Wednesday, 24th April 2024

ರಾಜ್ಯದಲ್ಲಿ ನೂತನ ೩೦ ಆಡಳಿತಸೌಧ ನಿರ್ಮಿಸಲು ಯೋಜನೆ: ಆರ್.ಅಶೋಕ

ಕಾಫಿ, ರಬ್ಬರ್ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕಂದಾಯ ಇಲಾಖೆಯ ಕಾಯ್ದೆಗಳಿಗೆ ತಿದ್ದುಪಡಿ  

ಚಿಕ್ಕಬಳ್ಳಾಪುರ : ಕೊರೋನಾ ಸೋಂಕು ನಿಯಂತ್ರಿಸಲು ಕಂದಾಯ ಇಲಾಖೆಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಅನುದಾನ ವನ್ನು ಬಳಕೆ ಮಾಡಲಾಗಿತ್ತು. ಇದೀಗ ಸೋಂಕು ನಿಯಂತ್ರಣಗೊ0ಡಿದ್ದು ರಾಜ್ಯಾದ್ಯಂತ ನೂತನವಾಗಿ ೩೦ ಆಡಳಿತಸೌಧವನ್ನು ನಿರ್ಮಿ ಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು ಅವರು ಅನುಮೋದನೆ ನೀಡಿದ ತಕ್ಷಣ ಹೊಸ ಆಡಳಿತ ಸೌಧ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಜಿಲ್ಲೆಯ ಜರಬಂಡಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಂತರ ಸುಧ್ಧಿಗಾರ ರೊಂದಿಗೆ ಮಾತನಾಡಿದ ಅವರು ಜನರಿಗೆ ಸರ್ಕಾರಿ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು.ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ೩೦ ಸುವರ್ಣಸೌಧಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕ0ದಾಯ ಕಾಯ್ದೆಗಳಿಗೆ ತಿದ್ದುಪಡಿ: ರೈತರ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳನ್ನು ಕಂದಾಯ ಇಲಾಖೆ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಕಾಫೀ ರಬ್ಬರ್ ಬೆಳೆಗಾರರು ಸುಮಾರು ೧ ಲಕ್ಷಕ್ಕೂ ಅಧಿಕ ಎಕರೆ ಜಮೀನಿನಲ್ಲಿ ೭೦-೮೦ ವರ್ಷಗಳಿಂದ ಉಳಿಮೆ ಮಾಡುತ್ತಿದ್ದಾರೆ. ಅವರಿಂದ ವಾಪಸ್ಸು ಪಡೆಯುವುದಕ್ಕೆ ಆಗಿಲ್ಲ. ಅವರಿಗೆ ಕೊಡುವುದಕ್ಕೂ ಆಗಿಲ್ಲ. ಹೀಗಾಗಿ ಅವರ ಅನುಕೂಲಕ್ಕಾಗಿ ಒಂದು ಕಾಯ್ದೆಯನ್ನು ತರುತ್ತಿದ್ದೇನೆ. ಬೆಳೆಗಾರರಿಗೆ ೩೦ ವರ್ಷ ಲೀಸ್‌ಗೆ ಕೊಟ್ಟು ಸರ್ಕಾರಕ್ಕೆ ವಾರ್ಷಿಕ ಇಂತಿಷ್ಟು ಅಭಿವೃದ್ದಿ ಶುಲ್ಕವನ್ನು ಪಾವತಿಸಿ, ಅವರು ವ್ಯವಸಾಯ ಮಾಡಿ ಜೀವನ ನಿರ್ವಹಿಸಲು ಅನುಕೂಲವಾಗಲಿದೆ ಎಂದರು.

ಭೂ ಪರಿವರ್ತನೆಗೆ ಕಾಯ್ದೆ ತಿದ್ದುಪಡಿ: ರೈತರು ತಮ್ಮ ಕಂದಾಯ ಭೂಮಿಯಲ್ಲಿಯೇ ವಾಸಕ್ಕೆ ಮನೆ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಭೂ ಪರಿವರ್ತನೆ ಮಾಡಿಕೊಂಡು ಮನೆ ಕಟ್ಟಿಕೊಳ್ಳಲು ಅವಕಾಶ ಆಗುವಂತೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇರುವಂತಹ ಕಾನೂನಿನ ಅಡಿಯಲ್ಲಿ ೬ ತಿಂಗಳಿAದ ಒಂದು ವರ್ಷ ಕಾಯುವಂತಹ ಪರಿಸ್ಥಿತಿ ಯಿತ್ತು. ಕೇವಲ ೭ ದಿನಗಳಲ್ಲಿ ಭೂ ಪರಿವರ್ತನೆ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲು ಬೆಳಗಾವಿಯ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುವುದಾಗಿ ಹೇಳಿದರು.

