Thursday, 12th December 2024

ನೂತನ ಗೋಪುರಕ್ಕೆ ಅಡಿಗಲ್ಲು

ತಿಪಟೂರು: ನಗರದ ಕಂಚಿನ ಕೋಟೆಯ ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ 600 ವರ್ಷ ಇತಿಹಾಸವಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಗರ್ಭಗುಡಿಯ ವಿಮಾನ ಗೋಪುgದ ನಿರ್ಮಾಣಕ್ಕೆ ಚಾಲನೆಯನ್ನು ಹನುಮ ಜಯಂತಿಯ0ದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ನೂತನ ಗೋಪುರಕ್ಕೆ ಅಡಿಗಲ್ಲು ಇಡುವ ಮೂಲಕ ಚಾಲನೆ ನೀಡಿದರು.

ಮಾಜಿ ಶಾಸಕ ಕೆ ಷಡಕ್ಷರಿ ಗುದ್ದಲಿ ಪೂಜೆ ನೆರೆವೇರಿಸಿದರು ಬೆಳಿಗ್ಗೆಯಿಂದ ಹನುಮನಿಗೆ ಪಂಚಾಮೃತ ಅಭಿಷೇಕ ಪವಮಾನ ಸಹಿತ ಸೂಕ್ತ ಪಾರಾಯಣ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.

ಈ ಸಮಯದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಶ್ರೀಷಾ ಮಾತನಾಡಿ ಸುಮಾರು ೬ ಕೋಟಿ ವೆಚ್ಚದಲ್ಲಿ ಖ್ಯಾತ ಶಿಲ್ಪಿಗಳಾದ ಮಾಸ್ತಪ್ಪನವರ ತಂಡದಿ0ದ ನಿರ್ಮಾಣವಾಗುತ್ತಿರುವ ನೂತನ ಶಿಲಾಮಂಟಪ ಮತ್ತು ಗೋಪುರಕ್ಕೆ ಭಕ್ತಾದಿಗಳ ಆರ್ಥಿಕ ನೆರವು ಅವಶ್ಯಕತೆ ಯಿದೆ ತಮ್ಮ ತನುಮನ ಧನ ಸಹಾಯ ನೀಡಬೇಕೆಂದು ಮನವಿ ಮಾಡಿದರು.

ದೇವಸ್ಥಾನದ ವ್ಯವಹಾರವನ್ನು ಯೂನಿಯನ್ ಬ್ಯಾಂಕ್ ನಲ್ಲಿ ಖಾತೆ ತೆರೆದಿದೆ. ಖಾತೆಯ ಸಂಖ್ಯೆ ಈ ಕೆಳಕಂಡ0ತಿದೆ ಎಂದು ತಿಳಿಸಿದರು. ಉಳಿತಾಯ ಖಾತೆ ಸಂಖ್ಯೆ ೫೨೦೧೦೧೦೬೧೩೪೩೭೦೨. ಐಎಪ್‌ಎಸ್‌ಸಿ ಕೂಡ್,೦೯೦೭೫೯೬. ತಿಪಟೂರು ಶಾಖೆ.