2019 ರಲ್ಲಿ ಎಎಂಆರ್ ಆರೋಗ್ಯ ಸಮಸ್ಯೆಗೆ ಭಾರತದಲ್ಲಿ 49.5 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಎಎಂಆರ್ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು 2050 ರ ವೇಳೆಗೆ ವಾರ್ಷಿಕವಾಗಿ 1 ಕೋಟಿ ಸಾವುಗಳಿಗೆ ಕಾರಣವಾಗಬಹುದು.
ಎಎಂಆರ್ ಒಂದು ಮನುಕುಲಕ್ಕೆ ಗಮನಾರ್ಹ ಬೆದರಿಕೆಯಾಗಿದ್ದು, ಇದು “ಏಕ ಮಾದರಿಯ ಆರೋಗ್ಯ’ ಮತ್ತು ಆಂಟಿಮೈಕ್ರೊಬಿಯಲ್ ನಿರ್ವಹಣೆಯ ಅಗತ್ಯವನ್ನು ಒತ್ತಿಹೇಳುತ್ತದೆ.
ಬೆಂಗಳೂರು: ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಮನುಕುಲ, ಪರಿಸರ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ ನಿರ್ಣಾಯಕ ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಾಗತಿಕವಾಗಿ ಮನುಷ್ಯರು ಎದುರಿಸುತ್ತಿರುವ ಅಗ್ರ 10 ಆರೋಗ್ಯ ಸವಾಲುಗಳಲ್ಲಿ ಒಂದಾಗಿದೆ.ಈ ವಿಷಯದ ಕುರಿತು ಬೆಂಗಳೂರಿನಲ್ಲಿ ನಡೆದ ‘ಯೂರೊಏಷ್ಯಾ 2024 ಸಮ್ಮೇಳನದಲ್ಲಿ’ ಪ್ರಮುಖ ನಿರ್ಣಾಯಕ ಆರೈಕೆ ತಜ್ಞರ ಭಾಗವಹಿಸಿದ್ದರು. ಅವರು ಭಾರತದಲ್ಲಿ ಹೆಚ್ಚುತ್ತಿರುವ ಎಎಂಆರ್ ಹರಡುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಪ್ರಮುಖ ಸಾಂಕ್ರಾಮಿಕ ರೋಗ ತಜ್ಞರು / ತೀವ್ರ ನಿಗಾ ತಜ್ಞರಾದ ಡಾ.ಭರತ್ ಜಗಿಯಾಸಿ, ಡಾ.ಪ್ರದೀಪ್ ಭಟ್ಟಾಚಾರ್ಯ, ಡಾ.ಪ್ರದೀಪ್ ರಂಗಪ್ಪ ಮತ್ತು ಡಾ.ರಾಜೇಶ್ ಪಾಂಡೆ ಈ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಪರಿಣತರ ತಂಡ ಎಎಂಆರ್ ವಿರುದ್ಧದ ಹೋರಾಟ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಎಎಂಆರ್ ಅನ್ನು ಪರಿಣಾಮಕಾರಿಯಾಗಿ ಪರಿಹರಿಸಲು, ಬಹುಮುಖಿ ವಿಧಾನ ಅಳವಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಇದು ನಿರಂತರ ಅನುಸರಣೆ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಗಳು, ಆ್ಯಂಟಬಯಾಟಿಕ್ ನಿರ್ವಹಣೆ ಮತ್ತು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ ಅನುಷ್ಠಾನ ವನ್ನು ಒಳಗೊಂಡಿರುತ್ತದೆ ಎಂಬ ಅಭಿಪ್ರಾಯ ಸಮ್ಮೇಳನದಲ್ಲಿ ವ್ಯಕ್ತಗೊಂಡಿತು.
