Saturday, 14th December 2024

ಎಬಿವಿಪಿ ವತಿಯಿಂದ ಪ್ರತಿಭಟನೆ

ತುಮಕೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹೆಚ್ಚಿಸಿರುವ ವಿದ್ಯಾರ್ಥಿಗಳ ಶುಲ್ಕವನ್ನು ಕಡಿಮೆಗೊಳಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ವತಿಯಿಂದ  ಮಂಗಳವಾರ  ಪ್ರತಿಭಟಿಸ ಲಾಯಿತು.
ಬಿಜಿಎಸ್ ವೃತ್ತದಿಂದ ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಯ ವರೆಗೂ ಮೆರೆವಣಿ ಗೆಯಲ್ಲಿ ತೆರಳಿದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶುಲ್ಕವನ್ನು ಕಡಿಮೆಗೊಳಿಸಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದರು.
ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಇಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಶೇ.25, ಪದವಿ ಸರ್ಟಿಫಿಕೇಟ್ ನೀಡಲು ಶೇ.50 ಶುಲ್ಕ ಏರಿಕೆ ಮಾತನಾಡಿದೆ ಇದು ವಿದ್ಯಾರ್ಥಿಗಳಿಗೆ ಮಾರಕ ವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಗಣೇಶ್, ಗುರುಪ್ರಸಾದ್, ಲಿಖಿತ್, ಗುರು, ವೆಂಕಟೇಶ್, ವಿದ್ಯಾರ್ಥಿಗಳಾ ಪೂಜಾ, ನಿತ್ಯಶ್ರೀ, ಜ್ಯೋತಿ, ರಚನಾ ಮತ್ತಿತರರು ಇದ್ದರು.