ಬೆಂಗಳೂರು: ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಪೊಲೀಸ್ ಠಾಣೆಯ ಎದುರು ಆರೋಪಿ ಒಬ್ಬ ವಕೀಲನೆಗೆ ಚಾಕು ಇರಿದ ಘಟನೆ ನಡೆದಿದೆ.
ತಕ್ಷಣ ಗಾಯಗೊಂಡ ವಕೀಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಕೀಲ ಮಂಜುನಾಥ್ ಎನ್ನುವವರಿಗೆ ಬೆನ್ನು ಹಾಗೂ ಕೈಗೆ ಮೂರು ಬಾರಿ ಚಾಕು ಇರಿದಿರುವ ಘಟನೆ ನಡೆದಿದೆ. ಈ ವೇಳೆ ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲು ಕೂಡ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ತಕ್ಷಣ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಕೀಲ ಮಂಜುನಾಥ್ ಗೆ ಆನೇಕಲ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.