ಗೋಷ್ಠಿಯಲ್ಲಿ ಮಾಧ್ಯಗಳನ್ನು ಉದ್ದೇಶಿದ ಮಾತನಾಡಿದ ಐಎಸ್ಸಿಸಿಎಂನ ಪ್ರಧಾನ ಕಾರ್ಯದರ್ಶಿ ಡಾ.ಭರತ್ ಜಗಿಯಾಸಿ “ಎಎಂಆರ್ ಸಮಸ್ಯೆ ಈಗ ವಿಶ್ವಾದ್ಯಂತ ಜನರ ಸಾವಿಗೆ ಪ್ರಮುಖ ಕಾರಣವಾಗುತ್ತಿದೆ, ಇದು ಎಚ್ಐವಿ / ಏಡ್ಸ್ ಅಥವಾ ಮಲೇರಿಯಾಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾವು ತರುತ್ತಿದೆ. ಪ್ರತಿಜೀವಕಗಳಿಗೆ (ಆ್ಯಂಟಿಬಯಾಟಿಕ್ಗಳಿಗೆ) ಎದುರಾಗುತ್ತಿರುವ ಪ್ರತಿರೋಧವು ದೀರ್ಘಕಾಲ ಆಸ್ಪತ್ರೆಯಲ್ಲಿ ಉಳಿಯುವಂತೆ ಮಾಡುವುದು. ದೀರ್ಘ ಕಾಲದ ಚಿಕಿತ್ಸೆ ಪಡೆಯುವಂತೆ ಮಾಡುವುದು ಹಾಗೂ ಕೊನೆಗೆ ಮರಣಕ್ಕೂ ಕಾರಣವಾಗುತ್ತಿದೆ. ಹೀಗಾಗಿಎಎಂಆರ್ ವಿರುದ್ಧದ ಹೋರಾಟವನ್ನು ಹೆಚ್ಚು ಬಲಪಡಿಸುವ ಅವಶ್ಯಕತೆಯಿದೆ ಮತ್ತು ಜಾಗತಿಕ ಎಎಂಆರ್ನಿಂದ ಎದುರಾಗುವ ಸವಾಲನ್ನು ಅನ್ನು ನಿಭಾಯಿಸಲು ಏಕ ಮಾದರಿಯ ಆರೋಗ್ಯ ಕಾಳಜಿ ಅನುಸರಣೆ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.
ಪರಿಣಾಮಕಾರಿಯಾಗಿ ಸಾರ್ವಜನಿಕ ಅಭಿಯಾನಗಳನ್ನು ಜಾರಿಗೆ ತರುವುದರಿಂದ ಸೂಚಿಸಲಾದ ಆಂಟಿಮೈಕ್ರೊಬಿಯಲ್ ಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗುತ್ತದೆ. ಶುಚಿತ್ವದ ಕ್ರಮಗಳನ್ನು ಸುಧಾರಿಸುವ ಮತ್ತು ಬಲಪಡಿಸುವ ಮೂಲಕ ಸೋಂಕುಗಳು ಹರಡುವುದನ್ನು ತಡೆಯುವುದು ಅವಶ್ಯಕ. ಆಂಟಿಮೈಕ್ರೊಬಿಯಲ್ ನಿರ್ವಹಣೆ ಕಾರ್ಯಕ್ರಮಗಳು ಸೂಕ್ತ ಆಂಟಿಮೈಕ್ರೊಬಿಯಲ್ ಬಳಕೆಗೆ ಅನುವು ಮಾಡುತ್ತದೆ. ಈ ಕಾರ್ಯಕ್ರಮಗಳು ಗಮನಾರ್ಹವಾಗಿ ಪರಿಣಾಮ ಬೀರಬಹುದು, ಇದು ಸುಧಾರಿತ ಆಂಟಿಮೈಕ್ರೊಬಿಯಲ್ ಬಳಕೆಗೆ ಕಾರಣವಾಗಲಿದೆ ಮತ್ತು ಸೋಂಕಿನ ಪ್ರಮಾಣ ಇಳಿಸುವ ಜತೆಗೆ ರೋಗಿಗೆ ಆಗುವ ವೆಚ್ಚವನ್ನು ಕಡಿಮೆ ಮಾಡುತ್ತದೆ, ಅಲ್ಲದೆ, ಐಸಿಯು ವೈದ್ಯರು ಆಸ್ಪತ್ರೆಯ ಆ್ಯಂಟಿಬಯಾಟಿಕ್ ನಿರ್ವಹಣಾ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದರು.
