Sunday, 15th December 2024

Accident: ಭದ್ರಾಪುರ ಬಳಿ ಭೀಕರ ಅಪಘಾತ

Viral Video

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಸಮೀಪದ ಭದ್ರಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ನೆಲಮಂಗಲ ಆಸ್ಪತ್ರೆಯ ಶವಗಾರದಲ್ಲಿ ನಾಲ್ವರ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸ ಲಾಗುತ್ತಿದೆ.

ಮೃತರು ಬೆಂಗಳೂರಿನ ಪೀಣ್ಯ ದಾಸರಹಳ್ಳಿಯ ಬಾಗಲಗುಂಟೆ ಮೂಲದವರು. ಯಡಿಯೂರು ಬಳಿಯ ಹುಲಿ ವಾಹನ ಮುನೇಶ್ವರ ದೇವಸ್ಥಾನಕ್ಕೆ ಪೂಜೆ ಮುಗಿಸಿ ಬರುವಾಗ ಘಟನೆ ನಡೆದಿದೆ.

ಮೃತರನ್ನು ನಂಜುಂಡಪ್ಪ 55, ಶಾರದಾ 47, ಭದ್ರಮ್ಮ 80 ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಹೆಸರು ಪತ್ತೆಯಾಗಿಲ್ಲ.