Sunday, 24th November 2024

Kalaburagi News: ಸಿದ್ಧಸಿರಿ ಸಕ್ಕರೆ 4.35 ಕೋಟಿ ತೆರಿಗೆ ಬಾಕಿ ಉಳಿಸಿ ಕೊಂಡ ಕಾರ್ಖಾನೆಗೆ ನೋಟಿಸ್ ಜಾರಿಗೆ ತಿರ್ಮಾನ

ನೂತನ ಅಧ್ಯಕ್ಷ ಆನಂದ ಟೈಗರರಿಂದ ಚೊಚ್ಚಲ ಸಾಮಾನ್ಯ ಸಭೆ
ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ

ಚಿಂಚೋಳಿ: ಒಂದುವರೆ ವರ್ಷದಿಂದ ಸಾಮಾನ್ಯ ಸಭೆ ಜರುಗದೆ ಉಳಿದಿದ್ದ ಚಿಂಚೋಳಿ ಪುರಸಭೆಗೆ ಆನಂದ ಟೈಗರ್ ಅವರು ನೂತನ ಪುರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಪುರಸಭೆ ಸಭಾಂಗಣದಲ್ಲಿ ಮೊದಲ ಬಾರಿಗೆ ಸಮಾನ್ಯ ಸಭೆ ನಡೆಸಿದರು.

ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಶುಭಿವೃದ್ಧಿ ಇಲಾಖೆ, ಲೋಕೋಪಯೋಗಿ, ಜೆಸ್ಕಾಂ, ಕಾರ್ಮಿಕ ಇಲಾಖೆ, ಅಕ್ಷರದಾಸೋಹ, ವಸತಿ ನಿಲಯಗಳ ಅಧಿಕಾರಿಗಳಿಗೆ ಸಾಮಾನ್ಯ ಸಭೆಗೆ ಆಹ್ವಾನಿಸಲಾಗಿತು.

ಸರಕಾರದ ಯೋಜನೆಗಳು ಜನರಿಗೆ ಮುಟ್ಟಿಸುವ ಕೆಲಸ ಪ್ರಾಮಾನಿಕತೆಯಿಂದ ಮಾಡಬೇಕೆಂದು ತಾಕಿತು ಮಾಡಿದ ರಲ್ಲದೆ ಅಧಿಕಾರಿಗಳು ಪುರಸಭೆಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಂಡು ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು. ಪುರಸಭೆಯ ವ್ಯಾಪ್ತಿಯ ವಾರ್ಡಗಳಿಗೆ ಮೂಲಭೂತ ಸೌಕರ್ಯ ದಗಿಸುವುದರೊಂದಿಗೆ, ನಿರ್ಗತಿಕರ, ಕಡುಬಡವರ, ಮಹಿಳೆಯರಿಗೆ ಮುಖ್ಯವಾಹಿನಿಗೆ ತರುವ ಕೆಲಸ ಮಾಡುವುದರೊಂದಿಗೆ ನಗರದ ಸ್ವಚ್ಛತೆಯ ನೈರ್ಮಲ್ಯ ಕಾಪಾಡಿಕೊಳ್ಳುವುದು ಆಡಳಿತ ಮತ್ತು ಅಧಿಕಾರಿಗಳ ಜವಬ್ದಾರಿ ಮತ್ತು ಕರ್ತವ್ಯವಾಗಿದೆ. ಚಿಂಚೋಳಿ ಪುರಸಭೆ ಶ್ರೇಯೊಭಿವೃದ್ಧಿಯೇ ಪುರಸಭೆಯ ಮುಖ್ಯ ಗುರಿಯಾಗಿದೆ ಎಂದರು.

ಬಿಜಾಪೂರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಒಡೆತನದ ಸಿದ್ಧಸಿರಿ ಎಥಿನಾಲ್ ಸಕ್ಕರೆ ಕಾರ್ಖಾನೆ 4.35 ಕೋಟಿ ರು ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಪುರಸಭೆ ಅಭಿವೃದ್ಧಿ ಕುಂಠಿತಗೊಳುತ್ತಿವೆ.

ಕಾರ್ಖಾನೆಗೆ ನೋಟಿಸ್ ಜಾರಿ ಮಾಡಿ, ತೆರಿಗೆ ಪಾವತಿಸಿಕೊಳ್ಳಬೇಕು. ಪಾವತಿಸದ ಹೊರತು ಕಾರ್ಖಾನೆಗೆ ಬಿಗ ಜಡಿದು ಕಾನೂನು ಹೋರಾಟಕ್ಕೆ ಸಿದ್ದತೆ ನಡೆಸಬೇಕೆಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರಿಂದ ಅಪಸ್ವರ ಕೇಳಿ ಬಂದಿತ್ತು. ಇನ್ನೂ ಪುರಸಭೆ ಕಾನೂನು ಸಲಹೆಗಾರರು ಬಿಜೆಪಿ ಪಕ್ಷದ ವಕ್ತಾರರಾಗಿದ್ದು, ಅವರನ್ನು ಬದಲಾವಣೆ ಮಾಡಿ, ಪಕ್ಷಾತೀತವಾಗಿರುವ ವಕೀಲರನ್ನು ನೇಮಿಸಿಕೊಳ್ಳುವ ಇಂಗಿತವನ್ನು ಅಧ್ಯಕ್ಷ ಆನಂದ ಟೈಗರ್ ಪ್ರಸ್ತಾಪಿಸಿದರು.

