Thursday, 12th December 2024

ಕರ್ನಾಟಕ ಜನಸೈನ್ಯದ ವತಿಯಿಂದ ಉಚಿತ ಆಂಬುಲೆನ್ಸ್

ತುಮಕೂರು: ಜಿಲ್ಲೆಯಲ್ಲಿ ಸರಕಾರಿ ಆಂಬುಲೆನ್ಸ್ ಅವ್ಯವಸ್ಥೆಯಿಂದಾಗಿ ತುರ್ತು ಸಂದರ್ಭ ದಲ್ಲಿ ರೋಗಿಗಳು ಚಿಕಿತ್ಸೆ ದೊರೆಯದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದ್ದರಿಂದ ಖಾಸಗಿ ಸಂಸ್ಥೆ, ಸಂಘಟನೆಗಳು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಉಚಿತ ಆಂಬುಲೆನ್ಸ್ ಸವಲತ್ತು ಕಲ್ಪಿಸಿ ಕೊಡುತ್ತಿರುವುದು ಮಾದರಿಯಾಗಿದೆ.
ಕರ್ನಾಟಕ ಜನಸೈನ್ಯ ಜಿಲ್ಲಾ ಸಂಘಟನೆವತಿಯಿಂದ ಜಿಲ್ಲೆಯಲ್ಲಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಾಗಿದ್ದು, ಪ್ರತಿದಿನ ಹತ್ತಾರು ಬಡ ರೋಗಿಗಳಿಗೆ ಸಹಾಯಕವಾಗಿದೆ.
ಪ್ರಸ್ತುತ ಒಂದು ಆಂಬುಲೆನ್ಸ್ ವಾಹನ ಒದಗಿಸಲಾಗಿದ್ದು, ಜಿಲ್ಲಾದ್ಯಂತ ಸಾಕಷ್ಟು ಕರೆಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಸಾಧ್ಯವಾದರೆ  ಆಂಬುಲೆನ್ಸ್ ವಾಹನವನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ಬಡವರ ಸೇವೆಯನ್ನು ಮಾಡಲಾಗುವುದು ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷ ರಕ್ಷಿತ್ ಕರಿಮಣ್ಣೆ ತಿಳಿಸಿದರು.
ಸರಕಾರಿ ಆಂಬುಲೆನ್ಸ್ ಅಸಮರ್ಪಕತೆ, ಖಾಸಗಿ ಆಂಬುಲೆನ್ಸ್ ದುಬಾರಿ ದರದಿಂದಾಗಿ ಬಡವರಿಗೆ ಸರಕಾರಿ ಆರೋಗ್ಯಸೇವೆ ಉತ್ತಮ ರೀತಿಯಲ್ಲಿ ಸಿಗುವುದು ಗಗನಕುಸುಮವಾಗಿರುವ ನಡುವೆ ಕರ್ನಾಟಕ ಜನಸೈನ್ಯ ಸಂಘಟನೆಯ ಉಚಿತ ಆಂಬುಲೆನ್ಸ್ ಸೇವೆ ಶ್ಲಾಘನೀಯವಾಗಿದೆ. ಇಂತಹ  ಬಾಕ್ಸ್ ಸಹಾಯವಾಣಿ 9008327277