Thursday, 21st November 2024

ಅಂಬೇಡ್ಕರ್ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಪ್ರಯತ್ನಿಸೋಣ: ಡಾ.ಬಸವರಾಜ ಕರಡಿಗುಡ್ಡ

ಮಾನ್ವಿ: ತಾಲೂಕಿನ ಹರವಿ ಗ್ರಾಮದಲ್ಲಿ ಬಸಪ್ಪ ಮೇಸ್ತ್ರಿ ಇವರ ಮನೆಯಲ್ಲಿ ಹಮ್ಮಿಕೊಂಡಿರುವ ಮನೆಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಡಾ.ಬಸವರಾಜ ಕರಡಿಗುಡ್ಡ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಗಳನ್ನು ಹಾಗೂ ಸಿದ್ಧಾಂತಗಳನ್ನು ಮತ್ತು ಅವರು ನಡೆದು ಬಂದ ಹಾದಿಯ ಪ್ರತಿಯೊಂದು ಹೆಜ್ಜೆ ಪ್ರತಿಯೊಂದು ಕುಟುಂಬದ ಜನರಿಗೆ ಮನಮುಟ್ಟುವಂತೆ ತಲುಪಿ ಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಅಲ್ಲದೆ ಅಂಬೇಡ್ಕರವರು ನಡೆದು ಬಂದ ಹಾದಿಯಲ್ಲಿ ನಾವು ಕೂಡ ನಡೆಯಬೇಕು ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಜೊತೆಗೆ ಅವರ ವಿಚಾರಧಾರೆಗಳನ್ನು ಸಮಾಜದ ಕಟ್ಟಕಡೆಯ ವರ್ಗದವರಿಗೂ ಮತ್ತು ಎಲ್ಲ ಸಮುದಾಯದ ಅಭಿವೃದ್ಧಿ ಗೋಸ್ಕರ ಶಾಸನಾತ್ಮಕ ಕಾಯ್ದೆಗಳ ಉಪಯೋಗವನ್ನು ಪ್ರತಿಯೊಬ್ಬರೂ ಪಡೆಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಲಕ್ಷ್ಮಣ ಜಾನೇಕಲ್ ಜಿಲ್ಲಾಧ್ಯಕ್ಷರು ದಲಿತ ಪ್ಯಾಂಥರ್ ಅವರು ಮಾತನಾಡಿ ಅಂಬೇಡ್ಕರ್ ಜಗತ್ತಿನ ಮಹಾ ಮೇಧಾವಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ, ಒಂದು ಸಮುದಾಯಕ್ಕೆ ಸಂಬಂಧಿಸಿದ ವ್ಯಕ್ತಿಯಾಗಿದೇ ಇಡೀ ಸಮುದಾಯದ ಪರವಾಗಿ ಧ್ವನಿಯೆತ್ತಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಜೆ.ಶರಣಪ್ಪ ಬಲ್ಲಟಗಿರವರು ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ 23ನೇ ಮನೆಯಾಗಿದ್ದು ಅಂಬೇಡ್ಕರ್ ಅವರ ವಿಚಾರಗಳನ್ನು ಹಂಚಿಕೊಳ್ಳಲು ಆಸಕ್ತಿ ವಹಿಸಿದ ಕುಟುಂಬದ ಸದಸ್ಯರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ಅಂಬೇಡ್ಕರ್ ಅವರ ಮೀಸಲಾತಿಯು ಕೇವಲ ಒಂದೇ ಸಮುದಾಯಕ್ಕೆ ಸಂಬಂಧಿಸದೇ ಎಲ್ಲಾ ಸಮುದಾಯಗಳಿಗೂ ಮೀಸಲಾತಿಯನ್ನು ಒದಗಿಸಿಕೊಟ್ಟು ಶೈಕ್ಷಣಿಕ ರಾಜಕೀಯ-ಆರ್ಥಿಕ ಅಭಿವೃದ್ಧಿಗೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ.ಬಸವರಾಜ ನಾಯಕ ಹರವಿ ಉಪಾಧ್ಯಕ್ಷರು ಸರಕಾರಿ ನೌಕರರ ಸಂಘ ಸಿರಿವಾರ ಇವರು ಮಾತನಾಡಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಪ್ರತಿಯೊಂದು ಮನೆಮನೆಗೂ ಕೂಡ ಈ ಕಾರ್ಯಕ್ರಮ ಆಯೋಜನೆ ಮಾಡಿರುವ ವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮನ್ವಯ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಹನುಮಂತ ಕೋಟೆ ಗ್ರಾಮ ಪಂಚಾಯಿತಿ ಪಿಡಿಓ ಪ್ರಸಾದ ಕೋನಾಪೂರ ಪೇಟೆ ,ಗ್ರಾಮದ ಗ್ರಂಥಾಲಯ ಸಹಾಯಕರಾದ ಗೋಪಾಲನಾಯಕ ಹರವಿ ಇವರು ಅಂಬೇಡ್ಕರ್ ರವರು ವಿಚಾರಗಳನ್ನು ಹಂಚಿಕೊಳ್ಳಲು ಆಸಕ್ತಿ ವಹಿಸಿದ ಪ್ರತಿಯೊಬ್ಬರೂ ಪುಣ್ಯ ನಿಂತರು ಎಂದರು , ಶಿವರಾಜ್ ನಾಯಕ ಹರವಿ ಜಿಲ್ಲಾಧ್ಯಕ್ಷರು ಮಾನವ ಬಂಧುತ್ವ ವೇದಿಕೆ ರಾಯಚೂರ್ ಇವರು ಮಾತನಾಡಿ ಸಮಾಜದ ಅನಿಷ್ಟ ಪದ್ಧತಿಗಳಾದ ದೇವದಾಸಿ ಪದ್ಧತಿ, ಜಡೆ ಕಟ್ಟುವ ಪದ್ಧತಿ, ಪ್ರಾಣಿ ಬಲಿ ಇತ್ಯಾದಿ ಗುರು ನಂಬಿಕೆಗಳನ್ನು ಕೈಬಿಡಬೇಕೆಂದು ತಿಳಿಸಿದರು. ಕಾರ್ಯ ಕ್ರಮದಲ್ಲಿ ಊರಿನ ಯುವಕರು ಗ್ರಾಮಸ್ಥರು ಕುಟುಂಬದ ಸರ್ವ ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ರವಿಕುಮಾರ್ ಮಾಡಿಗಿರಿ, ಶ್ರೀನಿವಾಸ್ ನಂದಿಹಾಳ ವಕೀಲರು, ಮಾರೆಪ್ಪ ಹರವಿ, ಕಾರ್ಯಕ್ರಮದ ನಿರೂಪಣೆಯನ್ನು ನಾಗರೆಡ್ಡಿ ಸೀಕಲ್, ವಂದನಾರ್ಪಣೆಯನ್ನು ಈರಣ್ಣ ಕುರುಡಿ ನೇರವೇರಿಸಿದರು.