ಮಾನವಿ : ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕಿರುಕುಳ, ಸುಳ್ಳು ಕೇಸ್ ದಾಖಲಿಸುವುದರಿಂದ ಘನತೆಗೆ ದಕ್ಕೆ ಬರುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಶೀಘ್ರವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಮಾನವಿ ವಕೀಲರ ಸಂಘ ಇಂದು ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಒತ್ತಾಯದ ಮನವಿ ಸಲ್ಲಿಸಿತು.
ತಾಲೂಕ ಆಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮಾನವಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ ರಾಜ್ಯದಲ್ಲಿ ವಕೀಲರ ಮೇಲೆ ಒಂದಿಲ್ಲೊಂದು ಕಾರಣದಿಂದ ನಿರಂತರವಾಗಿ ಪೊಲೀಸರು, ಸರ್ಕಾರಿ ಅಧಿಕಾರಿಗಳು ನಡೆಸುತ್ತಿರುವ ಹಲ್ಲೆ ಕಿರುಕುಳ ಹಾಗೂ ಸುಳ್ಳು ಕೇಸ್ ದಾಖಲಿಸಿ ವಕೀಲರ ಘನತೆ ಹಾಳುಮಾಡುತ್ತಿದ್ದು ಭಯದ ವಾತಾವರಣದಲ್ಲಿ ವಕೀಲರು ಕರ್ತವ್ಯ ನಿರ್ವಹಿ ಸುವ ಪರಿಸ್ಥಿತಿ ಬಂದೊದಗಿದೆ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಮುಂಬರುವ ಅಧಿವೇಶನದಲ್ಲಿ ಶೀಘ್ರವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವ ಮೂಲಕ ವಕೀಲರ ಘನತೆ ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು..
ಈ ಸಂದರ್ಭದಲ್ಲಿ ವಕೀಲರಾದ ರವಿಕುಮಾರ್ ಪಾಟೀಲ ಕಾರ್ಯದರ್ಶಿ, ಮಾಳಿಂಗ ರಾಯ ಉಪಾಧ್ಯಕ್ಷ, ಚಂದ್ರಶೇಖರ ಮದ್ಲಾಪೂರ ಖಜಾಂಚಿ, ಉರುಕುಂದ ಜಗ್ಲಿ, ಬಿಕೆ ಅಮರೇಶಪ್ಪ, ಶ್ರೀನಿವಾಸ ಕುಲಕರ್ಣಿ, ಶ್ಯಾಮ್ ಸುಂದರ್ ನಾಯಕ,ಗುಮ್ಮ ಬಸವರಾಜ, ಲಿಯಾಖತ್ ಅಲಿ, ಯದ್ದುಲ್ಲಾ ಹುಸೇನ್ ಸಾಹೇಬ, ಆಶೋಕ ಮುಸ್ಟೂರು,ಶಿವಕುಮಾರ್ ಸ್ವಾಮಿ,ವಿಶ್ವನಾಥ ಆಲ್ದಾಳ, ದೂಮಣ್ಣ ನಾಯಕ, ಶರಣಬಸವ ಹರವಿ, ಯಲ್ಲಪ್ಪ ಬಾದರದಿನ್ನಿ, ಹನುಮಂತ ಬ್ಯಾಗವಾಟ, ಶ್ರೀನಿವಾಸ ನಂದಿಹಾಳ, ಹನುಮಂತ ಸುಕೇಶ್ವರತಾಂಡ, ಸೇರಿದಂತೆ ಅನೇಕ ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.
Read E-Paper click here