Friday, 22nd November 2024

Litereur Kalaburagi: ಸಾಹಿತಿ ಕಲ್ಬುರ್ಗಿ ಅವರ 9ನೇ ವರ್ಷದ ಪುಣ್ಯಸ್ಮರಣೆ

ತುಮಕೂರು : ನಗರದ ಜಯದೇವ ಸಭಾಂಗಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಭಾರತೀಯ ಶರಣ ಸೇನೆ ವತಿಯಿಂದ ಡಾ. ಎಂ ಎಂ ಕಲ್ಬುರ್ಗಿ ಅವರ 9ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮ ನ್ನು ಹಮ್ಮಿಕೊಳ್ಳಲಾಗಿಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಶರಣಸೇನಾ ಸಂಚಾಲಕ ಎಚ್. ಎಲ್. ಕುಮಾರಸ್ವಾಮಿ ಮಾತನಾಡಿ , ಕಲಬುರ್ಗಿ ಅವರು ಕನ್ನಡ ಶಾಸನಗಳ ಹಾಗೂ ವಚನ ಸಾಹಿತ್ಯದ ಸಂಶೋಧನೆಗೆ ಶ್ರಮಿಸಿದ ಅಪಾರ ಕೊಡುಗೆ ಯನ್ನು ವಿವರಿಸಿದರು. ವಚನಸಾಹಿತ್ಯದ ನೈಜ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದರು.  ಎಂದರು.
 ಉಪನ್ಯಾಸಕ ಬಸವಲಿಂಗಯ್ಯ ಮಾತನಾಡಿ, ಜೀವನದಲ್ಲಿ ಉತ್ತಮ ಮೌಲ್ಯಗಳನ್ನ ಗಳಿಸಬೇಕಾದರೆ ಬಸವಣ್ಣನವರ ವಿಚಾರಧಾರೆಗಳು ಬಹುಮುಖ್ಯ. ಡಾ. ಎಂ ಎಂ ಕಲ್ಬುರ್ಗಿ ಅವರು ವಚನ ಸಾಹಿತ್ಯದಲ್ಲಿರುವ ಸತ್ಯಾಂಶವನ್ನು ಹೊರತೆಗೆದು ಸಮಾಜಕ್ಕೆ ತಿಳಿಸಿದ್ದಾರೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಯುವ ಘಟಕದ ರಾಜ್ಯ ಸಂಚಾಲಕ  ರಾಯಸಂದ್ರ ರವಿಕುಮಾರ್  ಮಾತನಾಡಿ,  ಡಾ. ಎಂ ಎಂ ಕಲ್ಬುರ್ಗಿ ಅವರು 12ನೇ ಶತಮಾನದ ಬಸವಣ್ಣನವರ ವಚನ ಸಾಹಿತ್ಯವನ್ನು ಹುಡುಕಿ ಸತ್ಯಾಂಶವನ್ನು ಜಗತ್ತಿಗೆ ತಿಳಿಸಿದ್ದಕ್ಕೆ ಇದನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ಇಂದು ವ್ಯಕ್ತಿಯನ್ನ ಕೊಂದಿರಬಹುದೇ ಹೊರೆತು ವಿಚಾರಗಳನ್ನಲ್ಲ ಎಂದು ನುಡಿದರು.
ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಮಾತನಾಡಿ,  ಎಂ ಎಂ ಕಲ್ಬುರ್ಗಿ ಅವರು ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು. ಅವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ ಬಸವಾದಿ ಶರಣರ ವಿಚಾರಧಾರೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜೇಶ್ವರಿ ಶಿವಾನಂದ, ಸಿದ್ದು ಬಿ.ಎಸ್. ಸೂರನಹಳ್ಳಿ, ಬಸವರಾಜು, ದೇವರಾಜು ಕೆ, ಅಭಿಷೇಕ್ ಹಿರೇಮಠ್, ಗೋಪಾಲಕೃಷ್ಣ, ಮತ್ತಿತರ ಭಾರತೀಯ ಶರಣಸೇನಾ ಸದಸ್ಯರು ಇದ್ದರು.