Sunday, 15th December 2024

ಗ್ರಾಮಾಂತರ ಬಿಜೆಪಿ ನೂತನ ಕಾರ್ಯಾಲಯ: ನ ೨೧ಕ್ಕೆ ನಡ್ಡಾ, ಶಾ ಉದ್ಘಾಟನೆ

ತುಮಕೂರು ಗ್ರಾಮಾಂತರ :  ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಾಣಾವರದಲ್ಲಿ ನ ೨೧ ರಂದು ನೂತನ ತಾಲೂಕು ಬಿಜೆಪಿ ಕಾರ್ಯಾಲಯವನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಉದ್ಘಾಟಿಸಲಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು.
ನೂತನ ಕಟ್ಟಡ ನಿರ್ಮಾಣಕ್ಕೆ ಬಾಗಿಲು ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ವಿಧಾನಸಭಾ ರಾಜಕೀಯ ಲೆಕ್ಕಾಚಾರ ಶುರುವಾಗಿದ್ದು ಗ್ರಾಮಾಂತರದಲ್ಲಿ ಕಚೇರಿ ನಿರ್ಮಾಣ ಮಾಡಿರುವುದರಿಂದ ಹೊನ್ನುಡಿಕೆ ಗೂಳೂರು, ಹೆಟ್ಟೂರು, ಕಸಬಾ ಹಾಗೂ ಊರ್ಡಿಗೆರೆ ವ್ಯಾಪ್ತಿಗೆ ಅನುಕೂಲಕರವಾಗುತ್ತಿದ್ದು ಕಾರ್ಯಕರ್ತರು ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು. ಗ್ರಾ. ಪಂ. ಮಾಜಿ ಅಧ್ಯಕ್ಷೆ ಸುಮಿತ್ರಮ್ಮ ಹೊನ್ನುಡಿಕೆ ಶ್ರೀನಿವಾಸ್, ಲಕ್ಕೇನಹಳ್ಳಿ ಗೋಪಿನಾಥ್,  ಪಾಪಣ್ಣ, ಮುಖಂಡರು ಹಾಜರಿದ್ದರು.