Sunday, 15th December 2024

ಸುಲಿಗೆ ಮಾಡಿದ್ದ ಆರೋಪಿ 5 ಗಂಟೆಯಲ್ಲೇ ಬಂಧನ

ದಾವಣಗೆರೆ: ಚಾಕು ತೋರಿಸಿ ವಿದ್ಯಾರ್ಥಿಯ‌ನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ವರದಿಯಾದ 5 ಗಂಟೆಯಲ್ಲೇ ಬಂಧಿಸಿರುವ ಪೊಲೀಸರು ಆತನಿಂದ ₹1.35 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಆಜಾದ್‌ನಗರದ ಬೂದಾಳ್‌ ರಸ್ತೆಯ ನಿವಾಸಿ ಆಲಿ ಹಸನ್ ಅಲಿಯಾಸ್ ಅಲಿ (20) ಬಂಧಿತ. ಈತನಿಂದ ₹ 55,000 ಬೆಲೆ ಬಾಳುವ 10.35 ಗ್ರಾಂ ಬಂಗಾರದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಿಸಿದ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಜಿಎಂಐಟಿ ಕಾಲೇಜು ವಿದ್ಯಾರ್ಥಿ ಚಿತ್ರದುರ್ಗದ ನಿವಾಸಿ ಹರ್ಷಿತ್ ಎಸ್. ಪರೀಕ್ಷೆ ಮುಗಿಸಿಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಇನ್ನೊಂದು ಬೈಕ್‌ನಲ್ಲಿ ಬಂದ ಬಸವರಾಜು ಹಾಗೂ ಸ್ಟೀಫನ್ ಎಂಬುವರು ನಮ್ಮ ಕಾಲೇಜಿನ ಸೀನಿಯರ್ ಅಲಿ ಎಂಬಾತ ನನ್ನ ಸ್ನೇಹಿತ, ನಾನು ಅವನೊಂದಿಗೆ ಹೋಗುತ್ತೇನೆ ಅಲ್ಲಿಯವರೆಗೆ ಡ್ರಾಪ್ ಕೊಡು ಎಂದು ಕೇಳಿದ್ದಾರೆ.

ನನ್ನ ಹತ್ತಿರ ಹಣ ಎಲ್ಲ ಎಂದು ಹರ್ಷಿತ್‌ ಹೇಳಿದಾಗ ಸ್ಟೀಫನ್ ಮೊಬೈಲ್ ಹಾಗೂ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಆರೋಪಿಗಳ ಪತ್ತೆಗೆ ನಗರ ಉಪ ವಿಭಾಗದ ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪಿಎಸ್‌ಐ ಪ್ರಭಾವತಿ ಸಿ.ಶೇತಸನದಿ ‌ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.