ಎಎಂಆರ್ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಎಎಂಆರ್ ಅನ್ನು ನಿಭಾಯಿಸಲು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅನಿವಾರ್ಯತೆ ಎದುರಾಗಿದೆ. ಪ್ರತಿ ವರ್ಷ, ಎಎಂಆರ್ ನಿಂದಾಗಿ ಲಕ್ಷಾಂತರ ಜನರು ತಮ್ಮ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಾರೆ 2019ರ ಒಂದು ವರ್ಷದಲ್ಲೇ ಎಎಂಆರ್ ಭಾರತದಲ್ಲಿ 49. 5 ಲಕ್ಷ ಜನರ ಸಾವಿಗೆ ಕಾರಣವಾಗಿದೆ. 2050 ರ ವೇಳೆಗೆ ವಾರ್ಷಿಕವಾಗಿ 10 ಮಿಲಿಯನ್ ಸಾವುಗಳು ಸಂಭವಿಸಬಹುದು. .8 ಆ್ಯಂಟಿಬಯಾಟಿಕ್ ಪ್ರತಿರೋಧವು “ಸೂಪರ್ ಬಗ್ಸ್” ಎಂದು ಕರೆಯಲಾಗುವ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸಿದೆ, ಇದು ಆರೋಗ್ಯ ವ್ಯವಸ್ಥೆಗಳು ಮತ್ತು ದೇಶಗಳ ಆರ್ಥಿಕತೆಯ ಮೇಲೆ ಅಪಾರ ಒತ್ತಡವನ್ನುಂಟು ಮಾಡುತ್ತದೆ. ಇದು ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವುಗಳನ್ನು ಹೆಚ್ಚಿಸಲಿದೆ.
ಎಎಂಆರ್ಗೆ ಕಾರಣವಾಗುವ ಅಂಶಗಳನ್ನು ವಿವರಿಸಿದ ಐಎಸ್ಸಿಸಿಎಂನ ಸಂಶೋಧನಾ ಸಮಿತಿಯ ಅಧ್ಯಕ್ಷ ಡಾ.ಪ್ರದೀಪ್ ಭಟ್ಟಾಚಾರ್ಯ, ಚಿಕ್ಕ ಮಕ್ಕಳು ಮತ್ತು 60ವರ್ಷಕ್ಕಿಂತ ದಾಟಿದವರು , ಹೃದ್ರೋಗ, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ), ಪಾರ್ಶ್ವವಾಯು, ಅಲ್ಝೈಮರ್ ಕಾಯಿಲೆ, ಮಧುಮೇಹ, ಮೂತ್ರಪಿಂಡದ ಕಾಯಿಲೆ, ಕ್ಯಾನ್ಸರ್ ಮತ್ತು ಸ್ವಯಂ ನಿರೋಧಕ ಪರಿಸ್ಥಿತಿಗಳನ್ನು ಹೊಂದಿರುವ ಜನರು ಸೇರಿದಂತೆ ಪ್ರತಿಯೊಬ್ಬರೂ ನಿರೋಧಕ ರೋಗಕಾರಕದಿಂದ ಉಂಟಾಗುವ ಸೋಂಕಿನ ಅಪಾಯದಲ್ಲಿದ್ದಾರೆ. ಆ್ಯಂಟಿಬಯಾಟಿಕ್ಗಳ ಅತಿಯಾದ ಹಾಗೂ ದುರ್ಬಳಕೆಯು ಸಮಸ್ಯೆಗೆ ಮೂಲಕ ಕಾರಣವಾಗಿದ್ದು ಸಾಮಾನ್ಯ ಸೋಂಕುಗಳ ಚಿಕಿತ್ಸೆಯನ್ನು ಸಂಕೀರ್ಣಗೊಳಿಸುತ್ತದೆ ಮತ್ತು ವ್ಯತಿರಿಕ್ತ ಫಲಿತಾಂಶಗಳು ಮತ್ತು ಸಾವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಎಎಂಆರ್ ಬಗ್ಗೆ ಸಾಮಾನ್ಯ ಜನರು ಮತ್ತು ರೋಗಿಗಳಲ್ಲಿ ಇರುವ ಸೀಮಿತ ಅರಿವು, ಸಮಸ್ಯೆಯ ವಿರುದ್ಧದ ಕ್ರಮಗಳಿಗೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ.
