Saturday, 14th December 2024

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಟ್ಟಡಕ್ಕೆ ಮನವಿ

ಮಾನವಿ: ಬಹುದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಟನ ಚಟುವಟಿಕೆಗಳಿಗೆ ಕಟ್ಟಡ ಇಲ್ಲದೇ ಪರಿತಪಿಸುವಂತಾಗಿದೆ. ಮಾನ್ವಿ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಚಟುವಟಿಕೆಗಾಗಿ ಕಟ್ಟಡ ನೀಡುವಂತೆ ಅಂಗನವಾಡಿ ಕಾರ್ಯಕರ್ತರ ಸಂಘದಿಂದ ಶಾಸಕರಿಗೆ ಮನವಿ ಮಾಡಿದರು.

ಈಗಾಗಲೇ ತಾವು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಅದರಂತೆಯೇ ನಮ್ಮ ಬಹುಜನರ ಇಚ್ಛೆಗೆಯಂತೆ ಸಧ್ಯದ ತಮ್ಮ ಅಧಿಕಾರದ ಅವಧಿಯಲ್ಲಿ ಮಾನ್ವಿ ತಾಲೂಕಿ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಭೆ ನಡೆಸಲು ಹಾಗೂ ಸಂಘದ ಚಟುವಟಿಕೆಗಾಗಿ ಯಾವುದೇ ಕಟ್ಟಡಗಳು ಇರುವುದಿಲ್ಲ, ತಾವು ಶಾಸಕರಾದಾಗ ನಾವು ಸನ್ಮಾನಿಲು ಬಂದು ತಮ್ಮಲ್ಲಿ ಕಟ್ಟಡ ವ್ಯವಸ್ಥೆಯ ಬಗ್ಗೆ ಸಹಕರಿಸಿರಿ ಎಂದು ಮನವಿ ಪತ್ರ ಸಲ್ಲಿಸಿದರು..

ತಾವುಗಳು ಅದಕ್ಕೆ ಮುಂದಿನ ದಿನದಲ್ಲಿ ನೋಡೋಣ ಎಂದು ಬರವಸೆಯನ್ನು ನೀಡಿದ್ದು ಇರುತ್ತದೆ. ನಮ್ಮ ಸಂಘಟನೆಗಾಗಿ ಯಾವುದಾದರೂ ಸರ್ಕಾರಿ ಕಟ್ಟಡ ಅಥವಾ ಖಾಲಿ ನಿವೇಶನ ಒಗಿಸಿದಲ್ಲಿ ನಾವು ನಿಮಗೆ ಚಿರಋಣಿಯಾಗಿರುತ್ತೇವೆ ಎಂದು ಕಾರ್ಯ ಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ (ಎ.ಐ.ಟಿ.ಯು.ಸಿ) ಮಾನ್ವಿ ತಾಲೂಕ ಕಳಕಳಿಯಿಂದ ಮನವಿ ಮಾಡುತ್ತದೆ ಎಂದರು..

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಕಾಂ ಎಂ.ಬಿ. ಸಿದ್ರಾಮಯ್ಯಸ್ವಾಮಿ ಅಧ್ಯಕ್ಷರು, ಕಾಂಚನ್ನಮ್ಮ ಗುತ್ತೇದಾರ ಪ್ರಧಾನ ಕಾರ್ಯದರ್ಶಿ, ಕಾಂ ಸಂಗಯ್ಯಸ್ವಾಮಿ ಚಿಂಚರಕಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.