Thursday, 12th December 2024

74 ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಶಾಲಾ ಮಕ್ಕಳಿಗೆ 150 ನೋಟ್ ಬುಕ್, ಪೆನ್ ವಿತರಣೆ

ಮಸ್ಕಿ: ತಾಲೂಕಿನ ಮೆದಿಕಿನಾಳ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿ ವಿವಿಧೆಡೆ 74 ನೇ ಗಣ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿ ನಂತರ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಿಸ ಲಾಯಿತು.

ಮೆದಿಕಿನಾಳ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ರವರ ಫೋಟೋಗಳಿಗೆ ಪೂಜೆ ಸಲ್ಲಿಸಿ 74 ನೇ ಗಣ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವು ಅತೀ ಸರಳತೆಯಿಂದ ಜರುಗಿತು.

ನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕರೇಗುಡ್ಡ (ಮೆದಿಕಿನಾಳ) ಶಾಲೆಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿವಹಿಸಿ ಸಾಮಾಜಿಕ ಕಳಕಳಿ ಹೊಂದಿದ ಹಾಗೂ ಮಸ್ಕಿ ತಾಲೂಕಿನ ತಾಲೂಕ ವರದಿಗಾರರಾದ ಗ್ಯಾನಪ್ಪ ದೊಡ್ಡಮನಿ ತಂದೆ ಹನುಮಂತಪ್ಪ ಹಾಗೂ ಮೌನೇಶ್ ಮೆದಿಕಿನಾಳ ರವರು ತಾಲೂಕಿನ ಬಾಳೆಕಾಯಿ ಸೂಗಣ್ಣ ಮಸ್ಕಿ, ಸಂದೀಪ್ ಕುಮಾರ್ ಪಿ.ಡಬ್ಲ್ಯೂ ಡಿ ಇಲಾಖೆ ಲಿಂಗಸ್ಗೂರು, ಎಂ. ಎಸ್ ಐ ಎಲ್ ಬಾರ್ ಸಿಬ್ಬಂದಿ ಮೆದಿಕಿನಾಳ, ರಮೇಶ್ ಭಜಂತ್ರಿ ಮಸ್ಕಿ,ಮಾರುತಿ ಇಳಿಗೇರ್ ಮೆದಿಕಿನಾಳ, ದುರುಗಪ್ಪ ಕೆ ಮಸ್ಕಿ,ರಮೇಶ್ ಪೂಜಾರಿ ವೆಂಕಟಾಪುರ ಗಣ್ಯರಿಂದ ನೋಟ್ ಬುಕ್ ಹಾಗೂ ಪೆನ್ ಸಿಹಿ ತಿನಿಸುಗಳ ವೆಚ್ಚವನ್ನು ದೇಣಿಗೆ ಪಡೆದು ಶಾಲಾ ವಿದ್ಯಾರ್ಥಿಗಳಿಗೆ 150 ನೋಟ್ ಬುಕ್ ಹಾಗೂ ಪೆನ್ ಅನ್ನು ಸಂವಿಧಾನದ ಅಂಗೀಕಾರದ ವಿಶೇಷ ದಿನವಾದ ಇಂದು ಮಧು ಲಿಂಗರಾಜ ನಡಗೌಡರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಣ್ಣ ಭೋವಿ,ಮಲ್ಲಪ್ಪ ಗುರಿಕಾರ,ಶೇಖರಪ್ಪ ಭಜಂತ್ರಿ ರವರ ಅಭಯಾಸ್ತದಿಂದ ಎಸ್ ಡಿ ಎಂ ಸಿ ಸಮಿತಿಯ, ಗ್ರಾಮದ ಹಿರಿಯ ಮುಖಂಡರುಗಳ ಹಾಗೂ ಶಾಲೆಯ ಶಿಕ್ಷಕ ವೃಂದದವರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಧು ಲಿಂಗರಾಜ ನಾಡಗೌಡ ಪ್ರಾ. ಕೃ.ಪ. ಸ ನಿ.ಸಂಘದ ಅಧ್ಯಕ್ಷರು ಮೆದಿಕಿನಾಳ,ಲಕ್ಷ್ಮೀ ಗಂಡ ಸಾಬಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೆದಿಕಿನಾಳ , ರಾಜಣ್ಣ ಪರಡ್ಡಿ, ತಿಮ್ಮಣ್ಣ ಭೋವಿ ಪಿಡಿಓ ಗ್ರಾಮ ಪಂಚಾಯಿತಿ ಮೆದಿಕಿನಾಳ, ಮಲಕನ ಗೌಡ, ಮಲ್ಲಪ್ಪ ಗುರಿಕಾರ ಗ್ರಾ.ಪಂ ಸದಸ್ಯರು, ಶೇಖರಪ್ಪ ಭಜಂತ್ರಿ ಎಸ್ ಡಿ ಎಂ ಸಿ ಅಧ್ಯಕ್ಷರು, ಹುಚ್ಚರೆಡ್ಡಿ ಚಲುವಾದಿ, ಸುರೇಶ್ ಕುಮಾರ್, ರವಿರಾಜ್ ಮುಖ್ಯ ಗುರುಗಳು, ಗ್ರಾಮದ ಹಿರಿಯರಾದ ಅಮೀರ್ ಸಾಬ್, ಹನುಮಂತ, ದಾನಪ್ಪ,ಬಸವರಾಜ್,ಹನುಮಂತಪ್ಪ ಹಾಗೂ ಶಾಲೆಯ ಶಿಕ್ಷಕ – ಶಿಕ್ಷಕಿಯರು, ವೀರಭದ್ರ, ಮರಿಸ್ವಾಮಿ ಪೂಜಾರಿ ಸೇರಿದಂತೆ ವಿವಿಧ ಶಾಲೆಯ ಎಸ್ ಡಿ ಎಂ ಸಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.