ಅದೇ ರೀತಿಯಲ್ಲಿ ಎಸ್.ಸಿ,ಎಸ್.ಟಿಗಾಗಿ ಇರುವ ಪಿಟಿಸಿಎಲ್ ಕಾಯ್ದೆಯಿಂದ ದಲಿತರು ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಇಲ್ಲ. ಯಾಕೆಂದರೆ ಅದಕ್ಕಾಗಿ ಒಂದು ಪ್ರಸ್ತಾವನೆ ಸರ್ಕಾರಕ್ಕೆ ಬರಬೇಕು ಅದು ಎರಡು ಮೂರು ತಿಂಗಳು ಸಮಯಾವಕಾಶ ಬೇಕಾಗಿರುವುದರಿಂದ ಅದಕ್ಕೆ ಬದಲಾವಣೆ ತರಲು ನಿರ್ಧರಿಸಲಾಗಿದೆ. ಸರ್ಕಾರದ ಬದಲಿಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ. ಇದರಿಂದ ದಲಿತರ ನಿರ್ಧಿಷ್ಠ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಬಹುದಾಗಿದೆ ಎಂದರು.

ಸರ್ಕಾರದ ಖಜಾನೆ ಖಾಲಿಯಾಗಿಲ್ಲ: ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ ಖಜಾನೆ ಖಾಲೆಯಾಗಿದೆಯೆಂದು ಟೀಕೆ ಮಾಡುತ್ತಾರೆ ಆದರೇ ಬಂದು ಅವರು ನೋಡಬೇಕು.ರಾಜ್ಯದ ಪ್ರತಿಯೊಂದು ಜಿಲ್ಲಾಧಿಕಾರಿ ಖಾತೆಯಲ್ಲಿ ಕನಿಷ್ಟ ೫ ಕೋಟಿ ಇರುವಂತೆ ನಿಗಾವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ ೬೦ಕೋಟಿ ಇದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ೧೪ ಕೋಟಿ ಇದೆ. ಅವರು ಹೇಳಿದಂತೆ ನಾವು ದಿವಾಳಿ ಹಂತಕ್ಕೆ ಹೋಗಿಯೇ ಇಲ್ಲ. ಮುಖ್ಯಮಂತ್ರಿಗಳ ಆಸಕ್ತಿಯಿಂದ ತೆರಿಗೆ ಸಂಗ್ರಹ ತೃಪ್ತಿದಾಯಕವಾಗಿದೆ ಎಂದು ಸ್ಪಷ್ಟಪಡಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು ನಾಡ ಕಚೇರಿಗಳಲ್ಲಿ ಬೆಳಿಗ್ಗೆ ೧೧ ರಿಂದ ಸಂಜೆ ೫ ಗಂಟೆಯವರೆಗೆ ಜನರಿಗೆ ಸಿಗಬೇಕು ಗ್ರಾಮೀಣ ಪ್ರದೇಶದಲ್ಲಿ ವಸತಿನಿಲಯ ಇಲ್ಲ ಅಂದರೆ ಬಾಡಿಗೆ ಮನೆಗಳನ್ನು ಪಡೆದು ಗ್ರಾಮದಲ್ಲಿ ವಾಸ್ತವ್ಯ ಮಾಡಿ ಜನರಿಗೆ ಸೇವೆ ಮಾಡಬೇಕು ಈ ಸಂಬ0ಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ ಕಂದಾಯ ಸಚಿವರು ಸುತ್ತೋಲೆಯನ್ನು ಹೊರಡಿಸಲಾಗುವುದೆಂದರು.