ಎಎಂಆರ್ ವಿರುದ್ಧ ಇರುವ ಭವಿಷ್ಯದ ಸುರಕ್ಷಿತ ಪರಿಹಾರಗಳ ಬಗ್ಗೆ ಮಾತನಾಡಿದ ಪ್ರಖ್ಯಾತ ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಮತ್ತು ಐಎಸ್ಸಿಸಿಎಂನ ಮಾಜಿ ಕಾರ್ಯದರ್ಶಿ ಡಾ.ಪ್ರದೀಪ್ ರಂಗಪ್ಪ, “ಆಂಟಿಮೈಕ್ರೊಬಿಯಲ್ಗಳನ್ನು ತೆಗೆದುಕೊಳ್ಳದಿರುವುದು ಉದ್ದೇಶಪೂರ್ವಕವಾಗಿರುತ್ತದೆ. ಹೇಗೆಂದರೆ ಅವುಗಳನ್ನು ಆಗಾಗ್ಗೆ, ಅನಗತ್ಯವಾಗಿ ತೆಗೆದುಕೊಳ್ಳುವುದು ಅಥವಾ ಚಿಕಿತ್ಸೆಯ ಕೋರ್ಸ್ ಅನ್ನು ಪೂರ್ಣಗೊಳಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ರೋಗಕಾರಕವು ಅದೇ ಆಂಟಿಮೈಕ್ರೊಬಿಯಲ್ಗಳಿಗೆ ಹೆಚ್ಚು ಒಡ್ಡಿಕೊಂಡಷ್ಟೂ, ಔಷಧವನ್ನು ಮೀರಿಸುತ್ತದೆ ಮತ್ತು ಬದುಕುಳಿಯುವುದು ಹೇಗೆ ಎಂಬುದನ್ನು ಕಲಿಯುವ ಸಾಧ್ಯತೆ ಹೆಚ್ಚಿದೆ.
1940 ರ ದಶಕದಲ್ಲಿ ವ್ಯಾಪಕವಾಗಿ ಬಳಸಲಾದ ಮೊದಲ ಆಂಟಿಮೈಕ್ರೊಬಿಯಲ್ (ಆ್ಯಂಟಿಬಯಾಟಿಕ್ ಪೆನ್ಸಿಲಿನ್ ನಿಂದ ಪ್ರಾರಂಭಿಸಿ) ಲಕ್ಷಾಂತರ ಜೀವಗಳನ್ನು ಉಳಿಸಿದೆ. ಮಾರುಕಟ್ಟೆಯಲ್ಲಿ ಹೊಸ ಆ್ಯಂಟಿಬಯಾಟಿಕ್ಗಳು ಬರದೇ ಹೋದರೆ ನಾವು ಆಂಟಿಬಯಾಟಿಕ್ ಪೂರ್ವ ಯುಗಕ್ಕೆ ಮರಳುವ ಅಪಾಯವಿದ್ದು, ಸರಳ ಸೋಂಕುಗಳು ಸಹ ಮಾರಣಾಂತಿಕವಾಗಲಿದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ನಿರೋಧಕ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗಾಗಿ, ರೋಗಿಗಳಿಗೆ ಪರಿಣಾಮಕಾರಿ ಮತ್ತು ಕೈಗೆಟುಕುವ ಆ್ಯಂಟಿಬಯಾಟಿಕ್ಗಳು ಇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕ ಎಂದು ಹೇಳಿದರು.
