Thursday, 12th December 2024

ಕೆಎಎಸ್, ಪಿಎಸ್ ಐ, ಎಫ್ ಡಿಎ ಪರೀಕ್ಷೆಗಳಿಗೆ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್ ಐ, ಎಫ್ ಡಿಎ, ಎಸ್ ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್‌ ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್‌ಪುರದಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾ ಡೆಮಿ ವತಿಯಿಂದ 4 ತಿಂಗಳ ಅಥವಾ ಒಂದು ವರ್ಷದವರೆಗೆ ಉಚಿತ ತರಬೇತಿ ನೀಡ ಲಾಗುತ್ತಿದೆ.

ಜು.29ರಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಹುದಾಗಿದೆ. ಎಲ್ಲಾ ಸಮು ದಾಯದ ಅಭ್ಯರ್ಥಿಗಳು ಇದರ ಸದುಪ ಯೋಗ ಪಡೆದುಕೊಳ್ಳಬಹುದು.

ಅಕಾಡಮಿಯಲ್ಲಿ ತರಬೇತಿ ನೀಡಲು ಅತ್ಯುತ್ತಮ ಪರಿಣಿತಯ ಉಪನ್ಯಾಸಕರನ್ನು ನೇಮಿಸಲಾಗಿದೆ. ಅಕಾಡೆಮಿಯಲ್ಲಿ 24/7 ಗ್ರಂಥಾಲಯ ಸೌಲಭ್ಯ, ಪ್ರತಿ ವಾರ ಟೆಸ್ಟ್, ಪ್ರತಿ ವಿದ್ಯಾರ್ಥಿಗೆ ನ್ಯೂಸ್ ಪೇಪರ್‌ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಕನಿಷ್ಟ ಶುಲ್ಕ ಇರುತ್ತದೆ ಎಂದು ಅಕಾಡಮಿಯ ನಿರ್ದೇಶಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ವಿಳಾಸ: ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ, GRT ಜ್ಯುವೆಲರ್ಸ್ ಎದುರು, ಕೆ.ಆರ್ ‌ಪುರ, ಬೆಂಗಳೂರು -36 ಹೆಚ್ಚಿನ ಮಾಹಿತಿ ಗಾಗಿ-9632516387, 9632516386.