Saturday, 14th December 2024

ಐದು ರೂಪಾಯಿ ವೈದ್ಯ ಡಾ. ಎಸ್.ಸಿ. ಶಂಕರೇಗೌಡರಿಗೆ ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ ಗೌರವ

ಮಂಡ್ಯ: ಐದು ರೂಪಾಯಿ ವೈದ್ಯರೆಂದೇ ಖ್ಯಾತಿ ಪಡೆದಿರುವ ಡಾ. ಎಸ್.ಸಿ. ಶಂಕರೇ ಗೌಡ ಅವರು ‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿಗೆ ಶಂಕರೇಗೌಡರು ಭಾಜನರಾಗಿದ್ದು, ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರದಾನ ಮಾಡಿದ್ದಾರೆ.

ವೈದ್ಯಕೀಯ ವೆಚ್ಚ ಮುಗಿಲು ಮುಟ್ಟಿರುವ ಮಧ್ಯೆಯೂ ಶಂಕರೇಗೌಡರು ಕಳೆದ 40 ವರ್ಷಗಳಿಂದ ಕೇವಲ ಐದು ರೂಪಾಯಿ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡು ತ್ತಿದ್ದಾರೆ. ಅಷ್ಟೇ ಅಲ್ಲ ಕೈಗೆಟಕುವ ಬೆಲೆಯ ಔಷಧಿಗಳನ್ನು ಅವರು ಶಿಫಾರಸ್ಸು ಮಾಡು ತ್ತಾರೆ. ಶಂಕರೇಗೌಡರ ಈ ಸಾಮಾಜಿಕ ಕಳಕಳಿಯನ್ನು ಗಮನಿಸಿ ಈಗಾಗಲೇ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದು, ಇದೀಗ ಮತ್ತೊಂದು ಗೌರವ ಸಂದಿದೆ.

ಅಲ್ಲದೆ ಸಚಿವ ಅಶ್ವಥ್ ನಾರಾಯಣ ಅವರು ಸಹ ಶಂಕರೇಗೌಡರಿಗೆ ಅಭಿನಂದಿಸಿದ್ದು, ನಮ್ಮ ಮಂಡ್ಯದ 5 ರೂಪಾಯಿ ಡಾ. ಶಂಕರೇಗೌಡ ಅವರಿಗೆ ಪ್ರಶಸ್ತಿ ದೊರಕಿರುವುದು ಅತ್ಯಂತ ಸಂತಸದ ವಿಚಾರ. ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ತಾವು ಪಡೆದ ಜ್ಞಾನವನ್ನು ಗ್ರಾಮೀಣ ಜನರ ಸೇವೆಗೆ ಮೀಸಲಿಡುವ ಶಂಕರೇಗೌಡರ ಸಂಕಲ್ಪ ಸದಾ ಪ್ರೇರಣೆ ಎಂದಿದ್ದಾರೆ.