ಮುಖ್ಯಮ0ತ್ರಿಗಳ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ: ೨೫ ಸಾವಿರ ಫಲಾನುಭವಿಗಳಿಗೆ ಪರಿಹಾರ ಮತ್ತು ಸೌಲಭ್ಯ ನೀಡುವಂತಹ ಯೋಜನೆಯನ್ನು ರೂಪಿಸಲಾಗಿದೆ. ನಾನು ಮಾಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈಗಾಗಲೇ ಸುಮಾರು ೭೦ ಸಾವಿರ ಜನರಿಗೆ ವಿವಿಧ ಸವಲತ್ತುಗಳನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮಾಡಿರುವ ಗ್ರಾಮ ವಾಸ್ತವ್ಯಗಳಲ್ಲಿ ಅನೇಕ ಜನರಿಗೆ ಸೌಲಭ್ಯಗಳು ಒದಗಿಸಲಾಗಿದ್ದು ಲಕ್ಷಾಂತರ ಜನರಿಗೆ ಇದರಿಂದ ಅನುಕೂಲವಾಗಿದೆ ಎಂದರು.

ಶಾಸಕರಿಗೆ ಪತ್ರ
ರಾಜ್ಯದಲ್ಲಿರುವ ಎಂಎಲ್‌ಎ, ಎಂಎಲ್‌ಸಿಗಳಿಗೆ ಪತ್ರ ಬರೆದು ಆಯಾ ವಿಧಾನ ಸಭಾ ಕ್ಷೇತ್ರದಲ್ಲಿರುವ ಸರಕಾರಿ ಭೂಮಿಯ ಲಭ್ಯತೆ ಆಧಾರದಲ್ಲಿ ಸಾಗುವಳಿ, ಸರಕಾರಿ ಶಾಲೆ ಆಸ್ಪತ್ರೆ ಇನ್ನಿತರೆ ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು.ಬಹಳಷ್ಟು ರೈತರು ಅವರ ಭೂಮಿಯ ನೋಂದಣಿ ಆಗಿದ್ದರೂ ಕೂಡ ಖಾತೆ ಮಾಡಲು ಇರುವ ಸಮಯಾವಕಾಶ ೩೪ ದಿನ ಇದ್ದರೂ ೭ದಿನಗಳಲ್ಲಿ ಇತ್ಯರ್ಥಪಡಿಸಲು ಸೂಚನೆ ನೀಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಿಂಚಣಿಗಾಗಿ ಪ್ರತಿ ವರ್ಷ ೨೯೧ಕೋಟಿ ಖರ್ಚು ಆಗುತ್ತಿದ್ದು,೨೦೪ ಕಂದಾಯ ಗ್ರಾಮಗಳನ್ನು ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ೪೩೫ ಮನೆಗಳು ಮಳೆಯಿಂದಾಗಿ ಹಾನಿಗೆ ಒಳಗಾಗಿದ್ದು ೩.೬೯ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ೧೨೨೫ ಮಂದಿ ಮೃತಪಟ್ಟಿದ್ದು ಅವರಿಗೆ ೯ ಕೋಟಿ ಸಹಾಯಧನ ಕುಟುಂಬ ಸದಸ್ಯರ ಖಾತೆಗೆ ಜಮಾ ಮಾಡಲಾಗಿದೆ.ಫವತಿ ಖಾತಾ ಆಂದೋಲನಾ ಮಾಡುತ್ತಿದ್ದೇವೆ.ಜಿಲ್ಲೆಯಲ್ಲಿ ೩೯೭೬ ರೈತರ ಬೆಳೆ ಹಾನಿಯಾಗಿದ್ದು ಅದರಲ್ಲಿ ೫.೩೮ ಕೋಟಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.ಇದರಿಂದಾಗಿ ಜನರಿಗೆ ಸರಕಾರದ ಮೇಲೆ ನಂಬಿಕೆ ವಿಶ್ವಾಸ ಸರಕಾರದ ಮೇಲೆ ಹೆಚ್ಚಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್,ಜಿಲ್ಲಾಧಿಕಾರಿ ನಾಗರಾಜ್, ಜಿಲ್ಲಾಪಂಚಾಯಿತಿ ಸಿಇಒ ಶಿವಶಂಕರ್, ಎಸ್‌ಪಿ. ನಾಗೇಶ್, ಮುಖಂಡರಾದ ಎಸ್‌ಆರ್‌ಎಸ್ ದೇವರಾಜ್,ಮರಳುಕುಂಟೆ ಕೃಷ್ಣಮೂರ್ತಿ, ಬೈರೇಗೌಡ, ಹನುಮೇಗೌಡ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

error: Content is protected !!