಟಿಕ್ಸ್, ಚಾರ್ಜಿಂಗ್ ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ನಮ್ಮ ಸಾಮರ್ಥ್ಯಗಳೊಂದಿಗೆ ನಾಲ್ಕು ಚಕ್ರಗಳ ಸಣ್ಣ ವಾಣಿಜ್ಯ ವಾಹನಗಳಲ್ಲಿ (SCVs) ಟಾಟಾ ಮೋಟರ್ಸ್ ನ ಪರಿಣತಿಯನ್ನು ಸಂಯೋಜಿಸುವ ಮೂಲಕ ಈ ಸಹಭಾಗಿತ್ವವು ಉದ್ಯಮದ ಗುಣಮಟ್ಟವನ್ನು ಪುನರ್ ವ್ಯಾಖ್ಯಾನಿಸಲು ಸಿದ್ಧವಾಗಿದೆ’’ ಎಂದರು.

ಟಾಟಾ ಮೋಟರ್ಸ್ ನ SCVPU ಉಪಾಧ್ಯಕ್ಷ & ಬ್ಯುಸಿನೆಸ್ ಹೆಡ್ ವಿನಯ್ ಪಾಠಕ್ ಅವರು ಮಾತನಾಡಿ, “ಮೆಜೆಂಟಾ ಮೊಬಿಲಿಟಿಯೊಂದಿಗಿನ ನಮ್ಮ ಸಹಭಾಗಿತ್ವದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸುವ ಮೂಲಕ ಟಾಟಾ ಏಸ್ ಇವಿಗಳನ್ನು ತಮ್ಮ ಫ್ಲೀಟ್ ಗೆ ಅಡಕ ಮಾಡಿಕೊಳ್ಳಲು ನಾವು ಅಪಾರ ಹೆಮ್ಮೆಪಡುತ್ತೇವೆ. ಸುಧಾರಿತ, ಶೂನ್ಯ-ಮಾಲಿನ್ಯ ಹೊರಸೂಸುವಿಕೆ ಚಲನಶೀಲತೆಯ ಪರಿಹಾರಗಳ ಮೂಲಕ ನಗರ ಪ್ರದೇಶದೊಳಗಿನ ವಿತರಣೆಯನ್ನು ಕ್ರಾಂತಿಕಾರಕಗೊಳಿಸುವ ನಮ್ಮ ಹಂಚಿಕೆಯ ದೃಷ್ಟಿಯನ್ನು ಇದು ಪುನರುಚ್ಚರಿಸುತ್ತದೆ. ನಮ್ಮ ಹೆಮ್ಮೆಯ ಉತ್ಪನ್ನವಾದ ಏಸ್ ಇವಿ ಸರಿಸಾಟಿಯಿಲ್ಲದ

ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೂಲಕ ಭಾರತಕ್ಕೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುತ್ತಿದೆ. ಈ ವಾಹನಗಳ ಪೂರೈಕೆಯು ದೇಶಾದ್ಯಂತ ಸುಸ್ಥಿರ ಇ-ಕಾರ್ಗೋ ಸಾರಿಗೆ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಮ್ಮ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಒಟ್ಟಾಗಿ ನಾವು ಭಾರತಕ್ಕೆ ಸ್ವಚ್ಛ, ಹಸಿರು ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ಭವಿಷ್ಯದತ್ತ ಹೆಜ್ಜೆ ಇಟ್ಟಿದ್ದೇವೆ’’ ಎಂದು ತಿಳಿಸಿದರು.

