Saturday, 14th December 2024

ಶಿವಮೊಗ್ಗದಲ್ಲಿ ‘ಅಮೃತಧಾರೆ’ ಆರಂಭ

ಶಿವಮೊಗ್ಗ: ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ ‘ಅಮೃತಧಾರೆ’ಯನ್ನು ಈಗ ಶಿವಮೊಗ್ಗದಲ್ಲಿ ಆರಂಭಿಸಲಾಗಿದೆ.

ಕರ್ನಾಟಕ ಸರ್ಕಾರದ ಮೊದಲ ಈ ಮಾದರಿ ಬ್ಯಾಂಕ್‌ ಬೆಂಗಳೂರಿ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರಾರಂಭವಾಗಿತ್ತು.

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ತಾಯಿ ಎದೆ ಹಾಲು ಸಂಗ್ರಹಣೆ ಮತ್ತು ವಿತರಣೆ ಕೇಂದ್ರ ‘ಅಮೃತಧಾರೆ’ ತೆರೆಯಲಾಗಿದೆ. ಈ ಬ್ಯಾಂಕ್ ಅನ್ನು ಸಿಮ್ಸ್ ನಿರ್ದೇಶಕ ಡಾ. ವಿ. ವಿರೂಪಾಕ್ಷ ಉದ್ಘಾಟಿಸಿದರು.

ಎಲ್ಲಾ ಆರೋಗ್ಯವಂತ ತಾಯಿಯಂದಿರು ತಮ್ಮ ಮಗುವಿಗೆ ಉಣಿಸಿ ಹೆಚ್ಚಾದ ಎದೆ ಹಾಲನ್ನು ‘ಅಮೃತಧಾರೆ’ ಸಂಗ್ರಹ ಕೇಂದ್ರಕ್ಕೆ ದಾನ ನೀಡಬಹು ದಾಗಿದ್ದು, ಕೆಲವು ತಾಯಂದಿರಲ್ಲಿ ಹಾಲು ಉತ್ಪತ್ತಿಯಾಗದಿದ್ದರೆ, ತೀವ್ರ ನಿಗಾ ಘಟಕದ ಕೇಂದ್ರದಲ್ಲಿ ದಾಖಲಾದ ತಾಯಿಯ ಮಗುವಿಗೆ ಅಥವಾ ನವಜಾತ ಶಿಶು ಕೇಂದ್ರದಲ್ಲಿದ್ದ ಮಗುವಿಗೆ ಅಥವಾ ಹೆರಿಗೆ ಸಮಯದಲ್ಲಿ ತಾಯಿ ಮೃತರಾದ ಮಗುವಿಗೆ ಹಾಲನ್ನುಈ ಬ್ಯಾಂಕ್ ಮೂಲಕ ಉಪಯೋಗ ಮಾಡಿಕೊಳ್ಳಲಾಗುತ್ತದೆ.

ಎದೆಹಾಲು ನೀಡುವುದರಿಂದ ನವಜಾತ ಶಿಶುವಿಗೆ ನೀಡುವ ಫಾರ್ಮುಲ ಫೀಡ್ ತಪ್ಪಿಸಬಹುದಾಗಿದೆ. ಇದರಿಂದ ಕರುಳಿನ ಬೇನೆ, ನಂಜು, ಕಣ್ಣಿನ ದೋಷ, ಮಕ್ಕಳಿಗೆ ಆಗುವ ಸಂದರ್ಭ ಹೆಚ್ಚಾಗದಂತೆ ತಡೆಯಬಹುದು. ಎದೆಹಾಲು ನೀಡುವುದರಿಂದ ಮಗುವಿಗೆ ಪೋಷಕಾಂಶಗಳು, ಮೆದುಳು ಚುರುಕು ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ.