Saturday, 26th October 2024

ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ 35ರ ಗಾಜೀಪುರ ಹಾಗೂ ಸುತ್ತಮುತ್ತಲಿನ ಬಡವಾಣೆಯ ನಾಗರಿಕರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರತಿ ಜನತಾ ಪಕ್ಷ(ಬಿಜೆಪಿ) ತೊರೆದು ಅನೇಕರು ಸಿದ್ದು ಪಾಟೀಲ (ತೇಗನೂರ) ಅವರ ಸಮ್ಮುಖದಲ್ಲಿ ಸಚೀನ್ ಕೋಗನೂರ ನೇತೃತ್ವದಲ್ಲಿ ಸೇರ್ಪಡೆ ಗೊಂಡರು.

ಸೋಮವಾರ ಗಾಜೀಪುರದ ಅಂಬಾಭಾವನಿ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಿದ್ದು ಪಾಟೀಲ (ತೇಗನೂರ) ಅವರು ಮಾತನಾಡಿ ಅಧಿಕಾರದಲ್ಲಿ ಇರುವ ಪಕ್ಷ ಹಾಗೂ ವಿರೋಧ ಪಕ್ಷಗಳೆರಡು ಜನತೆಗೆ ಮೋಸ ಮಾಡುತ್ತೀವೆ.

ಸಾರ್ವಜನಿಕರಿಗೆ ಬೇಕಾಗಿರುವ ಸ್ವಚ್ಛ ನೀರು, ನಿರಂತರ ವಿದ್ಯುತ್, ಉತ್ತಮ ಶಿಕ್ಷಣ, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿವೆ. ಮುಂದಿ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿ ಹಾಗೂ ಪಂಜಾಬ ಮಾದರಿ ಯಲ್ಲಿ ಪಾರದರ್ಶಕತೆಯ ಆಡಳಿತ ನೀಡಲು ಸಾರ್ವಜನಿಕರು ಸ್ವ ಇಚ್ಛೆಯಿಂದ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವದು ಸಕರಾತ್ಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳಲ್ಲಿ ನಾಗರಿಕರು ಸ್ವ ಇಚ್ಛೆಯಿಂದ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದಾರೆ. ಅದಕ್ಕಾಗಿ ಕಾರ್ಯಕರ್ತರ ಪಡೆ ನಿರ್ಮಿಸಿ ಜನರಿಗೆ ಬೇಕಾಗಿರುವ ಅವಶ್ಯಕತೆಗೆ ಪಕ್ಷ ಸ್ಪಂಧಿಸ ಬೇಕು ಎಂದು ಕಾರ್ಯಕರ್ತರಿಗೆ ಸಿದ್ದು ಪಾಟೀಲ (ತೇಗನೂರ) ಕರೆ ನೀಡಿದರು.

ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಅರವಿಂದ ಹಿರೇಮಠ, ಪ್ರತೀಕ್, ಸಾಗರ, ತೋಟೇಂದ್ರ, ಪ್ರಶಾಂತ ಕಿರಣ ರಾಠೋಡ, ಮೊಹಿಶಿನ್, ವಸಂತ, ಬಂಧು ಮತ್ತು ಅನೇಕರು ಉಪಸ್ಥಿತರಿದ್ದರು.