ದಕ್ಷಿಣ ಏಷ್ಯಾದ ಖ್ಯಾತ ತೀವ್ರ ನಿಗಾ ತಜ್ಞ, ಬಿಎಲ್ಕೆ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ನಿರ್ದೇಶಕ ಮತ್ತು ಕ್ರಿಟಿಕಲ್ ಕೇರ್ನ ಎಚ್ಒಡಿ ಡಾ.ರಾಜೇಶ್ ಪಾಂಡೆ ಮಾತನಾಡಿ “ಎಎಂಆರ್ ಭವಿಷ್ಯವು ತುರ್ತು ಗಮನವನ್ನು ಬೇಡುವ ಬಿಕ್ಕಟ್ಟಾಗಿದೆ. ಎಎಂಆರ್ ಅನ್ನು ಪರಿಹರಿಸುವಲ್ಲಿನ ನಿರ್ಲಕ್ಷ್ಯದಿಂದಾಗಿ, ಆ ದೇಶದ ಆರೋಗ್ಯಕ್ಕೆ ಅಂದರೆ ಶೀತ, ಜ್ವರ ಮತ್ತು ವೈರಲ್ ಜ್ವರದಂತಹ ಸಾಮಾನ್ಯ ಕಾಯಿಲೆಗಳನ್ನು ಎದುರಿಸುವ ಸಾಮರ್ಥ್ಯಕ್ಕೆ ಧಕ್ಕೆಯುಂಟು ಮಾಡುತ್ತದೆ. ಒತ್ತಡದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ರೋಗಿಗಳು ಮತ್ತು ಸಾರ್ವಜನಿಕರಲ್ಲಿ ಆ್ಯಂಟಿಬಯಾಟಿಕ್ ಬಳಕೆಯ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಬೇಕಾಗಿದೆ.
ಹೊಸ ಆಂಟಿಮೈಕ್ರೊಬಿಯಲ್ ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಹೆಚ್ಚಿಸು ವುದು ಎಎಂಆರ್ ಬಿಕ್ಕಟ್ಟನ್ನು ನಿವಾರಿ ಸುವ ಪ್ರಮುಖ ತಂತ್ರಗಳಲ್ಲಿ ಒಂ ದು. ಎಎಂಆರ್ ಅನ್ನು ಯಶಸ್ವಿಯಾಗಿ ಎದುರಿಸಲು ಮತ್ತು ನಿಭಾಯಿಸಲು ಸಮಗ್ರ ಕಾರ್ಯತಂತ್ರಗಳನ್ನು ಅಭಿವೃದ್ಧಿ ಪಡಿಸಬೇಕಾದರೆ ಸರ್ಕಾರಿ ಸಂಸ್ಥೆಗಳು, ಔಷಧ ಕಂಪನಿಗಳು, ಆರೋಗ್ಯ ಸೇವೆ ಪೂರೈಕೆದಾರರ ಸಹಯೋಗವು ಅತ್ಯಗತ್ಯ. ಆ್ಯಂಟಿಬಯಾಟಿಕ್ಗಳು ನ್ಯಾಯಯುತವಾಗಿ ಶಿಫಾರಸು ಮಾಡಲು ಮತ್ತು ಭವಿಷ್ಯದ ಪೀಳಿಗೆಗೆ ಆ್ಯಂಟಿಬಯಾಟಿಕ್ಗಳು ರಕ್ಷಿಸಬೇಕು. ಭಾರತ ಹಾಗೂ ಜಾಗತಿಕವಾಗಿ ಸಾರ್ವಜನಿಕ ಆರೋಗ್ಯದ ಮೇಲಿನ ಪರಿಣಾಮಗಳನ್ನು ಉಂಟುಮಾಡುವಂಥ ಚಿಕಿತ್ಸೆ ನೀಡಲಾಗದ ಸೋಂಕುಗಳ ಹೆಚ್ಚಳವನ್ನು ತಡೆಗಟ್ಟಲು ಇದು ಸೂಕ್ತ ಸಮಯ ಎಂದು ಹೇಳಿದರು.