Saturday, 14th December 2024

ಅಬಾಕಸ್ ಸ್ಪರ್ಧೆ: ಜ್ಞಾನಮುದ್ರಾ ಶಾಲೆಗೆ 4 ಚಿನ್ನದ ಟ್ರೋಫಿ

ತುಮಕೂರು: ತಮಿಳುನಾಡಿನ ಮಹಾಬಲಿಪುರಂನಲ್ಲಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯ ವತಿಯಿಂದ ನಡೆದ ಅಂತರಾ ಷ್ಟ್ರೀಯ ಮಟ್ಟದ ‘ವಲ್ಡ್೯  ಸಿಟಿ ಕಪ್-2023’ ಅಬಾಕಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ  ನಗರದ ಹನುಮಂತಪುರದ ಜ್ಞಾನ ಮುದ್ರಾ ಅಬಾಕಸ್ ಶಾಲೆಯ ಐದು ಮಕ್ಕಳಲ್ಲಿ ನಾಲ್ವರಿಗೆ ಚಿನ್ನದ ಟ್ರೋಫಿ ಮತ್ತು ಒಬ್ಬರಿಗೆ ಬೆಳ್ಳಿ ಟ್ರೋಫಿ ಲಭಿಸಿದ್ದು, ಭಾಗ ವಹಿಸಿದ್ದ ಮಕ್ಕಳೆಲ್ಲರೂ ಪದಕ ವಿಜೇತರಾಗಿರುವುದು ವಿಶೇಷವಾಗಿದೆ.
ಜ್ಞಾನಮುದ್ರಾ ಶಾಲೆಯ ಮಕ್ಕಳಾದ ಎಂ.ಆರ್.ಅನಿರುದ್ದ, ವಿ.ಕಾರ್ತೀಕ್ ಸುಲಾಖೆ, ಎಂ.ರಚಿತ್, ರೆಯಾನಾರಂಗನಾಥ್ ಚಿನ್ನದ ಪದಕವನ್ನೂ ಹಾಗೂ ಎಸ್.ಪ್ರಕೃತಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.