ಏಸ್ ಇವಿ EVOGEN ಪವರ್ ಟ್ರೇನ್ ನಿಂದ ಚಾಲಿತವಾಗಿದ್ದು, ಇದರ ಬ್ಯಾಟರಿಗೆ 7 ವರ್ಷದ ವಾರಂಟಿ ಮತ್ತು 5 ವರ್ಷದವರೆಗಿನ ಸಮಗ್ರ ನಿರ್ವಹಣೆ ಪ್ಯಾಕೇಜ್ ಇರಲಿದೆ. ಈ ಮೂಲಕ ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡುತ್ತದೆ. ಇದು ಡ್ರೈವಿಂಗ್ ಶ್ರೇಣಿಯನ್ನು ಅಥವಾ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಟರಿ ಕೂಲಿಂಗ್ ಸಿಸ್ಟಂ ಮತ್ತು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಗಳಿಂದಾಗಿ ಸುರಕ್ಷಿತ, ಎಲ್ಲಾ ಹವಾಮಾನ ಕಾರ್ಯಾಚರಣೆಗಳಿಗೆ ಪೂರಕವಾಗಿರುತ್ತದೆ. ಇದು ಹೆಚ್ಚಿನ ಸಮಯಕ್ಕಾಗಿ ನಿಯಮಿತ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯ ಗಳನ್ನು ಹೊಂದಿದ್ದು, 27kw (36hp) ಮೋಟಾರ್ ನಿಂದ 130Nm ಪೀಕ್ ಟಾರ್ಕ್ ನೊಂದಿಗೆ ಚಾಲಿತವಾಗಿದೆ. ಅತ್ಯುತ್ತಮ ಇನ್-ಕ್ಲಾಸ್ ಪಿಕಪ್ ಮತ್ತು ಗ್ರೇಡ್ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಲೋಡ್ ಮಾಡಲಾದ ಪರಿಸ್ಥಿತಿಗಳಲ್ಲಿ ಸುಲಭವಾಗಿ ಏರಲು ಅನುವು ಮಾಡಿಕೊಡು ತ್ತದೆ. ಈ ವಾಹನದ ದೃಢವಾದ ಕಾರ್ಯಕ್ಷಮತೆ, ಸುಮಾರು ಶೇ.100 ರಷ್ಟು ಅಪ್ ಟೈಂನೊಂದಿಗೆ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಮೂಲಕ ಅವರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಮೆಜೆಂಟಾ ಮೊಬಿಲಿಟಿಯು ಎಚ್ ಪಿಸಿಎಲ್, ಬಿಪಿ, ಮೋರ್ಗನ್ ಸ್ಟಾನ್ಲಿ, JITO ಏಂಜೆಲ್ ನೆಟ್ವರ್ಕ್ ಮತ್ತು ಹೆಸರಾಂತ ಭಾರತೀಯ ಅಮೇರಿಕನ್ ಜನೋಪಕಾರಿ ಎನಿಸಿರುವ ಡಾ.ಕಿರಣ್ ಪಟೇಲ್ ಸೇರಿದಂತೆ ಗೌರವಾನ್ವಿತ ಹೂಡಿಕೆದಾರರನ್ನು ಒಳಗೊಂಡಿದೆ. ಕಂಪನಿಯು ಎಲೆಕ್ಟ್ರಿಕ್ ಮೊಬಿಲಿಟಿ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಭಾರತದ ಸಾರಿಗೆ ಲ್ಯಾಂಡ್ ಸ್ಕೇಪ್ ನಲ್ಲಿ ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಟಾಟಾ ಮೋಟಾರ್ಸ್ ಜೊತೆಗಿನ ಈ ಸಹಭಾತ್ವದ ವಿಸ್ತರಣೆ ಮತ್ತು 100 ಟಾಟಾ ಏಸ್ ಇವಿಗಳ ನಿಯೋಜನೆ ಮಾಡಿಕೊಳ್ಳುವ ಮೂಲಕ ಮೆಜೆಂಟಾ ಇಂಗಾಲ ಹೊರಸೂಸುವಿಕೆ ಮುಕ್ತ ಸಾರಿಗೆ ವ್ಯವಸ್ಥೆಗೆ ತನ್ನ ಬದ್ಧತೆಯನ್ನು ಪುನರುಚ್ಚಿಸುತ್ತದೆ.