Monday, 28th October 2024

ಸಿದ್ದರಾಮೋತ್ಸವವಲ್ಲ, ಅಮೃತ ಮಹೋತ್ಸವ

ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನೋತ್ಸವ ಆಚರಿಸುತ್ತಿರುವುದು ಸಿದ್ದರಾಮೋತ್ಸವ ವಲ್ಲ, ಅಮೃತ ಮಹೋತ್ಸವ ಎಂದು ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯನವರ ಜನ್ಮ ದಿನಾಚರಣೆ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರ ರಾಜಕೀಯ ಜೀವನದ ಪಯಣವನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಹಿನ್ನಲೆಯಲ್ಲಿ ದಾವಣಗೆರೆ ಯಲ್ಲಿ ಆಗಸ್ಟ್ ೩ರಂದು ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಸೇರಿದಂತೆ ಇತರರ ಸಹಯೋಗದಲ್ಲಿ ನಡೆಯುವ ಈ ಹುಟ್ಟಹಬ್ಬವನ್ನು ಬಡಜನರಿಗೆ ಸಿದ್ದರಾಮಯ್ಯ ನೀಡಿದ ಕೊಡುಗೆಗಳನ್ನು ಮೆಲುಕು ಹಾಕಲಾಗುವುದು. ಈ ಸಮಾರಂಭ ಸಿದ್ದರಾಮಯ್ಯನವರ ಅಭಿಮಾನಿಗಳು, ಬಡ ಮತ್ತು ಹಿಂದುಳಿದ ಸಮು ದಾಯದ ಜನರ ನೇತೃತ್ವದಲ್ಲಿ ನಡೆಯಲಿದೆ, ಸಿದ್ದರಾಮೋತ್ಸವ ಎಂದು ಕೆಲವರು ಬಿಂಬಿಸಲು ಹೊರಟಿದ್ದಾರೆ, ಅದು ಉತ್ಸವ ಅಲ್ಲ, ಹುಟ್ಟು ಹಬ್ಬ ಆಚರಣೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯನವರನ್ನು ಕಷ್ಟಪಟ್ಟು ಈ ಹುಟ್ಟು ಹಬ್ಬದ ಆಚರಣೆಗೆ ಒಪ್ಪಿಸಲಾಗಿದೆ, ಸ್ವಾತಂತ್ರ‍್ಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು ಸಮಾರಂಭದಲ್ಲಿ ಭಾಗವಹಿಸಲಿದ್ದು, ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ತಂದುಕೊಟ್ಟ ಬಗೆ ಮತ್ತು ಮುಂದೆ ಯಾವ ಕರ‍್ಯಕ್ರಮಗಳನ್ನು ಕಾಂಗ್ರೆಸ್ ಮಾಡಲಿದೆ ಎಂಬುದನ್ನು ತಿಳಿಸಲಾಗುವುದು ಎಂದರು.

ಹುಟ್ಟು ಹಬ್ಬಕ್ಕೆ ಕಾಂಗ್ರೆಸ್ ಎಐಸಿಸಿ ಉಪಾದ್ಯಕ್ಷರಾದ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯರಾದ ಮಲ್ಲಿಕರ‍್ಜುನ್ ರ‍್ಗೆ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಂತಾದವರು ಭಾಗವಹಿಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಳ್ಳಕೆರೆ ಶಾಸಕರಾದ ರಘುರ‍್ತಿ , ಚಿತ್ರರ‍್ಗಾದ ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಡಾ.ರಪೀಕ್ ಅಹಮ್ಮದ್, ಟಿ.ಆರ್.ಆಂಜಿನಪ್ಪ, ಎಸ್.ನಾಗಣ್ಣ, ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್, ಮಾಜಿ ಜಿ.ಪಂ.ಸದಸ್ಯ ವಿ.ವೆಂಕಟೇಶ್, ಶಶಿ ಹುಲಿಕುಂಟೆ ಉಪಸ್ಥಿತರಿದ್ದರು.

***

ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನ ಆಚರಣೆಯನ್ನು ಸಿದ್ದರಾಮೋತ್ಸವ ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಇದು ಅಮೃತ ಮಹೋತ್ಸವ. ಈ ಕರ‍್ಯಕ್ರಮ ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ.

ಕೆ.ಎನ್.ರಾಜಣ್ಣ, ಮಾಜಿ ಶಾಸಕ.