ತುಮಕೂರು: ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭಾ 23ನೇ ಮಹಾ ಅಧಿವೇಶನದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಶರಣ-ಶರಣೆಯರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ತಿಳಿಸಿದರು.
ಪ್ರತಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1904ರಲ್ಲಿ ಸ್ಥಾಪನೆಗೊಂಡ ಸಂಘಟನೆಗೆ 118 ವರ್ಷಗಳ ಇತಿಹಾಸವಿದ್ದು, 23 ಅಧ್ಯಕ್ಷರುಗಳನ್ನು ಕಂಡಿದೆ, ಪ್ರತಿಬಾರಿ ಅಧ್ಯಕ್ಷರ ಕೊನೆ ಅವಧಿಯಲ್ಲಿ ಮಹಾಧಿವೇಶನವನ್ನು ಹಮ್ಮಿಕೊಂಡು ಸಂಘದ ಬೆಳವಣಿಗೆ ಹಾಗೂ ಮುಂದಿನ ಯೋಜನೆಗಳನ್ನು ಜನರಿಗೆ ತಿಳಿಸುವ ಪ್ರತೀತಿ ಯನ್ನು ಪಾಲಿಸುತ್ತಿದ್ದು, ಪ್ರಸ್ತುತ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ 23ನೇ ಮಹಾಧಿವೇಶವನ್ನು ಡಿ.24,25,26ರಂದು ದಾವಣಗೆರೆಯಲ್ಲಿ ಏರ್ಪಡಿಸಲಾಗಿದೆ ಎಂದರು.
ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಜಿಲ್ಲಾ ಘಟಕಗಳ ಸಹಕಾರ ದೊಂದಿಗೆ ನಡೆಯಲಿರುವ ಸಮಾ ರಂಭದಲ್ಲಿ ನಾಡಿನ ಮಠಾಧೀಶರು, ರಾಜಕೀಯ ಮುಖಂಡರು, ಸಾಹಿತಿಗಳು, ಸಂಶೋಧಕರು, ಕೃಷಿ ತಜ್ಞರು, ಸಮಾಜದ ಗಣ್ಯರು, ಕಲಾವಿ ದರು ಸೇರಿದಂತೆ ಒಂದೂವರೆ ಲಕ್ಷಕ್ಕೂ ಅಧಿಕ ಶರಣ-ಶರಣೆಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ, ಕೃಷಿ, ಯುವ ಮಹಿಳಾ ಅಧಿವೇಶನಗಳು ಹಾಗೂ ಸಾಂಸ್ಕೃತಿಕ ಪರಂಪರೆ ಕುರಿತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಮತ್ತು ಕೈಗಾರಿಕ, ವಾಣಿಜ್ಯ, ಪುಸ್ತಕ, ಕೃಷಿ ಮಾರಾಟಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ವಚನ ಗಾಯನ, ನೃತ್ಯ ರೂಪಕ, ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯ ವೀರಶೈವ-ಲಿಂಗಾಯತ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಅಧಿ ವೇಶನ ದಲ್ಲಿ ಭಾಗವಹಿಸುವವರು ಡಿ.10ರೊಳಗೆ ನೋಂದಣಿ ಮಾಡಿಕೊಂಡವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್ ಪಟೇಲ್, ಕಾರ್ಪೋ ರೇಟರ್ ಸೆಕ್ಟರ್ ಚೇತನ್‌ಕುಮಾರ್, ಯುವಘಟಕದ ಅಧ್ಯಕ್ಷರಾದ ರಕ್ಷಿತ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮನುಕೊಪ್ಪ, ಯುವಘಟಕದ ಉಪಾಧ್ಯಕ್ಷ ದರ್ಶನ್, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಮತ ದಿವಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.