ಇದಕ್ಕೆ ಸದಸ್ಯರಾದ ಶಬ್ಬೀರ್, ಅನ್ವರ ಕತೀಬ್, ಅಬ್ದುಲ್ ಬಾಷಿದ್, ಬಸವರಾಜ ಸಿರಸಿ ಅವರು ಸಹಮತ ವ್ಯಕ್ತಪಡಿಸಿ ದರೆ, ಬಿಜೆಪಿ ಸದಸ್ಯರಾಸ ಶಿವಕುಮಾರ ಪೋಚಾಲಿ, ಪಕ್ಷೇತರ ಸದಸ್ಯ ಭೀಮರಾವ ರಾಠೋಡ, ಜಗದೇವಿ ಗಡಂತಿ ಅವರು ಪ್ರಸ್ತುತವಿರುವ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರ ಬದಲಾವಣೆಗೆ ವಿರೋಧಿ ಸಿದರು.

23 ವಾರ್ಡಗಳ ಸಮಗ್ರ ಅಭಿವೃದ್ಧಿಗೆ ಡಿ.ಪಿಆರ್ ತಯ್ಯಾರಿಸುವುದು ಮತ್ತು ಸಮಗ್ರ ನೀರು ಸರಬರಾಜು ವ್ಯವಸ್ಥೆಯ ನೀಲಿ ನಕ್ಷೆ ಸಿದ್ದಪಡಿಸುವುದು, ಕರ ವಸೂಲಿ, ಕರ ಕ್ರೋಢೀಕರಣ, ಕುಡಿಯುವ ನೀರು ನಿರ್ವಹಣೆ, ಆರೋಗ್ಯ ಮತ್ತು ಶಿಕ್ಷಣ, ನಗರ ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ, ಬಾಕಿ ಉಳಿದಿರುವ ಕರ ವಸೂಲಿ, ಕರ ಪಾವತಿಸದೇ ಅನಧಿ ಕೃತವಾಗಿ ನಿರ್ಮಾಣಗೊಂಡಿರುವ ಮತ್ತು ಚಾಲ್ತಿಯಲ್ಲಿರುವ ಕಟ್ಟಡಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ವಿವಿಧ ಇಲಾಖೆಗಳು ಮತ್ತು ವಿವಿಧ ವಸತಿ ಯೋಜನೆಗಳಲ್ಲಿ ನಿರ್ಮಾಣ ಗೊಂಡಿರುವ ಹಾಗೂ ನಿರ್ಮಾಣಗೊಳುತ್ತಿರುವ ಮನೆಗಳ ಕುರಿತು ಸಭೆಯಲ್ಲಿ ಚರ್ಚೆಸಲಾಯಿತು.

ಅಧಿಕಾರಿಗಳಾದ ನಾಗಶೆಟ್ಟಿ ಭದ್ರಶೆಟ್ಟಿ, ಜಯಪ್ಪ ಚಾಪೇಲ, ಬಸವರಾಜ ಬೈನೂರ, ಗಿರಿರಾಜ ಸಜ್ಜನ್, ಸಾಗರ, ಸವಿತಾ ಮಡಿವಾಳ ಅವರು ಈ ಸಂದರ್ಭದಲ್ಲಿದ್ದರು.

ಪುರಸಭೆ ಉಪಾಧ್ಯಕ್ಷೆ ಸುಲ್ತಾನಾ ಬೇಗಂ, ಮುಖ್ಯಅಧಿಕಾರಿ ಕಾಶಿನಾಥ ಧನ್ನಿ, ಸದಸ್ಯರಾದ ಅಬ್ದುಲ್ ಬಾಷಿದ್, ಭೀಮರಾವ ರಾಠೋಡ, ಶಿವಕುಮಾರ ಪೋಚಾಲಿ, ರೂಪಕಲಾ ಕಟ್ಟಮನಿ, ಕವಿತಾ ಬಸವರಾಜ, ಸುಲೋಚನಾ ಕಟ್ಟಿ, ರಾಧಬಾಯಿ ಓಲಗೇರಿ, ಫರ್ಜಾನ ಬೇಗಂ, ಬಸವರಾಜ ಸಿರಸಿ, ಸುಶೀಲಕುಮಾರ, ಲಕ್ಷ್ಮೀಕಾಂತ ಸುಂಕದ, ಶಬ್ಬೀರ ಸಭೆಯಲ್ಲಿದ್ದರು.

ಇದನ್ನೂ ಓದಿ: Kalaburagi Rain: ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ಥ